
ನಿದ್ದೆಯಲ್ಲಿ ಮಾತಾಡುತ್ತಾರಾ ಧವನ್ ? ರೋಹಿತ್ ಮಾಡಿದ ಈ ವಿಡಿಯೋ ಈಗ ವೈರಲ್
Team Udayavani, Sep 21, 2019, 1:07 PM IST

ಬೆಂಗಳೂರು: ಟೀಂ ಇಂಡಿಯಾದ ನಿಗದಿತ ಓವರ್ ಗಳ ಆರಂಭಿಕ ಆಟಗಾರ ಶಿಖರ್ ಧವನ್ ಎಂತಹ ಸ್ಪೋಟಕ ಆಟಗಾರ ಎಂದು ನಿಮಗೆ ಗೊತ್ತಿರಬಹುದು. ಗಬ್ಬರ್ ಸಿಂಗ್ ಶಿಖರ್ ಧವನ್ ರ ಇನ್ನೊಂದು ಅವತಾರ ನೀವು ನೋಡಿದ್ದೀರಾ. ಸಹ ಆಟಗಾರ ರೋಹಿತ್ ಶರ್ಮಾ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು, ಸಖತ್ ವೈರಲ್ ಆಗಿದೆ.
ಹೌದು. ಶಿಖರ್ ಧವನ್ ನಿದ್ದೆಯಲ್ಲಿ ಮಾತನಾಡುವ ವಿಡಿಯೋವೊಂದು ಈಗ ವೈರಲ್ ಆಗಿದೆ. ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಟಿ ಟ್ವೆಂಟಿ ಪಂದ್ಯವಾಡಲು ಟೀಂ ಇಂಡಿಯಾ ಧರ್ಮಶಾಲಾದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿತ್ತು. ಈ ವೇಳೆ ವಿಮಾನದಲ್ಲಿ ಇಬ್ಬರು ಆರಂಭಿಕರು ಅಕ್ಕಪಕ್ಕ ಕುಳಿತಿದ್ದರು. ನಿದ್ದೆ ಮಾಡುತ್ತಿದ್ದ ಧವನ್ ಒಬ್ಬರೇ ಏನೋ ಗುನುಗುನಿಸುತ್ತಿರುವುದನ್ನು ಗಮನಿಸಿದ ರೋಹಿತ್ ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿದ್ದಾರೆ.
ವಿಡಿಯೋದ ಜೊತೆ , ಧವನ್ ನನ್ನೊಂದಿಗೆ ಮಾತನಾಡುತ್ತಿಲ್ಲ. ಕನಸಿನ ಗೆಳೆಯನ ಬಳಿ ಮಾತನಾಡುತ್ತಿದ್ದಾನೆ ಎಂಬರ್ಥದ ಸಾಲುಗಳನ್ನು ರೋಹಿತ್ ಬರೆದಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಶಿಖರ್ ಧವನ್ ಕೂಡಾ ಪ್ರತಿಕ್ರಿಯೆ ಮಾಡಿದ್ದು ತಾನು ಶಾಯರಿ ಅಭ್ಯಾಸ ನಡೆಸುತ್ತಿದ್ದೆ ಎಂದಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Cup 23; ಭಾರತಕ್ಕೆ ಬರಲಿದ್ದಾರೆ ಅಫ್ಘಾನ್ ನ ಮಿಸ್ಟ್ರಿ ಹುಡುಗಿ; ಯಾರೀ ವಾಜ್ಮಾ ಅಯೂಬಿ

WPL; Royal Challengers Bangalore ಮಹಿಳಾ ತಂಡಕ್ಕೆ ಹೊಸ ಕೋಚ್ ನೇಮಕ

CWC23; ಭಾರತ, ಆಸ್ಟ್ರೇಲಿಯಾ ಅಲ್ಲ…: ಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಹೆಸರಿಸಿದ ಗವಾಸ್ಕರ್

World Cup Cricket;1983ರ ಬಳಿಕ ಭಾರತದ ಮಹತ್ಸಾಧನೆ

Boxing: ಪದಕದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನಿಖತ್ ಜರೀನ್
MUST WATCH
ಹೊಸ ಸೇರ್ಪಡೆ

Puttur: ನೀರಿನಲ್ಲಿ ಮುಳುಗಿ ಪುತ್ತೂರಿನ ಯುವಕ ಕೇರಳದಲ್ಲಿ ಸಾವು

Kupwara ; ಸೇನೆ, ಪೊಲೀಸರ ಕಾರ್ಯಾಚರಣೆ: ಒಳನುಸುಳುತ್ತಿದ್ದ ಉಗ್ರರಿಬ್ಬರ ಹತ್ಯೆ

Viral Video: ಆಡಿ ಕಾರಿನಲ್ಲಿ ಬಂದು ರಸ್ತೆ ಬದಿ ತರಕಾರಿ ಮಾರುವ ಕೇರಳದ ರೈತ…

Sandalwood; ಮನಮುಟ್ಟಿದ ಖುಷಿಯಲ್ಲಿ ‘ಆರಾರಿರಾರೋ’

World Cup 23; ಭಾರತಕ್ಕೆ ಬರಲಿದ್ದಾರೆ ಅಫ್ಘಾನ್ ನ ಮಿಸ್ಟ್ರಿ ಹುಡುಗಿ; ಯಾರೀ ವಾಜ್ಮಾ ಅಯೂಬಿ