
ಮೊದಲ ಟೆಸ್ಟ್ ಗೂ ಮೊದಲು ಆಸೀಸ್ ಗೆ ಆಘಾತ, ಇನ್ನೂ ಗುಣಮುಖರಾಗಿಲ್ಲ ಆಲ್ ರೌಂಡರ್
Team Udayavani, Feb 7, 2023, 4:55 PM IST

ನಾಗ್ಪುರ: ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಬಾರ್ಡರ್- ಗಾವಸ್ಕರ್ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಆಗಮಿಸಿದ್ದು, ಸಿದ್ದತೆಯಲ್ಲಿ ತೊಡಗಿದೆ. ಈಗಾಗಲೇ ಹಲವು ಆಟಗಾರರ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಸೀಸ್ ತಂಡಕ್ಕೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ.
ತಂಡದ ಪ್ರಮುಖ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅವರು ಇನ್ನೂ ಗುಣಮುಖರಾಗಿಲ್ಲ. ಹೀಗಾಗಿ ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಸಾಧ್ಯತೆಯಿಲ್ಲ ಎಂದು ಉಪನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.
“ಗ್ರೀನ್ ನೆಟ್ಸ್ ನಲ್ಲಿ ವೇಗದ ಬೌಲರ್‌ಗಳನ್ನು ಸಹ ಎದುರಿಸಿಲ್ಲ ಆದ್ದರಿಂದ ಅವರು ಮೊದಲನೇ ಟೆಸ್ಟ್ ಆಡುವ ಸಾಧ್ಯತೆ ತುಂಬಾ ಕಡಿಮೆ” ಎಂದು ಸ್ಮಿತ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದನ್ನೂ ಓದಿ:2,000 ವರ್ಷಗಳ ಹಿಂದೆ ಬದುಕಿದ್ದ ನಬಾಟಿಯನ್ ಮಹಿಳೆಯ ಮುಖ ಅನಾವರಣಗೊಳಿಸಿದ ಸೌದಿ ಅರೇಬಿಯಾ
ವೇಗಿ ಜೋಶ್ ಹೇಜಲ್ ವುಡ್ ಗೆ ಆಗಿರುವ ಗಾಯವು ಆಸೀಸ್ ಗೆ ದೊಡ್ಡ ನಷ್ಟವಾಗಿದೆ. ಆದರೆ ಲ್ಯಾನ್ಸ್ ಮೋರಿಸ್ ಮತ್ತು ಸ್ಕಾಟ್ ಬೋಲ್ಯಾಂಡ್ ಅವರಂತಹ ಆಟಗಾರರು ಈ ನಷ್ಟವನ್ನು ತುಂಬಬಹುದು. ಏಕೆಂದರೆ ಅವರ ಲೆಂತ್ ಮತ್ತು ವೇಗವು ಈ ರೀತಿಯ ಪಿಚ್ ಗಳಿಗೆ ಸರಿಹೊಂದುತ್ತದೆ ಎಂದು ಸ್ಮಿತ್ ಹೇಳಿದರು.
ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾ), ಆಶ್ಟನ್ ಆ್ಯಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್ಕಾಂಬ್, ಜೋಶ್ ಹೇಜಲ್ ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೇನ್, ನಾಥನ್ ಲಿಯಾನ್, ಲ್ಯಾನ್ಸ್ ಮಾರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ ಶಾ, ಸ್ಟೀವ್ ಸ್ಮಿತ್ (ಉ.ನಾ), ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೋಷಿಯಲ್ ಮೀಡಿಯಾದಲ್ಲಿ ತಮ್ಮ 10 ನೇ ತರಗತಿ ಅಂಕಪಟ್ಟಿ ಹಂಚಿಕೊಂಡ ಕಿಂಗ್ ಕೊಹ್ಲಿ!

ಹೈದರಾಬಾದ್ ತಂಡದ ನಾಯಕತ್ವ ಬದಲಾವಣೆ? ಮಾಕ್ರಮ್ ಬದಲು ಕಾಣಸಿಕೊಂಡ ಭುವನೇಶ್ವರ್

ಈ ಬಾರಿಯಾದರೂ ಅರ್ಜುನ್ ತೆಂಡೂಲ್ಕರ್ ಗೆ ಸಿಗುತ್ತಾ ಚಾನ್ಸ್?: ಉತ್ತರ ನೀಡಿದ ರೋಹಿತ್

ಐಪಿಎಲ್ 2023: ಆರ್ ಸಿಬಿಯ ಮೊದಲ ಪಂದ್ಯಕ್ಕೆ ಲಭ್ಯವಿಲ್ಲ ಹೇಜಲ್ವುಡ್, ಮ್ಯಾಕ್ಸವೆಲ್

ಮುಂಬೈನಲ್ಲಿ ವಿಶ್ವಕಪ್ ಸೆಮಿಫೈನಲ್ ಮ್ಯಾಚ್; ಭಾರತ- ಪಾಕ್ ಪಂದ್ಯ ನಡೆಯುವುದು ಎಲ್ಲಿ?