
ಅಲ್ ನಾಸ್ರ್ ಕ್ಲಬ್ ಗೆ ರೊನಾಲ್ಡೊ: 2 ವರ್ಷಗಳ ಆಟಕ್ಕೆ 1,700 ಕೋ. ರೂ. ಸಂಭಾವನೆ!
Team Udayavani, Jan 1, 2023, 7:35 AM IST

ರಿಯಾದ್: ಪೋರ್ಚುಗಲ್‌ನ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಇನ್ನು ಸೌದಿ ಅರೇಬಿಯದ ಅಲ್ ನಾಸ್ರ್ ಫುಟ್‌ಬಾಲ್ ಕ್ಲಬ್ ಪರ ಆಡಲಿಳಿಯಲಿದ್ದಾರೆ. ಮುಂದಿನ 2 ವರ್ಷಗಳ ಒಪ್ಪಂದಕ್ಕೆ ಅವರು ಸಹಿ ಹಾಕಿದ್ದಾರೆ. ಇದಕ್ಕೆ ಪಡೆಯುವ ಸಂಭಾವನೆ ಅಷ್ಟಿಷ್ಟಲ್ಲ, ಬರೋಬ್ಬರಿ 1,700 ಕೋಟಿ ರೂ. (200 ಮಿಲಿಯನ್ ಯೂರೋಸ್).
ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಗೂ ಮುನ್ನ ಮ್ಯಾಂಚೆಸ್ಟರ್ ಯುನೈಟೆಡ್ ಜತೆಗಿನ ರೊನಾಲ್ಡೊ ಸಂಬಂಧ ಅನಪೇಕ್ಷಿತ ರೀತಿಯಲ್ಲಿ ಕೊನೆಗೊಂಡಿತ್ತು. ಇದೀಗ ಅಲ್ ನಾಸ್ರ್ ಕ್ಲಬ್ ಸೇರಿಕೊಂಡು ಮ್ಯಾಂಚೆಸ್ಟರ್ ಯುನೈಟೆಡ್‌ಗೆ ಸಡ್ಡು ಹೊಡೆದಿದ್ದಾರೆ. ದೊಡ್ಡ ಮೊತ್ತದ ಸಂಭಾವನೆ ಪಡೆದು ತನ್ನ ಮೌಲ್ಯದಲ್ಲಿ ಯಾವ ಕುಸಿತವೂ ಸಂಭವಿಸಿಲ್ಲ ಎಂದು ಮಾಜಿ ಕ್ಲಬ್ ಮುಂದೆ ಸಾರುವಲ್ಲಿಯೂ ರೊನಾಲ್ಡೊ ಯಶಸ್ವಿಯಾಗಿದ್ದಾರೆ.
ಶ್ರೀಮಂತ ಫುಟ್‌ಬಾಲ್ ಕ್ಲಬ್
67 ವರ್ಷಗಳ ಇತಿಹಾಸ ಹೊಂದಿರುವ ಅಲ್ ನಾಸ್ರ್ ಸೌದಿ ಅರೇಬಿಯದ ಅತ್ಯಂತ ಶ್ರೀಮಂತ ಫುಟ್‌ಬಾಲ್ ಕ್ಲಬ್. 9 ಸಲ “ಚಾಂಪಿಯನ್ಸ್ ಲೀಗ್’ ಪ್ರಶಸ್ತಿ ಜಯಿಸಿದೆ. 6 ಸಲ “ಕಿಂಗ್ಸ್ ಕಪ್’, 3 ಸಲ “ಕ್ರೌನ್ ಪ್ರಿನ್ಸೆಸ್ ಕಪ್’, 3 ಸಲ “ಫೆಡರೇಶನ್ ಕಪ್’, 2 ಸಲ “ಸೌದಿ ಸೂಪರ್ ಕಪ್’ ಚಾಂಪಿಯನ್ ಆಗಿ ಮೂಡಿಬಂದ ಹೆಗ್ಗಳಿಕೆ ಈ ಕ್ಲಬ್‌ನದ್ದು. ಹಾಗೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ 2 ಸಲ ಜಿಸಿಸಿ ಚಾಂಪಿಯನ್ಸ್ ಲೀಗ್, 1998ರಲ್ಲಿ “ಏಷ್ಯನ್ ಕಪ್ ವಿನ್ನರ್ ಕಪ್’ ಮತ್ತು “ಏಷ್ಯನ್ ಸೂಪರ್ ಕಪ್’ ಗೆದ್ದ ಹಿರಿಮೆಯನ್ನೂ ಹೊಂದಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WTC Final 2023: ಐಪಿಎಲ್ ನ ಆಟವನ್ನು ಮುಂದುವರಿಸುತ್ತೇನೆ ಎಂದ ಅಜಿಂಕ್ಯ ರಹಾನೆ

WTC Final 2023: ಪಂದ್ಯ ರದ್ದಾದರೆ ಅಥವಾ ಡ್ರಾ ಆದರೆ ಚಾಂಪಿಯನ್ ಯಾರು?

ಈ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗುತ್ತೇನೆ: ವಾರ್ನರ್ ಅಚ್ಚರಿಯ ಹೇಳಿಕೆ

ODI series ಶ್ರೀಲಂಕಾದಲ್ಲಿ ಆಡಲು ನಿರಾಕರಿಸಿದ ಪಾಕ್ : ವರದಿ

ಸಚಿನ್ ಅಲ್ಲ, ಈತ ಏಷ್ಯಾದ ಅತ್ಯುತ್ತಮ ಆಟಗಾರ: ಮಾಜಿ ಪಾಕ್ ನಾಯಕನ ಹೆಸರು ಸೂಚಿಸಿದ ಸೆಹವಾಗ್
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ
ಹೊಸ ಸೇರ್ಪಡೆ

ಲಂಚ ನೀಡಬೇಡಿ, ಮಧ್ಯವರ್ತಿಗಳ ಬಗ್ಗೆ ಎಚ್ಚರದಿಂದಿರಿ: ಶಾಸಕ ಹರೀಶ್‌ಗೌಡ

ಸಿಡಿಲಿಗೆ ಬಲಿಯಾಗಿದ್ದ ಹರೀಶ್ ಕುಟುಂಬಕ್ಕೆ 5 ಲಕ್ಷ ರೂ. ಚೆಕ್ ವಿತರಣೆ

Congress ದೌರ್ಜನ್ಯ ತಡೆಯಲು ಶೀಘ್ರದಲ್ಲೇ ಸಹಾಯವಾಣಿ: ತೇಜಸ್ವಿ ಸೂರ್ಯ

ಕಾರ್ಕಳ: ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮರಕ್ಕೆ ಢಿಕ್ಕಿ: ಗಾಯ

ರೈಲು ದುರಂತ: ಕೋಲ್ಕತಾದಲ್ಲಿ ಸಂಕಷ್ಟ; ಕ್ರೀಡಾಪಟುಗಳಿಗೆ ರಾಜ್ಯ ಸರಕಾರದ ನೆರವು