ಭಾರತೀಯ ಕ್ರಿಕೆಟಿಗರ ಹೊಟೇಲ್ ಬಿಲ್ ನೀಡುವ ಮೂಲಕ ಸುದ್ದಿಯಾದ ನವಲ್ದೀಪ್ ಸಿಂಗ್
Team Udayavani, Jan 2, 2021, 10:58 AM IST
ಮೆಲ್ಬರ್ನ್: ಕ್ರಿಕೆಟ್ ಅಭಿಮಾನಿಯೊಬ್ಬರು ಟೀಮ್ ಇಂಡಿಯಾ ಆಟಗಾರರ ಹೊಟೇಲ್ ಬಿಲ್ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಈ ಅಭಿಮಾನಿ ಹೆಸರು ನವಲ್ದೀಪ್ ಸಿಂಗ್.
ನವಲ್ದೀಪ್ ತನ್ನ ಪತ್ನಿಯೊಂದಿಗೆ ಮೆಲ್ಬರ್ನ್ ರೆಸ್ಟೋರೆಂಟ್ನಲ್ಲಿದ್ದಾಗಲೇ ರೋಹಿತ್ ಶರ್ಮಾ, ನವದೀಪ್ ಸೈನಿ, ರಿಷಭ್ ಪಂತ್, ಶುಭ್ಮನ್ ಗಿಲ್ ಆಗಮಿಸಿದ್ದರು. ತನ್ನ ನೆಚ್ಚಿನ ಕ್ರಿಕೆಟಿಗರನ್ನು ಕಂಡ ನವಲ್ದೀಪ್ ಖುಷಿಗೆ ಪಾರವೇ ಇಲ್ಲ. ಕೊನೆಯಲ್ಲಿ ಉಳಿದ ಅಭಿಮಾನಿಗಳು ಕ್ರಿಕೆಟಿಗರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿದ್ದರೆ, ಇತ್ತ ಸಿಂಗ್ ಆ ಕ್ರಿಕೆಟಿಗರ 118.69 ಆ. ಡಾಲರ್ (6,683 ರೂ.) ಬಿಲ್ ಮೊತ್ತವನ್ನು ಪಾವತಿಸಿಯಾಗಿತ್ತು!
ಇದನ್ನೂ ಓದಿ:ಇನ್ನೂ ಎರಡು ವಿಶ್ವಕಪ್ ಆಡಿದ ಬಳಿಕವೇ ನಿವೃತ್ತಿ: ಕ್ರಿಸ್ ಗೇಲ್
ಇದನ್ನು ತಿಳಿದ ರೋಹಿತ್ ಆ ಮೊತ್ತವನ್ನು ತೆಗೆದುಕೊಳ್ಳುವಂತೆ ಸೂಚಿಸಿದರೂ ನವಲ್ದೀಪ್ ನಿರಾಕರಿಸಿದರು. ಬಳಿಕ ಪಂತ್, “ಥ್ಯಾಂಕ್ಯೂ ಭಾಭಿಜೀ ಫಾರ್ ದ ಲಂಚ್’ ಎಂದು ನವಲ್ದೀಪ್ ಪತ್ನಿಗೆ ಕೃತಜ್ಞತೆ ಸಲ್ಲಿಸಿದರು.
ಭಾರತ- ಆಸೀಸ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಜ.7ರಂದು ಆರಂಭವಾಗಲಿದೆ. ಭಾರತ ಅಡಿಲೇಡ್ ಪಂದ್ಯದಲ್ಲಿ ಸೋಲನುಭವಿಸಿದ್ದರೆ, ಮೆಲ್ಬರ್ನ್ ನಲ್ಲಿ ಗೆಲುವು ಕಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