ಭರ್ಜರಿ ಗೆಲುವು ದಾಖಲಿಸಿದ ಡೆಲ್ಲಿ

Team Udayavani, Sep 9, 2019, 1:23 AM IST

ಕೋಲ್ಕತಾ: ಪ್ರೊ ಕಬಡ್ಡಿ ಲೀಗ್‌ನ ಕೋಲ್ಕತಾ ಆವೃತ್ತಿಯ ರವಿವಾರದ ಮೊದಲ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ 50-34 ಅಂಕಗಳಿಂದ ತಮಿಳ್‌ ತಲೈವಾಸ್‌ ತಂಡವನ್ನು ಸೋಲಿಸಿದೆ. ತನ್ನ ಅಗ್ರಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿದೆ (59 ಅಂಕ). ಇನ್ನೊಂದೆಡೆ ತಮಿಳ್‌ ತಲೈವಾಸ್‌ ಪ್ಲೇ-ಆಫ್ಗೇರುವ ಆಸೆಯನ್ನು ಬಹುತೇಕ ತ್ಯಜಿಸಿದೆ.

ದಿನದ ಇನ್ನೊಂದು ರೋಚಕ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ 42-39 ಅಂತರದಿಂದ ಪುನೇರಿ ಪಲ್ಟಾನ್‌ಗೆ ಸೋಲುಣಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಬೆಂಗಳೂರು ಬುಲ್ಸ್‌ ಮೂರಕ್ಕೆ ಇಳಿಯಿತು. ಎರಡೂ ತಂಡಗಳು ತಲಾ 48 ಅಂಕ ಗಳಿಸಿವೆ.

ಆರಂಭದಿಂದಲೇ ಸವಾರಿ
ಆರಂಭದಿಂದಲೂ ಡೆಲ್ಲಿ ಪಡೆ ತಮಿಳ್‌ ಮೇಲೆ ಸವಾರಿ ಮಾಡುತ್ತಲೇ ಹೋಯಿತು. ಅದನ್ನು ಅಂತ್ಯದ ವರೆಗೂ ಕಾಯ್ದುಕೊಂಡು ಭರ್ಜರಿ ಜಯ ಸಾಧಿಸಿತು.

ಡೆಲ್ಲಿ ತಂಡದ ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸಿದ್ದು ನವೀನ್‌ ಕುಮಾರ್‌ ಹಾಗೂ ಮೆರಾಜ್‌ ಶೇಖ್‌. ನವೀನ್‌ ಕುಮಾರ್‌ ಎದುರಾಳಿ ಕೋಟೆ ಮೇಲೆ 23 ಬಾರಿ ಎರಗಿ ಹೋಗಿ 17 ಅಂಕ ಗಳಿಸಿದರು. 13 ಅಂಕಗಳು ಟಚ್‌ ಮೂಲಕ ಬಂದರೆ, ಇನ್ನು 4 ಅಂಕಗಳು ಬೋನಸ್‌ ರೂಪದಲ್ಲಿ ಲಭಿಸಿದವು. ಇವರಿಗೆ ಪೂರ್ಣ ಬೆಂಬಲ ನೀಡಿದ್ದು ಮೆರಾಜ್‌ ಅವರು 15 ಬಾರಿ ಎದು ರಾಳಿ ಕೋಟೆಯೊಳಗೆ ನುಗ್ಗಿ 12 ಅಂಕ ಪಡೆಯಲು ಸಫ‌ಲರಾದರು. ಇವರಿಬ್ಬರ ಭರ್ಜರಿ ದಾಳಿಗೆ ತಮಿಳ್‌ ತತ್ತರಿಸಿತು.

ತಮಿಳ್‌ ತಂಡದ ಸೋಲಿಗೆ ಅಜಯ್‌ ಠಾಕೂರ್‌ ತೀವ್ರ ವೈಫ‌ಲ್ಯ ಕಾರಣವಾಯಿತು. ಅವರು ದಾಳಿಗೆ ಹೋದದ್ದೇ 4 ಬಾರಿ, ಇದರಲ್ಲಿ ಒಮ್ಮೆಯೂ ಯಶಸ್ಸು ಸಾಧಿಸಲಿಲ್ಲ. ಮತ್ತೂಂದು ಕಡೆ ರಾಹುಲ್‌ ಚೌಧರಿ 18 ಬಾರಿ ಎದುರಾಳಿ ಕೋಟೆಯನ್ನು ಪ್ರವೇಶಿಸಿ 14 ಅಂಕ ಪಡೆದರು. ಇವರಿಗೆ ಉಳಿದ ಆಟಗಾರ ಬೆಂಬಲ ಲಭಿಸಲಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