ಕೊಪ ಅಮೆರಿಕ ಫೈನಲ್: ಬ್ರಝಿಲ್ ವಿರುದ್ಧ ಗೆದ್ದ ಅರ್ಜೆಂಟೀನಾ, ಕೊನೆಗೂ ಕಪ್ ಎತ್ತಿದ ಮೆಸ್ಸಿ
Team Udayavani, Jul 11, 2021, 7:54 AM IST
ರಿಯೋ ಡಿ ಜನೈರೋ: ಭಾರೀ ಕುತೂಹಲ ಮೂಡಿಸಿದ್ದ ಮೆಸ್ಸಿ ವರ್ಸಸ್ ನೇಯ್ಮರ್ ಕಾಳಗದಲ್ಲಿ ಮೆಸ್ಸಿ ಜಯಭೇರಿ ಸಾಧಿಸಿದ್ದಾರೆ. ಕೊಪ ಅಮೆರಿಕಾ ಫೈನಲ್ ನಲ್ಲಿ ಬ್ರಝಿಲ್ ವಿರುದ್ಧ ಗೆದ್ದ ಅರ್ಜೆಂಟೀನಾ ತಂಡ 15ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು. ಈ ಗೆಲುವಿನೊಂದಿಗೆ ಫುಟ್ ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿಯ ಅಂತಾರಾಷ್ಟ್ರೀಯ ಕಪ್ ಎಂಬ ಮರೀಚಿಕೆ ಇಂದಿಗೆ ಕೊನೆಯಾಗಿದೆ.
ಇಲ್ಲಿನ ಮರಾಕನ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ತಂಡ 1-0 ಅಂತರದ ಗೆಲುವು ಸಾಧಿಸಿತು. 22ನೇ ನಿಮಿಷಕ್ಕೆ ಏಂಜಲ್ ಡಿ ಮರಿಯಾ ಬಾರಿಸಿದ ಗೋಲು ಮೆಸ್ಸಿ ಬಳಗಕ್ಕೆ ಮೇಲುಗೈ ನೀಡಿತು.
ಇದನ್ನೂ ಓದಿ:ಆ್ಯಶ್ಲಿ ಬಾರ್ಟಿ ಐತಿಹಾಸಿಕ ಸಾಧನೆ : ಒಂದು ಕಾಲದ ಕ್ರಿಕೆಟರ್, ಇಂದು ವಿಂಬಲ್ಡನ್ ವಿನ್ನರ್
ಕೂಟದಲ್ಲಿ ನಾಲ್ಕು ಗೋಲುಗಳೊಂದಿಗೆ ಹೆಚ್ಚು ಗೋಲು ಹೊಡೆದವರ ಪಟ್ಟಿಯಲ್ಲಿ ಜಂಟಿಯಾಗಿ ಮೊದಲ ಸ್ಥಾನವನ್ನು ಮೆಸ್ಸಿ ಪಡೆದಿದ್ದಾರೆ. ಬ್ರಝಿಲ್ ನ ದಿಗ್ಗಜ ನೇಯ್ಮರ್ ಕೂಡಾ ನಾಲ್ಕು ಗೋಲು ಬಾರಿಸಿದ್ದಾರೆ.
ಪಂದ್ಯ ಮುಗಿಯುತ್ತಿದ್ದಂತೆ ಭಾವುಕರಾಗಿದ್ದ ಮೆಸ್ಸಿಯನ್ನು ಸಹ ಆಟಗಾರರು ಎತ್ತಿಕೊಂಡು ಸಂಭ್ರಮಾಚರಣೆ ಮಾಡಿದರು. ವೈಯಕ್ತಿಕವಾಗಿ ಮತ್ತು ಕ್ಲಬ್ ಪರವಾಗಿ ಸಾಕಷ್ಟು ಹೆಸರು ಮಾಡಿರುವ ಲಿಯೋನೆಲ್ ಮೆಸ್ಸಿಗೆ ಅರ್ಜೆಂಟೀನಾ ಜೆರ್ಸಿಯಲ್ಲಿ ಇದು ಮೊದಲ ಕಪ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