ವಿಶ್ವಕಪ್‌ನಿಂದ ಧವನ್‌ ಔಟ್‌; ತಂಡ ಸೇರಿದ ಪಂತ್‌

ಆಸ್ಟ್ರೇಲಿಯ ವಿರುದ್ಧ ಬ್ಯಾಟಿಂಗ್‌ ವೇಳೆ ಕೈ ಬೆರಳಿನ ಮೂಳೆ ಮುರಿತ

Team Udayavani, Jun 20, 2019, 5:50 AM IST

shikar-dhawan

ಸೌತಾಂಪ್ಟನ್‌: ಭಾರತದ ಎಡಗೈ ಆರಂಭಕಾರ ಶಿಖರ್‌ ಧವನ್‌ ಅವರ ವಿಶ್ವಕಪ್‌ ಕನಸು ಎರಡೇ ಪಂದ್ಯಕ್ಕೆ ಛಿದ್ರಗೊಂಡಿದೆ. ಅವರೀಗ ಈ ಪ್ರತಿಷ್ಠಿತ ಕೂಟದಿಂದಲೇ ಹೊರಬಿದ್ದಿದ್ದಾರೆ. ಮುನ್ನೆಚರಿಕೆಯ ಕ್ರಮವಾಗಿ ಕರೆ ಪಡೆದಿದ್ದ ರಿಷಭ್‌ ಪಂತ್‌ ಅವರನ್ನು ಬದಲಿ ಆಟಗಾರನನ್ನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ತಂಡದ ಕಾರ್ಯ ನಿರ್ವಾಹಕ ಪ್ರಬಂಧಕ ಸುನೀಲ್‌ ಸುಬ್ರಹ್ಮಣ್ಯಂ ಬುಧವಾರ ಈ ವಿಷಯವನ್ನು ಮಾಧ್ಯಮದವರಿಗೆ ತಿಳಿಸಿದರು.

ಜುಲೈ ಮಧ್ಯಾವಧಿ ತನಕ ವಿಶ್ರಾಂತಿ
ಜೂನ್‌ 9ರ ಆಸ್ಟ್ರೇಲಿಯ ವಿರುದ್ಧದ ಪಂದ್ಯದ ಬ್ಯಾಟಿಂಗ್‌ ವೇಳೆ ಚೆಂಡು ಬಂಡಿದು ಶಿಖರ್‌ ಧವನ್‌ ಅವರ ಎಡಗೈ ಹೆಬ್ಬೆರಳಿನ ಮೂಳೆ ಮುರಿತಕ್ಕೊಳಗಾಗಿದ್ದರು. ಇದರಿಂದ ಕನಿಷ್ಠ 3 ಪಂದ್ಯಗಳಿಗೆ ಧವನ್‌ ಸೇವೆ ಲಭಿಸದು ಎನ್ನಲಾಗಿತ್ತು. ಈ ಅವಧಿಯಲ್ಲಿ ಚೇತರಿಸಕೊಂಡರೆ ಅವರನ್ನು ತಂಡದಲ್ಲಿ ಮುಂದುವರಿಸುವುದು ಭಾರತದ ಯೋಜನೆಯಾಗಿತ್ತು. ಒಮ್ಮೆ ಕೂಟದಿಂದ ಹೊರಬಿದ್ದ ಬಳಿಕ ಮರಳಿ ತಂಡವನ್ನು ಸೇರಿಕೊಳ್ಳಲು ಐಸಿಸಿ ನಿಯಮದಲ್ಲಿ ಆಸ್ಪದ ಇಲ್ಲದಿರುವುದೇ ಇದಕ್ಕೆ ಕಾರಣ. ಹೀಗಾಗಿ ಪಂತ್‌ ಕೂಡ ಟೀಮ್‌ ಇಂಡಿಯಾದ ಅಧಿಕೃತ ಸದಸ್ಯನಾಗಿರಲಿಲ್ಲ. ಆದರೆ ಬುಧವಾರ ಎಲ್ಲದಕ್ಕೂ ಒಂದು ಅಂತ್ಯ ಲಭಿಸಿದೆ.

