Boxing: ಪದಕದೊಂದಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನಿಖತ್‌ ಜರೀನ್‌

Team Udayavani, Sep 30, 2023, 6:20 AM IST

1–sadasd

ಹ್ಯಾಂಗ್‌ಝೂ: ಭಾರತದ ಬಾಕ್ಸಿಂಗ್‌ ತಾರೆ ನಿಖತ್‌ ಜರೀನ್‌ ಅವರಿಗೆ ಶುಕ್ರವಾರ ಅವಳಿ ಖುಷಿ. ಒಂದು, ಏಷ್ಯಾಡ್‌ ಬಾಕ್ಸಿಂಗ್‌ನಲ್ಲಿ ಸೆಮಿ ಫೈನಲ್‌ ಪ್ರವೇಶಿಸಿದ್ದು, ಮತ್ತೂಂದು, ಈ ಸಾಧನೆ ಯಿಂದ ಮುಂದಿನ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಿದ್ದು. 27 ವರ್ಷದ ನಿಖತ್‌ ಜರೀನ್‌ 50 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಜೋರ್ಡನ್‌ನ ನಾಸರ್‌ ಹನಾನ್‌ ಅವರೆದುರು ಆರ್‌ಎಸ್‌ಸಿ (ರೆಫ್ರಿ ಸ್ಟಪ್ಸ್‌ ಕಾಂಟೆಸ್ಟ್‌) ಗೆಲುವು ದಾಖಲಿಸಿದರು. ಈ ಕ್ವಾರ್ಟರ್‌ ಫೈನಲ್‌ ಸಾಧನೆಯಿಂದ ನಿಖತ್‌ಗೆ ಒಲಿಂಪಿಕ್ಸ್‌ ಟಿಕೆಟ್‌ ಕೂಡ ಲಭಿಸಿತು. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರಿಗೆ ಪ್ರವೇಶ ಲಭಿಸಿರಲಿಲ್ಲ.

ಏಷ್ಯಾಡ್‌ನ‌ಲ್ಲಿ ವನಿತೆಯರ 50 ಕೆಜಿ, 54 ಕೆಜಿ, 57 ಕೆಜಿ, 60 ಕೆಜಿ ವಿಭಾಗಗಳಲ್ಲಿ ಸೆಮಿಫೈನಲ್‌ ಪ್ರವೇಶಿಸಿದವರಿಗೆ; 66 ಕೆಜಿ ಹಾಗೂ 75 ಕೆಜಿ ವಿಭಾಗಗಳಲ್ಲಿ ಫೈನಲ್‌ ಪ್ರವೇಶಿಸಿದವರಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ ಲಭಿಸುತ್ತದೆ. ಹಾಗೆಯೇ ಏಷ್ಯಾಡ್‌ನ‌ ಏಳೂ ತೂಕ ವಿಭಾಗಗಳಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಪುರುಷರಿಗೂ ಒಲಿಂಪಿಕ್ಸ್‌ ಟಿಕೆಟ್‌ ಸಿಗಲಿದೆ.

ಟಿಟಿ: ಕ್ವಾರ್ಟರ್‌ ಫೈನಲ್‌ಗೆ ಮಣಿಕಾ

ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಮಣಿಕಾ ಬಾತ್ರಾ ಏಷ್ಯಾಡ್‌ ಪದಕ ರೇಸ್‌ನಲ್ಲಿ ಮುಂದುವರಿದಿದ್ದಾರೆ. ಅವರು ವನಿತಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ತಲುಪಿದ ಭಾರತದ ಮೊದಲ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ತೀರಾ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಮಣಿಕಾ ಬಾತ್ರಾ ಥಾಯ್ಲೆಂಡ್‌ನ‌ ಸುರಾಸಿನಿ ಸವೆತ್ತಬುತ್‌ ಅವರನ್ನು 4-2ರಿಂದ ಮಣಿಸುವಲ್ಲಿ ಯಶಸ್ವಿಯಾದರು (11-7, 6-11, 12-10, 11-13, 12-10, 11-6). ಶ‌ನಿವಾರದ ಮುಖಾಮುಖಿಯಲ್ಲಿ ಮಣಿಕಾ ಎದುರಾಳಿಯಾಗಿರುವವರು ವಿಶ್ವದ ನಂ.3 ಆಟಗಾರ್ತಿ, ಚೀನದ ಯಿದಿ ವಾಂಗ್‌. ಈ ಕೂಟದಲ್ಲಿ ಮಣಿಕಾಗೆ ಪದಕ ಗೆಲ್ಲಲು ಇರುವ ಕೊನೆಯ ಅವಕಾಶ ಇದಾಗಿದೆ. ಅವರು ಈಗಾಗಲೇ ಮಿಶ್ರ ಡಬಲ್ಸ್‌ ಹಾಗೂ ವನಿತಾ ತಂಡ ಸ್ಪರ್ಧೆಯಲ್ಲಿ ಪರಾಭವಗೊಂಡಿದ್ದಾರೆ.

