![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ಮಾತು ತಪ್ಪದ ಬೌಶಾರ್ಡ್ ಬೆಟ್ಟಿಂಗ್ ಸೋಲು; ಅಭಿಮಾನಿ ಜತೆ ಡೇಟಿಂಗ್!
Team Udayavani, Feb 19, 2017, 3:45 AM IST
![Eugenie-Bouchard.jpg](https://www.udayavani.com/wp-content/uploads/2017/02/18/Eugenie-Bouchard-620x393.jpg)
ನ್ಯೂಯಾರ್ಕ್: ಅಮೆರಿಕ ಬಾಸ್ಕೆಟ್ಬಾಲ್ ಲೀಗ್ (ಎನ್ಬಿಎ) ಬಗ್ಗೆ ಎಲ್ಲರಿಗೂ ಗೊತ್ತು. ಹಾಗೆಯೇ ಕೆನಡಾ ಟೆನಿಸ್ ತಾರೆ ಯುಗಿನಿ ಬೌಶರ್ಡ್ ಬಗ್ಗೆಯೂ ತಿಳಿದಿದೆ. ಎನ್ಬಿಎ ವಿಶ್ವದಲ್ಲೇ ಅತಿ ಪ್ರಸಿದ್ಧ ಬಾಸ್ಕೆಟ್ಬಾಲ್ ಲೀಗ್.
ವಿಷಯವೇನೆಂದರೆ, ಫೆ. 5ರಂದು ನಡೆದ ಎನ್ಬಿಎ ಪಂದ್ಯವೊಂದರ ವೇಳೆ ಟೆನಿಸ್ ಸುಂದರಿ ಬೌಶಾರ್ಡ್ ಬಾಸ್ಕೆಟ್ಬಾಲ್ ಅಭಿಮಾನಿಯೊಂದಿಗೆ ಟ್ವೀಟರ್ನಲ್ಲಿ ಬೆಟ್ಟಿಂಗ್ ಮಾಡಿದ್ದರು. ಸೋತರೆ ತಾನು ಅಭಿಮಾನಿಯೊಂದಿಗೆ ಡೇಟಿಂಗ್ ನಡೆಸುವುದಾಗಿ ಮಾತುಕೊಟ್ಟಿದ್ದರು. ಅದನ್ನೀಗ ಈಡೇರಿಸಿದ್ದಾರೆ. ಅಷ್ಟೇ ಅಲ್ಲ, ಬೌಶಾರ್ಡ್ ತಾನು ಬಿಕಿನಿಯಲ್ಲಿರುವ ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಮೈಬಿಸಿ ಏರಿಸಿದ್ದಾರೆ!
ಫೆ. 5ರಂದು ನ್ಯೂ ಇಂಗ್ಲೆಂಡ್ ಪೇಟ್ರಿಯಾಟ್ಸ್ ಮತ್ತು ಅಟ್ಲಾಂಟಾ ಫಾಲ್ಕನ್ಸ್ ನಡುವೆ ಎನ್ಬಿಎ ಪಂದ್ಯ ನಡೆದಿತ್ತು. ಮಿಸೌÕರಿ ವಿವಿಯಲ್ಲಿ ಅಧ್ಯಯನ ಮಾಡುತ್ತಿರುವ 20 ವರ್ಷದ ವಿದ್ಯಾರ್ಥಿ ಜಾನ್ ಗೊಹೆರ್ಕೆ ಅವರು ಪೇಟ್ರಿಯಾಟ್ಸ್ ಗೆಲ್ಲುತ್ತದೆಂದು ಬೆಟ್ ಮಾಡಿದ್ದರು. ಆ ಸಂದರ್ಭದಲ್ಲಿ ಪೇಟ್ರಿಯಾಟ್ಸ್ ಸೋಲುವ ಸ್ಥಿತಿಯಲ್ಲಿತ್ತು. ಇದೇ ವೇಳೆ ಟ್ವೀಟರ್ನಲ್ಲಿ ಈ ಬೆಟ್ಟಿಂಗ್ಗೆ ಸೇರಿಕೊಂಡ ಬೌಶಾರ್ಡ್, ಪೇಟ್ರಿಯಾಟ್ಸ್ ಸೋತೇ ಸೋಲುತ್ತದೆಂದು ಬೆಟ್ ಮಾಡಿದರು. ಒಂದು ವೇಳೆ ಪೇಟ್ರಿಯಾಟ್ಸ್ ಗೆದ್ದರೆ ನೀವು ನನ್ನೊಂದಿಗೆ ಡೇಟಿಂಗ್ಗೆ ಬರಬೇಕೆಂದು ಜಾನ್ ಆಹ್ವಾನಿಸಿದ್ದರು. ಅಂತಿಮವಾಗಿ ಬೆಟ್ಟಿಂಗ್ ಸೋತ ಬೌಶಾರ್ಡ್ ಡೇಟಿಂಗ್ಗೆ ಬರುವುದಾಗಿ ಪ್ರಕಟಿಸಿಯೇ ಬಿಟ್ಟರು. ಅದನ್ನೀಗ ತಪ್ಪದೇ ನಡೆಸಿ ಜಗ ಮೆಚ್ಚಿದ ಹುಡುಗಿಯಾಗಿದ್ದಾರೆ.
ಟ್ವೀಟರ್ನಲ್ಲಿ ಬಿಸಿಬಿಸಿ ಚಿತ್ರ: ವಿಶ್ವ ಟೆನಿಸ್ ರ್ಯಾಂಕಿಂಗ್ನಲ್ಲಿ 44ನೇ ಶ್ರೇಯಾಂಕದಲ್ಲಿರುವ ಯೂಗಿನಿ ಬೌಶಾರ್ಡ್ ಟೆನಿಸ್ನಲ್ಲಿ ತಮ್ಮ ಸೌಂದರ್ಯದಿಂದಲೇ ಗಮನ ಸೆಳೆದಿದ್ದಾರೆ. ಬಿಕಿನಿಯಲ್ಲಿರುವ ಚಿತ್ರ ಪ್ರಕಟಿಸುವುದರ ಜತೆಗೆ ಜಾನ್ ಗೊಹೆರ್ಕೆಯೊಂದಿಗಿನ ಚಿತ್ರವನ್ನೂ ಪ್ರಕಟಿಸಿ ತಾನು ಡೇಟಿಂಗ್ ನಡೆಸಿದ್ದನ್ನು ಬಹಿರಂಗಪಡಿಸಿದ್ದಾರೆ.
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.