
ಟೀಂ ಇಂಡಿಯಾ ಆಟಗಾರರು ಕೋವಿಶೀಲ್ಡ್ ಲಸಿಕೆಯನ್ನು ಮಾತ್ರ ತೆಗೆದುಕೊಳ್ಳುತ್ತಿರುವುದು ಯಾಕೆ..?
Team Udayavani, May 11, 2021, 7:18 PM IST

ನವ ದೆಹಲಿ : ಟೀಮ್ ಇಂಡಿಯಾ ಆಟಗಾರರೆಲ್ಲರೂ ಲಸಿಕೆ ಪಡೆಯುತ್ತಿದ್ದಾರೆ, ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (ಡಬ್ಲ್ಯು ಟಿಸಿ) ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಆಯ್ಕೆಯಾದವರು ಜೂನ್‌ನಲ್ಲಿ ಯುಕೆಗೆ ತೆರಳುವ ಕಾರಣದಿಂದಾಗಿ ಆಟಗಾರರಿಗೆ ಲಸಿಕೆ ಸ್ವೀಕರಿಸುವಂತೆ ಬಿಸಿಸಿಐ ಸೂಚಿಸಿದೆ.
ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಮಂಗಳವಾರ (ಮೇ 11) ಕೋವಿಡ್ -19 ಲಸಿಕೆಯ ಮೊದಲ ಡೋಸ್ ಪಡೆದರೆ, ಸೋಮವಾರ (ಮೇ 10), ಭಾರತದ ಕ್ರಿಕೇಟ್ ತಂಡದ ನಾಯಕ ವಿರಾಟ್ ಕೊಹ್ಲಿ, ವೇಗಿ ಇಶಾಂತ್ ಶರ್ಮಾ ಮತ್ತು ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಮೊದಲ ಡೋಸ್ ಕೋವಿಡ್- 19 ಲಸಿಕೆಯನ್ನು ಸ್ವೀಕರಿಸಿದ್ದಾರೆ.
ಓದಿ : ಏ ನಾಲಾಯಕ್ ಫೋನ್ ಇಡು…. : ಮೃತಪಟ್ಟ ರೋಗಿಯ ಕುಟುಂಬಸ್ಥರೊಂದಿಗೆ ಸಿದ್ದು ಸವದಿ ಆಡಿಯೋ ವೈರಲ್
ಕಳೆದ ವಾರ, ಉಮೇಶ್ ಯಾದವ್, ಶಿಖರ್ ಧವನ್, ಅಜಿಂಕ್ಯ ರಹಾನೆ ಮತ್ತು ಅವರ ಪತ್ನಿ, ತಮ್ಮ ಮೊದಲ ಡೋಸ್ ಲಸಿಕೆಯನ್ನು ತೆಗೆದುಕೊಂಡಿದ್ದರು.
ಲಸಿಕೆಯ ಎರಡನೇ ಡೋಸ್ ಗೆ ಕನಿಷ್ಠ 28 ದಿನಗಳ ಅಂತರವನ್ನು ನೀಡಬೇಕಾದ ಕಾರಣದಿಂದಾಗಿ ಮತ್ತು ಜೂನ್ ಆರಂಭದಲ್ಲಿ ಟೀಮ್ ಇಂಡಿಯನ್ ತಂಡವು ಹೊರಹೋಗುವುದರಿಂದ ಇಂಗ್ಲೆಂಡ್‌ಗೆ ತೆರಳುವ 24 ಆಟಗಾರರು ಯುಕೆಯಲ್ಲಿರುತ್ತಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸಮಯದಲ್ಲಿ ಭಾರತೀಯ ಆಟಗಾರರು ಎರಡನೇ ಡೋಸ್ ನನ್ನು ಅಲ್ಲಿಯೇ ಸುಲಭವಾಗಿ ತೆಗೆದುಕೊಳ್ಳಬಹುದು ಎಂಬ ಕಾರಣದಿಂದಾಗಿ ಟೀಮ್ ಇಂಡಿಯಾ ಬಾಯ್ಸ್ ಕೋವಿಶೀಲ್ಡ್ ಲಸಿಕೆಯನ್ನು ಸ್ವೀಕರಿಸುತ್ತಿದ್ದಾರೆ. ಕೋವಿಶೀಲ್ಡ್ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆ ಯುಕೆ ಮೂಲದ ಉತ್ಪನ್ನವಾಗಿದೆ.
ಟೈಮ್ಸ್ ಆಫ್ ಇಂಡಿಯಾದೊಂದಿ ಗೆ ಮಾತನಾಡಿದ, ಬಿಸಿಸಿಐ, ” ಟೀಮ್ ಇಂಡಿಯಾ ಬರುವ ತಿಂಗಳಲ್ಲಿ ಟೀಮ್ ಇಂಡಿಯಾ ಪ್ರವಾಸದಲ್ಲಿರುವ ಕಾರಣದಿಂದಾಗಿ ಕೋವಿಶೀಲ್ಡ್ ಲಸಿಕೆಯನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಯುಕೆ ನಲ್ಲಿಯೇ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ನನ್ನು ಪಡೆಯಲು ಸುಲಭವಾಗುವುದರಿಂದ ಆಟಗಾರರಿಗೆ ಕೋವಿಶೀಲ್ಡ್ ಲಸಿಕೆಯನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದೆ.
ಡಬ್ಲ್ಯು ಟಿ ಸಿ ಫೈನಲ್ ಮತ್ತು ಇಂಗ್ಲೆಂಡ್ ಟೆಸ್ಟ್ ಪಂದ್ಯಗಳಿಗೆ ಭಾರತದ ಸಂಭಾವ್ಯ ತಂಡ :
ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಕ್ಯಾಪ್ಟನ್), ಅಜಿಂಕ್ಯ ರಹಾನೆ (ಉಪನಾಯಕ), ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ಆರ್. ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್. ಶಮಿ, ಎಂಡಿ ಸಿರಾಜ್, ಶಾರ್ದುಲ್ ಠಾಕೂರ್, ಉಮೇಶ್ ಯಾದವ್, ಕೆ.ಎಲ್. ರಾಹುಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್)
ಸ್ಟ್ಯಾಂಡ್ ಬೈ ಆಟಗಾರರು : ಅಭಿಮನ್ಯು ಈಶ್ವರನ್, ಪ್ರಸಾದ್ ಕೃಷ್ಣ, ಅವೇಶ್ ಖಾನ್, ಅರ್ಜನ್ ನಾಗ್ವಾಸ್ವಾಲಾ.
ಓದಿ : ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಪ್ರತಿ ವ್ಯಕ್ತಿಯ ಮಾಹಿತಿ ನೀಡಲು ಗೌರವ್ ಗುಪ್ತ ಸೂಚನೆ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pakistan: ನಮ್ಮ ನಿಧಾನಗತಿಯ ಫೀಲ್ಡಿಂಗ್‌ಗೆ ʼಹೈದರಾಬಾದ್ ಬಿರಿಯಾನಿʼ ಕಾರಣವೆಂದ ಪಾಕ್ ಆಟಗಾರ

