ಇನ್ನೂ ಎರಡು ವಿಶ್ವಕಪ್ ಆಡಿದ ಬಳಿಕವೇ ನಿವೃತ್ತಿ: ಕ್ರಿಸ್ ಗೇಲ್
Team Udayavani, Jan 2, 2021, 8:16 AM IST
ದುಬಾೖ: ಸದ್ಯ ಕ್ರಿಕೆಟ್ ನಿವೃತ್ತಿಯ ಯಾವುದೇ ಯೋಜನೆ ಇಲ್ಲ ಎಂದಿರುವ ವೆಸ್ಟ್ ಇಂಡೀಸ್ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್, 2021ರ ಟಿ20 ವಿಶ್ವಕಪ್ ಜತೆಗೆ ಆಸ್ಟ್ರೇಲಿಯದಲ್ಲಿ ನಡೆಯಲಿರುವ 2022ರ ಟಿ20 ವಿಶ್ವಕಪ್ನಲ್ಲೂ ಆಡುವುದಾಗಿ ಹೇಳಿದ್ದಾರೆ.
“ಸದ್ಯ ನಿವೃತ್ತಿಯ ಆಲೋಚನೆ ಇಲ್ಲ. ನನ್ನಲ್ಲಿ ಇನ್ನೂ 5 ವರ್ಷ ಆಡುವ ಉತ್ಸಾಹವಿದೆ. ನನ್ನ ಮುಂದೆ ಇನ್ನೂ ಎರಡು ವಿಶ್ವಕಪ್ಗಳಿವೆ. ಇದರಲ್ಲಿ ಆಡಿ ಹಲವು ದಾಖಲೆಗಳನ್ನು ಬರೆದೇ ನಾನು ಕ್ರಿಕೆಟ್ಗೆ ವಿದಾಯ ಹೇಳುತ್ತೇನೆ’ ಎಂದು ಗೇಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
41ರ ಹರೆಯದ ಕ್ರಿಸ್ ಗೇಲ್ ಅವರು 45 ವರ್ಷದ ಒಳಗೆ ನಿವೃತ್ತಿಯ ಯೋಚನೆಯೇ ಇಲ್ಲ ಎಂದಿದ್ದಾರೆ.