ಮಿಶ್ರ ಫ‌ಲಿತಾಂಶ
ಪುರುಷರ ಡಬಲ್ಸ್‌ನಲ್ಲಿ ಮಾನವ್‌ ವಿಕಾಸ್‌ ಠಕ್ಕರ್‌-ಮಾನುಷ್‌ ಉತ್ಪಲ್‌ಭಾಯ್‌ ಶಾ 3-2ರಿಂದ ಸಿಂಗಾಪುರದ ಐಜಾಕ್‌ ಕ್ವೆಕ್‌ ಯಾಂಗ್‌-ವ್ಯೂ ಎನ್‌ ಕೋನ್‌ ಪಾಂಗ್‌ ಅವರನ್ನು ಮಣಿಸಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಆದರೆ ಅಚಂತ ಶರತ್‌ ಕಮಲ್‌-ಜಿ. ಸಥಿಯನ್‌ ಚೀನದ ಚುಕ್ವಿನ್‌ ವಾಂಗ್‌-ಫಾನ್‌ ಜೆಂದಾಂಗ್‌ ವಿರುದ್ಧ 3-0 ಅಂತರದ ಸೋಲುಂಡರು.

ಸ್ಕ್ವಾಷ್‌: ವನಿತೆಯರು ಬೆಳ್ಳಿಯಿಂದ ಕಂಚಿಗೆ
ವನಿತೆ ಯರ ಸ್ಕ್ವಾಷ್‌ ಸ್ಪರ್ಧೆಯಲ್ಲಿ ಭಾರತ ದೊಡ್ಡ ಪದ‌ದಿಂದ ವಂಚಿತವಾಗಿ ಕಂಚಿಗೆ ಸಮಾ ಧಾನಪಟ್ಟಿತು. ಅನುಭವಿ ಗಳಾದ ಜೋಶ್ನಾ ಚಿನ್ನಪ್ಪ, ಅನಾಹತ್‌ ಸಿಂಗ್‌, ತನ್ವಿ ಖನ್ನಾ ಅವರನ್ನೊಳಗೊಂಡ ಭಾರತ ತಂಡ ಶುಕ್ರವಾರದ ಸೆಮಿ ಫೈನಲ್‌ನಲ್ಲಿ ಹಾಂಕಾಂಗ್‌ಗೆ
1-2ರಿಂದ ಶರಣಾಗಿ ಪ್ರಶಸ್ತಿ ಸುತ್ತಿನ ಅವಕಾಶವನ್ನು ಕಳೆದು ಕೊಂಡಿತು. ಕಳೆದ ಜಕಾರ್ತಾ ಏಷ್ಯಾಡ್‌ನ‌ಲ್ಲಿ ನಮ್ಮ ವನಿತಾ ತಂಡ ಬೆಳ್ಳಿ ಪದಕ ಗೆದ್ದಿತ್ತು.