Asian Games: ಚಿನ್ನಕ್ಕೆ ಗುರಿಯಿಟ್ಟ ಭಾರತದ ಆರ್ಚರಿ ತಂಡ; ಏಷ್ಯನ್ ಗೇಮ್ಸ್ ನಲ್ಲಿ ದಾಖಲೆ

Boxing: ಒಲಿಂಪಿಕ್ಸ್ ಅರ್ಹತೆ ಗಳಿಸಿದ ಲವ್ಲೀನಾ

World Cup: 44 ವರ್ಷಗಳ ಬಳಿಕ ವಿಶ್ವಕಪ್ ಗೆದ್ದ ಇಂಗ್ಲೆಂಡ್

World Cup: ಅನುಭವ, ಯುವಶಕ್ತಿಯೊಂದಿಗೆ ಕಣಕ್ಕಿಳಿಯಲಿದೆ ಭಾರತ
MUST WATCH
ಹೊಸ ಸೇರ್ಪಡೆ

BJP ಸಖ್ಯ ತೊರೆಯಲು ಕಾರಣ ಹೇಳಿದ AIADMK ಅಧ್ಯಕ್ಷ ಪಳನಿಸ್ವಾಮಿ

LPG Cylinders: ಪ್ರಧಾನಮಂತ್ರಿ ಉಜ್ವಲ ಸ್ಕೀಮ್ ಸಬ್ಸಿಡಿ ಏರಿಕೆ, 600 ರೂ.ಗೆ LPG ಸಿಲಿಂಡರ್

Sagara ಶೈಲೇಶಚಂದ್ರ ವರದಿಯ ಸಂಪೂರ್ಣ ಅನುಷ್ಠಾನಕ್ಕೆ ಗ್ರಾಮೀಣ ಅಂಚೆ ನೌಕರರ ಒತ್ತಾಯ

Rajouri;ಮೂರನೇ ದಿನಕ್ಕೆ ಕಾಲಿಟ್ಟ ಅಡಗಿರುವ ಉಗ್ರರ ವಿರುದ್ಧದ ಕಾರ್ಯಾಚರಣೆ

Chemistry ನೊಬೆಲ್ ಪ್ರಶಸ್ತಿಗೆ ಮೂವರು ವಿಜ್ಞಾನಿಗಳು ಆಯ್ಕೆ