Team India; ಆಸೀಸ್ ಸರಣಿಗೆ ರೋಹಿತ್, ವಿರಾಟ್ ಯಾಕಿಲ್ಲ..: ಉತ್ತರಿಸಿದ ಕೋಚ್ ದ್ರಾವಿಡ್

Team Udayavani, Sep 22, 2023, 11:13 AM IST

Team India; ಆಸೀಸ್ ಸರಣಿಗೆ ರೋಹಿತ್, ವಿರಾಟ್ ಯಾಕಿಲ್ಲ..: ಉತ್ತರಿಸಿದ ಕೋಚ್ ದ್ರಾವಿಡ್

ಮೊಹಾಲಿ: ಏಕದಿನ ವಿಶ್ವಕಪ್ ಗೆ ಸಿದ್ದತೆ ನಡೆಸುತ್ತಿರುವ ಭಾರತ ತಂಡವು ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಮೊದಲೆರಡು ಪಂದ್ಯಗಳಿಗೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ್ದು, ಕೆ.ಎಲ್ ರಾಹುಲ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಕ್ರಿಕೆಟ್ ವಿಶ್ವಕಪ್ 2023 ಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತಾಜಾವಾಗಿರಲು ಬಯಸಿದ್ದರಿಂದ ವಿಶ್ರಾಂತಿ ನೀಡಲಾಗಿದೆ ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಗುರುವಾರ ಹೇಳಿದರು.

ಮೊಹಾಲಿಯಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯು ಐಸಿಸಿ ಕ್ರಿಕೆಟ್ ವಿಶ್ವಕಪ್‌ ಗೆ ಮೊದಲು ಇದು ಭಾರತದ ಅಂತಿಮ ಸರಣಿಯಾಗಿದೆ. “ನಮ್ಮ ಕೆಲವು ಹುಡುಗರು ಮೊದಲ ಎರಡು ಪಂದ್ಯಗಳನ್ನು ಆಡುತ್ತಿಲ್ಲ. ನಾವು ನಮ್ಮ ವೇಗಿಗಳನ್ನು ಸ್ವಲ್ಪ ಬದಲಿಸಿ ಆಡುತ್ತಿದ್ದೇವೆ. ಇತರ ಕೆಲವು ಹುಡುಗರಿಗೆ ವಿಶ್ವಕಪ್‌ಗೆ ಮುನ್ನ ಮೂರು ಕಠಿಣ ಪಂದ್ಯಗಳು ಆಡಲು ಅವಕಾಶ ನೀಡಿರುವುದು ಸಂತೋಷವಾಗುತ್ತದೆ” ಎಂದು ದ್ರಾವಿಡ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

“ರೋಹಿತ್ ಮತ್ತು ವಿರಾಟ್ ಅವರು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿ ವಿಶ್ವಕಪ್‌ ನ ಮೊದಲ ಪಂದ್ಯವನ್ನು ಆಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಅವರು ಆಡಿದ ಕ್ರಿಕೆಟ್‌ ನಿಂದ ದೊಡ್ಡ ಆಟಗಳಿಗೆ ತಮ್ಮನ್ನು ಹೇಗೆ ಸಿದ್ಧಪಡಿಸುವುದು ಎಂದು ಅವರಿಗೆ ತಿಳಿದಿದೆ. ಅವರು ದೊಡ್ಡ ಈವೆಂಟ್ ಗೆ ಹೇಗೆ ತಯಾರಿ ಮಾಡಲು ಬಯಸುತ್ತಾರೆ ಎಂಬುದನ್ನು ನಾವು ಅವರೊಂದಿಗೆ ಚರ್ಚಿಸುತ್ತೇವೆ. ಈ ಚರ್ಚೆಗಳ ಆಧಾರದ ಮೇಲೆ ನಾವು ಈ ಪರಸ್ಪರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ದ್ರಾವಿಡ್ ಹೇಳಿದರು.

ಇದನ್ನೂ ಓದಿ:Cricket Stories; ಆ 2 ರನ್…ದ.ಆಫ್ರಿಕಾ ಮರೆಯಲಾಗದ ವಿಶ್ವಕಪ್ ಹೀರೋ ಲ್ಯಾನ್ಸ್ ಕ್ಲೂಸನರ್

ಸ್ಪಿನ್-ಬೌಲಿಂಗ್ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಒಂದು ವರ್ಷದ ನಂತರ ಏಕದಿನ ತಂಡಕ್ಕೆ ಮರಳಿದ ಬಗ್ಗೆ ಮಾತನಾಡಿದ ದ್ರಾವಿಡ್, ಸ್ಪಿನ್ನರ್ ಯಾವಾಗಲೂ ನಮ್ಮ ಯೋಜನೆಯಲ್ಲಿರುತ್ತಾರೆ ಎಂದರು.

“ಅಶ್ವಿನ್ ಅವರಂತ ಅನುಭವಿಯನ್ನು ಹೊಂದಿರುವುದು ನಮಗೆ ಯಾವಾಗಲೂ ಒಳ್ಳೆಯದು. ಅವರು ಎಂಟನೇ ಕ್ರಮಾಂಕದಲ್ಲಿ ಬ್ಯಾಟ್‌ ನೊಂದಿಗೆ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಯಾರಾದರೂ ಗಾಯಗೊಂಡ ಸಂದರ್ಭದಲ್ಲಿ ಅಥವಾ ಅವಕಾಶವನ್ನು ತೆರೆದಾಗ ನಾವು ಎದುರು ನೋಡುತ್ತಿದ್ದ ವ್ಯಕ್ತಿ ಅವರು. ಅವರು ಇತ್ತೀಚೆಗೆ ಹೆಚ್ಚು ಏಕದಿನ ಕ್ರಿಕೆಟ್ ಆಡಿಲ್ಲ, ಆದರೆ ಅವರ ಅನುಭವದಿಂದ ಅದನ್ನು ನಿಭಾಯಿಸಬಹುದು,” ಎಂದು ಕೋಚ್ ಹೇಳಿದರು.

ಟಾಪ್ ನ್ಯೂಸ್

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.