“ಶಿಖರ್‌ ಧವನ್‌ ಜುಲೈ ಮಧ್ಯಾವಧಿ ತನಕ ವಿಶ್ರಾಂತಿ ಯಲ್ಲಿ ಇರಬೇಕಾಗುತ್ತದೆ. ಹೀಗಾಗಿ ಅವರು ವಿಶ್ವಕಪ್‌ ತಂಡದಿಂದ ಬೇರ್ಪಡುವುದು ಅನಿ ವಾರ್ಯ. ಬದಲಿ ಆಟಗಾರನಾಗಿ ರಿಷಭ್‌ ಪಂತ್‌ ಅವರನ್ನು ಸೇರಿಸಿಕೊಳ್ಳಲು ಈಗಾಗಲೇ ಐಸಿಸಿಗೆ ಪತ್ರ ಬರೆಯಲಾಗಿದೆ’ ಎಂದು ಸುಬ್ರಹ್ಮಣ್ಯಂ ಹೇಳಿದರು.

ತಲೆ ಕೆಳಗಾದ ಲೆಕ್ಕಾಚಾರ
ಆಸ್ಟ್ರೇಲಿಯ ವಿರುದ್ಧ ಶತಕ ಬಾರಿಸಿ ಮೆರೆದಿದ್ದ ಶಿಖರ್‌ ಧವನ್‌ ಜೂ. 30ರ ಇಂಗ್ಲೆಂಡ್‌ ಎದುರಿನ ಬರ್ಮಿಂಗ್‌ಹ್ಯಾಮ್‌ ಪಂದ್ಯದ ವೇಳೆ ತಂಡಕ್ಕೆ ಮರಳುವ ನಿರೀಕ್ಷೆ ಇತ್ತು. ಆದರೀಗ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದೆ.

ಅಕಸ್ಮಾತ್‌ ರಿಷಭ್‌ ಪಂತ್‌ ಅವರನ್ನು ಸೇರಿಸಿಕೊಳ್ಳದೇ ಹೋಗಿದ್ದರೆ ಆಗ ಜೂ. 22ರ ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಭಾರತ ಕೇವಲ 13 ಸದಸ್ಯರ ನಡುವೆ ಆಡುವ ಬಳಗದ ಆಯ್ಕೆ ಮಾಡಿಕೊಳ್ಳಬೇಕಿತ್ತು. ಭುವನೇಶ್ವರ್‌ ಕುಮಾರ್‌ ಕೂಡ ಗಾಯಾಳಾದುದು ಇದಕ್ಕೆ ಕಾರಣ.

ಭುವನೇಶ್ವರ್‌ ಹೇಗಿದ್ದಾರೆ?
ಪಾಕಿಸ್ಥಾನ ವಿರುದ್ಧದ ಪಂದ್ಯದ ವೇಳೆ ಗಾಯಾಳಾಗಿದ್ದ ಭುವನೇಶ್ವರ್‌ ಕುಮಾರ್‌ ಸದ್ಯ ಮುಂದಿನ 3 ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಮುಂದೇನು ಎಂಬುದನ್ನು ಕಾದು ನೋಡಬೇಕಿದೆ. ಭುವನೇಶ್ವರ್‌ ಅವರ ಸ್ಥಿತಿಯನ್ನು ಫಿಸಿಯೋ ಪ್ಯಾಟ್ರಿಕ್‌ ಫ‌ರ್ಹಾತ್‌ ಗಮನಿಸುತ್ತಿದ್ದಾರೆ’ ಎಂದು ತಂಡದ ಟ್ರೇನರ್‌ ಶಂಕರ್‌ ಬಸು ತಿಳಿಸಿದ್ದಾರೆ.

ನಾನಿನ್ನು ವಿಶ್ವಕಪ್‌ ಕೂಟದಲ್ಲಿ ಮುಂದು ವರಿಯುವುದಿಲ್ಲ ಎಂದು ತಿಳಿಸಲು ಬಹಳ ದುಃಖವಾಗುತ್ತಿದೆ. ತಂಡ ಮತ್ತು ದೇಶದ ಕ್ರಿಕೆಟ್‌ ಅಭಿಮಾನಿಗಳು ತೋರಿದ ಪ್ರೀತಿಗೆ ಆಭಾರಿ. ಜೈಹಿಂದ್‌.
-ಶಿಖರ್‌ ಧವನ್‌

ಟಾಪ್ ನ್ಯೂಸ್

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.