ಬೇರು ಬಿಟ್ಟ ರೂಟ್ -ಬೆರಿಸ್ಟೋ: ಎಜ್ ಬಾಸ್ಟನ್ ಟೆಸ್ಟ್ ಗೆದ್ದ ಇಂಗ್ಲೆಂಡ್
Team Udayavani, Jul 5, 2022, 4:31 PM IST
ಬರ್ಮಿಂಗ್ ಹ್ಯಾಂ: ಜೋ ರೂಟ್ ಮತ್ತು ಜಾನಿ ಬೆರಿಸ್ಟೋ ಬ್ಯಾಟಿಂಗ್ ಸಾಹಸದ ನೆರವಿನಿಂದ ಎಜ್ ಬಾಸ್ಟನ್ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ತಂಡ ಗೆದ್ದುಕೊಂಡಿದೆ.
ಭಾರತ ನೀಡಿದ 378 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಕೇವಲ ಮೂರು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. 269 ರನ್ ಗಳ ಜೊತೆಯಾಟವಾಡಿದ ಜೋ ರೂಟ್ ಮತ್ತು ಬೆರಿಸ್ಟೋ ಇಬ್ಬರೂ ಶತಕ ಸಿಡಿಸಿ ಸಂಭ್ರಮಿಸಿದರು.
ಜೋ ರೂಟ್ ಅಜೇಯ 142 ರನ್ ಬಾರಿಸಿದರೆ, ಮೊದಲ ಇನ್ನಿಂಗ್ಸ್ ನಲ್ಲೂ ಶತಕ ಭಾರಿಸಿದ್ದ ಜಾನಿ ಬೆರಿಸ್ಟೋ ಅಜೇಯ 114 ರನ್ ಗಳಿಸಿದರು.
ಇದನ್ನೂ ಓದಿ:ಚಾರ್ಲಿ ಕಲೆಕ್ಷನ್ 150 ಕೋಟಿ!: ಲಾಭದಲ್ಲಿ ಶ್ವಾನಗಳಿಗೂ ಪಾಲು
2-1ರ ಸರಣಿ ಮುನ್ನಡೆಯೊಂದಿಗೆ ಅಂತಿಮ ಟೆಸ್ಟ್ ಪಂದ್ಯವಾಡಲು ಬಂದಿದ್ದ ಭಾರತ ತಂಡ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು. ಸರಣಿ 2-2 ರಲ್ಲಿ ಸಮಬಲವಾಯಿತು.