
ಕೆರಿಬಿಯನ್ ಲೀಗ್‌ನಿಂದ ಶಾಹಿದ್ ಅಫ್ರಿದಿ ಹೊರಗೆ
Team Udayavani, Aug 9, 2018, 6:30 AM IST

ಲಾಹೋರ್: ಮಂಡಿ ನೋವಿನಿಂದಾಗಿ 2018ರ “ಕೆರಿಬಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್’ನಿಂದ ಪಾಕಿಸ್ಥಾನದ ಆಲ್‌ರೌಂಡರ್ ಶಾಹಿದ್ ಹೊರಗುಳಿಯಲು ನಿರ್ಧರಿಸಿದ್ದಾರೆ.
ವೆಸ್ಟ್ ಇಂಡೀಸ್‌ನಲ್ಲಿ ನಡೆಯುವ ಈ ಸರಣಿಯಲ್ಲಿ ಅಫ್ರಿದಿ “ಜಮೈಕಾ ತಲೈವಾಸ್’ ತಂಡವನ್ನು ಪ್ರತಿನಿಧಿಸುತ್ತಿದ್ದರು. ತಮ್ಮ ಅಲಭ್ಯತೆಯನ್ನು ಅವರು ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ.
“ಮಂಡಿ ನೋವು ಕಾಡುತ್ತಿದೆ. ಕೂಟದಲ್ಲಿ ಆಡಲಾಗುತ್ತಿಲ್ಲ. ನಾನು ಮನೆಯಲ್ಲಿದ್ದುಕೊಂಡೇ ತಂಡಕ್ಕೆ ಬೆಂಬಲ ಸೂಚಿಸುತ್ತೇನೆ’ ಎಂದಿದ್ದಾರೆ ಶಾಹಿದ್ ಅಫ್ರಿದಿ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಮೈಕಾ ತಲೈವಾಸ್ ಅಧಿಕಾರಿಗಳು, “ಅಫ್ರಿದಿ ಶೀಘ್ರ ಚೇತರಿಕೆ ಕಾಣಲಿ’ ಎಂದು ಹಾರೈಸಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ಪಾಕಿಸ್ಥಾನ್ ಸೂಪರ್ ಲೀಗ್‌ನಲ್ಲಿ ಕರಾಚಿ ಕಿಂಗ್ಸ್ ಪರ ಆಡುತ್ತಿರುವಾಗ ಅಫ್ರಿದಿ ಗಾಯದ ಸಮಸ್ಯೆಗೆ ಸಿಲುಕಿದ್ದರು.
ಟಾಪ್ ನ್ಯೂಸ್
