ಶತಕ ಬಾರಿಸಿದರೂ ತಂದೆಗೆ ಖುಷಿ ಆಗಿರಲಿಕ್ಕಿಲ್ಲ: ಶುಭಮನ್ ಗಿಲ್

Team Udayavani, Jan 25, 2023, 5:48 PM IST

ಶತಕ ಬಾರಿಸಿದರೂ ತಂದೆಗೆ ಖುಷಿ ಆಗಿರಲಿಕ್ಕಿಲ್ಲ: ಶುಭಮನ್ ಗಿಲ್

ಇಂದೋರ್‌: ಭಾರತದ ಓಪನಿಂಗ್‌ ಕೊರತೆಯನ್ನು ಬಹುಪಾಲು ನಿವಾರಿಸಿದ ಹೆಗ್ಗಳಿಕೆ ಶುಭಮನ್‌ ಗಿಲ್‌ ಅವರದು. ಏಕದಿನ ವಿಶ್ವಕಪ್‌ ವರ್ಷದಲ್ಲಿ ಅವರು ಪ್ರದರ್ಶಿಸುತ್ತಿರುವ ಫಾರ್ಮ್ ಗೆ ಎಲ್ಲ ದಿಕ್ಕಿನಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಅದರಲ್ಲೂ ನ್ಯೂಜಿಲ್ಯಾಂಡ್‌ ಎದುರಿನ ಅವರ ದ್ವಿಶತಕ, ಶತಕ ಸಾಧನೆಯಂತೂ ಮೇರು ಮಟ್ಟದ್ದು. 3 ಪಂದ್ಯಗಳ ಸರಣಿಯಲ್ಲಿ ಸರ್ವಾಧಿಕ 360 ರನ್‌ ಪೇರಿಸಿದ ಹೆಗ್ಗಳಿಕೆಯೂ ಗಿಲ್‌ ಅವರದಾಗಿದೆ.

ಸಹಜವಾಗಿಯೇ ಇದು ಟೀಮ್‌ ಇಂಡಿಯಾ ಅಭಿಮಾನಿಗಳೆಲ್ಲ ಖುಷಿಪಡುವ ವಿಚಾರ.ಆದರೆ ಶುಭಮನ್‌ ಗಿಲ್‌ ಅವರ ತಂದೆಗೆ ಈ ಸಾಧನೆ ಅಷ್ಟೊಂದು ಖುಷಿ ಕೊಟ್ಟಿಲ್ಲವೇ? ಇದೆಂಥ ಪ್ರಶ್ನೆ ಎನ್ನುತ್ತೀರಾ? ಸ್ವತಃ ಶುಭಮನ್‌ ಗಿಲ್‌ ಅವರೇ ಇಂಥದೊಂದು ಕುತೂಹಲದ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ಇಂದೋರ್‌ ಪಂದ್ಯ ಮುಗಿದ ಬಳಿಕ ಕೋಚ್‌ ರಾಹುಲ್‌ ದ್ರಾವಿಡ್‌ ಅವರು ಶುಭಮನ್‌ ಗಿಲ್‌ ಸಂದರ್ಶನ ನಡೆಸುತ್ತಿದ್ದಾಗ ಇಂಥದೊಂದು ಕೌತುಕದ ಸಂಗತಿ ತಿಳಿದು ಬಂತು.

“ಕಳೆದ ಕೆಲವು ತಿಂಗಳಿಂದ ನೀವು ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತ ಬಂದಿರುವಿರಿ. ಸಹಜವಾಗಿಯೇ ನಿಮ್ಮ ತಂದೆಗೆ ಬಹಳ ಖುಷಿ ಆಗಿರಬೇಕಲ್ಲವೇ?’ ಎಂದು ಪ್ರಶ್ನಿಸುತ್ತಾರೆ ರಾಹುಲ್‌ ದ್ರಾವಿಡ್‌.

ಇದಕ್ಕೆ ಗಿಲ್‌ ಕೊಟ್ಟ ಉತ್ತರ ಅಚ್ಚರಿ ಹುಟ್ಟಿಸುತ್ತದೆ. “ಇಲ್ಲ, ಪೂರ್ತಿ ಸಂತೋಷ ಆಗಿರಲಿಕ್ಕಿಲ್ಲ. ಪ್ರತೀ ಸಲವೂ ನಾನು ಉತ್ತಮ ಫಾರ್ಮ್ ಪ್ರದರ್ಶಿಸಿ ದೊಡ್ಡ ಮೊತ್ತ ಗಳಿಸಬೇಕೆಂದು ಅವರು ಬಯಸುತ್ತಾರೆ. ಇಂದು ಶತಕ ಗಳಿಸಿದೊಡನೆಯೇ ಔಟಾದುದರಿಂದ ತಂದೆ ಖುಷಿಪಡುವುದು ಅನುಮಾನ’ ಎಂಬುದಾಗಿ ಶುಭಮನ್‌ ಗಿಲ್‌ ಹೇಳಿದರು.

