ಟೇಬಲ್ ಟೆನಿಸ್: ಪುರುಷರ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಫೈನಲ್‌ಗೇರಿದ ಶರತ್ ತಂಡ
ಇನ್ನೆರಡು ಪದಕ ಖಚಿತ
Team Udayavani, Aug 6, 2022, 10:05 PM IST
ಬರ್ಮಿಂಗ್‌ಹ್ಯಾಮ್: ತಾರಾ ಆಟಗಾರ ಅಚಂತ ಶರತ್ ಕಮಲ್ ಅವರ ಅಮೋಘ ಆಟ ಮುಂದುವರಿದಿದೆ. ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಅವರು ಇನ್ನೆರಡು ಪದಕ ಖಚಿತಪಡಿಸಿದ್ದಾರೆ. ಅಚಂತ ಪುರುಷರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ವಿಭಾಗದಲ್ಲಿ ಫೈನಲಿಗೇರಿದ ಸಾಧನೆ ಮಾಡಿದ್ದಾರೆ.
ಜಿ.ಸಥಿಯನ್ ಜತೆಗೂಡಿ ಡಬಲ್ಸ್‌ನಲ್ಲಿ ಆಡುತ್ತಿರುವ ಶರತ್ ಆಸ್ಟ್ರೇಲಿಯದ ನಿಕೋಲಾಸ್ ಲಮ್ ಮತ್ತು ಮಿನ್‌ಹ್ಯುಂಗ್ ಜೀ ಅವರನ್ನು 3-2 ಅಂತರದಿಂದ ರೋಮಾಂಚಕವಾಗಿ ಉರುಳಿಸಿ ಫೈನಲಿಗೇರಿದರು. ಚಿನ್ನದ ಪದಕಕ್ಕಾಗಿ ನಡೆಯುವ ಫೈನಲ್ ಹೋರಾಟದಲ್ಲಿ ಅವರು ಇಂಗ್ಲೆಂಡಿನ ಪಾಲ್ ಡ್ರಿಂಖಲ್ ಮತ್ತು ಲಿಯಮ್ ಪಿಚ್‌ಫೋರ್ಡ್ ಅವರನ್ನು ಎದುರಿಸಲಿದ್ದಾರೆ.
ಯುವ ತಾರೆ ಶ್ರೀಜಾ ಅಕುಲಾ ಅವರ ಜತೆಗೂಡಿ ಮಿಶ್ರ ಡಬಲ್ಸ್‌ನಲ್ಲಿ ಆಡಿದ ಶರತ್ ಆಸ್ಟ್ರೇಲಿಯದ ಜೋಡಿಯನ್ನು ಸೋಲಿಸಿದರು. ಫೈನಲ್‌ನಲ್ಲಿ ಅವರು ಮಲೇಷ್ಯಾದ ಕರೆನ್ ಲಿನ್ ಮತ್ತು ಚೂಂಗ್ ಜಯೆನ್ ಅವರ ಸವಾಲನ್ನು ಎದುರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೂಡಿಗೆರೆ: ಜೂಜಾಟ ಅಡ್ಡೆ ಮೇಲೆ ಪೊಲೀಸ್ ದಾಳಿ : ಆರು ಮಂದಿ ಬಂಧನ, ನಗದು ವಶ
ಈಜಲು ಹೋಗಿ ನಿರುಪಾಲಾದ ಇಂಜಿನಿಯರ್ : ಎರಡನೇ ದಿನಕ್ಕೆ ಮುಂದುವರೆದ ಶೋಧ ಕಾರ್ಯ
ರಾಯಚೂರನ್ನು ತೆಲಂಗಾಣದೊಳಕ್ಕೆ ವಿಲೀನಗೊಳಿಸಲು ಜನರು ಒತ್ತಾಯಿಸುತ್ತಿದ್ದಾರೆ: ಸಿಎಂ ಕೆಸಿಆರ್
ಉಡುಪಿಯಲ್ಲಿ ನಾಳೆ ಕೃಷ್ಣಾಷ್ಟಮಿ, ನಾಡಿದ್ದು ವಿಟ್ಲ ಪಿಂಡಿ
ಕಾಂಗ್ರೆಸ್ ನಾಯಕರ ಹೇಳಿಕೆ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ: ವಿಡಿಯೋ ವೈರಲ್