
ಅಯ್ಯರ್ ಮರಳಿದರೂ ಡೆಲ್ಲಿ ಕ್ಯಾಪಿಟಲ್ಸ್‌ಗೆ ಪಂತ್ ನಾಯಕ
Team Udayavani, Sep 17, 2021, 6:08 AM IST

ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವದ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳಿದರೂ ರಿಷಭ್ ಪಂತ್ ಅವರೇ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಫ್ರಾಂಚೈಸಿಯ ಸಹ ಮಾಲಕ ಪಾರ್ಥ್ ಜಿಂದಲ್ ಗುರುವಾರ ಸ್ಪಷ್ಟ ಪಡಿಸಿದ್ದಾರೆ.
ಇಂಗ್ಲೆಂಡ್ ಸರಣಿಯ ವೇಳೆ ಶ್ರೇಯಸ್ ಅಯ್ಯರ್ ಗಾಯಾಳಾಗಿ ಹೊರಬಿದ್ದ ಬಳಿಕ 2021ರ ಐಪಿಎಲ್‌ಗೆ ರಿಷಭ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನನ್ನಾಗಿ ನೇಮಿಸಲಾಗಿತ್ತು. ಐಪಿಎಲ್ ಮೊದಲಾರ್ಧದಲ್ಲಿ ಡೆಲ್ಲಿ ನಿರ್ವಹಣೆ ಗಮನಾರ್ಹ ಮಟ್ಟದಲ್ಲಿದ್ದು, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಹೀಗಾಗಿ ಪಂತ್ ಅವರನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ.
ಭುಜದ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಶ್ರೇಯಸ್ ಅಯ್ಯರ್ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿಲ್ಲ. ನೇರವಾಗಿ ಐಪಿಎಲ್ ಆಡುವುದರಿಂದ ಅವರ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ತಂಡದ ಉದ್ದೇಶವಾಗಿರಲೂಬಹುದು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wrestlers: ಕುಸ್ತಿಪಟುಗಳ ಹೋರಾಟ- ವಿಶ್ವ ಒಕ್ಕೂಟ ಎಚ್ಚರಿಕೆ

AUSTRALIA ಫೈನಲ್ ತಂಡ: ಮಾರ್ಷ್, ರೆನ್‌ಶಾ ಹೊರಕ್ಕೆ

IPL: ಧೋನಿಯ ಬಗ್ಗೆ ಜಡೇಜಾ ಟ್ವೀಟ್… ʻಮಾಹಿ ಭಾಯಿ…ನಿಮಗಾಗಿ..ʼ- ಏನಿದು?

ಮುಗಿಯಿತು ಮನದಣಿಯ ತಣಿಸಿದ IPL 2023: ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿತು?ಇಲ್ಲಿದೆ Full list

ನಿವೃತ್ತಿ ಘೋಷಣೆ ಮಾಡುವುದು ಸುಲಭ ಆದರೆ…: ಕ್ರಿಕೆಟ್ ವಿಶ್ವದ ಕುತೂಹಲ ತಣಿಸಿದ Dhoni ಉತ್ತರ