ಸೆಮಿಫೈನಲ್‌ನ 3 ಗೇಮ್‌ಗಳಲ್ಲಿ ಜಯಿಸಿದ್ದು ಜೋಶ್ನಾ ಚಿನ್ನಪ್ಪ ಮಾತ್ರ. ದ್ವಿತೀಯ ಪಂದ್ಯದಲ್ಲಿ ಅವರು ವಿಶ್ವ ರ್‍ಯಾಂಕಿಂಗ್‌ನಲ್ಲಿ 24ನೇ ಸ್ಥಾನದಲ್ಲಿರುವ ಟೆ ಲಾಕ್‌ ಹೊ ಅವರನ್ನು 3-2ರಿಂದ ಮಣಿಸುವಲ್ಲಿ ಯಶಸ್ವಿಯಾದರು. ಮೊದಲ ಪಂದ್ಯದಲ್ಲಿ ತನ್ವಿ ಖನ್ನಾ ಅವರು ಸಿನ್‌ ಯುಕ್‌ ಚಾನ್‌ ಕೈಯಲ್ಲಿ 3-0 ಅಂತರದ ಸೋಲುಂಡಿದ್ದರು.

ನಿರ್ಣಾಯಕ ಪಂದ್ಯದಲ್ಲಿ ಉನ್ನತ ರ್‍ಯಾಂಕಿಂಗ್‌ನ ಅನುಭವಿ ಆಟಗಾರ್ತಿ ಲೀ ಕಾ ಯಿ ವಿರುದ್ಧ 15 ವರ್ಷದ ಅನಾಹತ್‌ ದಿಟ್ಟ ಹೋರಾಟ ನೀಡಿಯೂ 3-0 ಅಂತರದಿಂದ ಸೋಲು ಕಾಣಬೇಕಾಯಿತು.

ಬ್ಯಾಡ್ಮಿಂಟನ್‌ ಪುರುಷರಿಗೆ ಪದಕ ಖಚಿತ

ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಭಾರತದ ಪುರುಷರು ಪದಕವನ್ನು ಖಾತ್ರಿಗೊಳಿಸಿದರೆ, ವನಿತೆಯರ ಆಟ ಕೊನೆಗೊಂಡಿದೆ. ಭಾರತ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ನೇಪಾಲವನ್ನು 3-0 ಅಂತರದಿಂದ ಮಣಿಸಿದರೆ, ವನಿತೆಯರು ಇದೇ ಹಂತದಲ್ಲಿ ಥಾಯ್ಲೆಂಡ್‌ ವಿರುದ್ಧ ಇಷ್ಟೇ ಅಂತರದಿಂದ ಎಡವಿದರು.

ಪುರುಷರಿಗೆ ನೇಪಾಲ ಯಾವುದೇ ರೀತಿಯಲ್ಲಿ ಸವಾಲಾಗಲಿಲ್ಲ. ಲಕ್ಷ್ಯ ಸೇನ್‌ 21-5, 21-8ರಿಂದ ಪ್ರಿನ್ಸ್‌ ದಹಾಲ್‌ ಅವರನ್ನು ಮಣಿಸಿದರು. ಕೆ. ಶ್ರೀಕಾಂತ್‌ 21-14, 21-13ರಿಂದ ಸುನೀಲ್‌ ಜೋಶಿ ಆಟವನ್ನು ಕೊನೆಗೊಳಿಸಿದರು. 3ನೇ ಪಂದ್ಯದಲ್ಲಿ ಮಿಥುನ್‌ ಮಂಜುನಾಥ್‌ 21-2, 21-17ರಿಂದ ಬಿಷ್ಣು ಕತುವಾಲ್‌ಗೆ ಸೋಲುಣಿಸಿದರು. ಈ ಜಯದಿಂದ ಭಾರತಕ್ಕೆ ಕಂಚಿನ ಪದಕ ಖಚಿತವಾಗಿದೆ.

ಸಿಂಧು ಪರಾಭವ
ಥಾಯ್ಲೆಂಡ್‌ ವಿರುದ್ಧ ನಡೆದ ವನಿತಾ ತಂಡ ಸ್ಪರ್ಧೆಯಲ್ಲಿ ಭಾರತ 3-0 ಅಂತರದಿಂದ ಮುಗ್ಗರಿಸಿತು. ಸೋಲಿನ ಹಾದಿಯಲ್ಲಿ ಪಿ.ವಿ. ಸಿಂಧು ಒಂದು ಗೇಮ್‌ ಜಯಿಸಿದ್ದಷ್ಟೇ ಭಾರತದ ಸಾಧನೆ.

ಟಾಪ್ ನ್ಯೂಸ್

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.