“ಹಾಗಾದರೆ ಜಾಸ್ತಿ ರನ್‌ ಗಳಿಸದೇ ಇದ್ದಾಗ ನಾವು ನಿಮ್ಮನ್ನು ಬಿಟ್ಟರೂ ತಂದೆ ನಿಮ್ಮನ್ನು ಬಿಡುವುದಿಲ್ಲ ಎಂದಾಯಿತು…’ ಎಂದು ರಾಹುಲ್‌ ದ್ರಾವಿಡ್‌ ಚಟಾಕಿ ಹಾರಿಸಿದರು!

ಟಾಪ್ ನ್ಯೂಸ್

ಭೂಗತ ವಾಯುಪಡೆ ನೆಲೆ ಅನಾವರಣಗೊಳಿಸಿದ ಇರಾನ್‌

ಭೂಗತ ವಾಯುಪಡೆ ನೆಲೆ ಅನಾವರಣಗೊಳಿಸಿದ ಇರಾನ್‌

ಹೊಳಲ್ಕೆರೆಯಲ್ಲಿ ಮೊಳಗಲಿದೆ ಪ್ರಜಾಧ್ವನಿ… ಬಿಜೆಪಿ ನಾಯಕರಲ್ಲಿ ನಡುಕ

ಹೊಳಲ್ಕೆರೆಯಲ್ಲಿ ಮೊಳಗಲಿದೆ ಪ್ರಜಾಧ್ವನಿ… ಬಿಜೆಪಿ ನಾಯಕರಲ್ಲಿ ನಡುಕ

ಜಿಪಂ-ತಾಪಂ ಚುನಾವಣೆ: ಫೆ.14ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಜಿಪಂ-ತಾಪಂ ಚುನಾವಣೆ: ಫೆ.14ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಯಲ್ಲಾಪುರ: ಹೆಣ್ಣು ಚಿರತೆ ಅಸಹಜ ಸಾವು, ಪ್ರಕರಣ ದಾಖಲು

ಯಲ್ಲಾಪುರ: ಹೆಣ್ಣು ಚಿರತೆ ಅಸಹಜ ಸಾವು, ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

ಮಳೆ ಬಂದಾಗ ಅಣಬೆ ಹುಟ್ಟುತ್ತದೆ…. ಶಾಸಕ ಮಠಂದೂರು ಹೇಳಿಕೆಗೆ ಪುತ್ತಿಲ ಬೆಂಬಲಿಗರ ಆಕ್ರೋಶ

ಮಳೆ ಬಂದಾಗ ಅಣಬೆ ಹುಟ್ಟುತ್ತದೆ…. ಶಾಸಕ ಮಠಂದೂರು ಹೇಳಿಕೆಗೆ ಪುತ್ತಿಲ ಬೆಂಬಲಿಗರ ಆಕ್ರೋಶ

ಬರಲಿದೆ ಕ್ಯೂಆರ್‌ ಕೋಡ್‌ ಆಧರಿತ ಕಾಯಿನ್‌ ವೆಂಡಿಂಗ್‌ ಮಷಿನ್‌

ಬರಲಿದೆ ಕ್ಯೂಆರ್‌ ಕೋಡ್‌ ಆಧರಿತ ಕಾಯಿನ್‌ ವೆಂಡಿಂಗ್‌ ಮಷಿನ್‌

ದಾವಣಗೆರೆ: ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದವನ ರಕ್ಷಿಸಿದ ಸ್ಥಳೀಯರು

ದಾವಣಗೆರೆ: ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದವನ ರಕ್ಷಿಸಿದ ಸ್ಥಳೀಯರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-4

ಭೂಕಂಪ: ಕಟ್ಟಡಗಳಡಿ ಸಿಲುಕಿ ಟರ್ಕಿಯ ಖ್ಯಾತ ಫುಟ್ಬಾಲ್‌ ಆಟಗಾರ ಮೃತ್ಯು

ರಣಜಿ ಟ್ರೋಫಿ ಸೆಮಿಫೈನಲ್‌: ಅಜೇಯ ಕರ್ನಾಟಕಕ್ಕೆ ಸೌರಾಷ್ಟ್ರ ಸವಾಲು

ರಣಜಿ ಟ್ರೋಫಿ ಸೆಮಿಫೈನಲ್‌: ಅಜೇಯ ಕರ್ನಾಟಕಕ್ಕೆ ಸೌರಾಷ್ಟ್ರ ಸವಾಲು

 ನಾಗ್ಪುರ ಟೆಸ್ಟ್‌: ಭಾರತದಿಂದ ತ್ರಿವಳಿ ಸ್ಪಿನ್‌ ದಾಳಿ?

 ನಾಗ್ಪುರ ಟೆಸ್ಟ್‌: ಭಾರತದಿಂದ ತ್ರಿವಳಿ ಸ್ಪಿನ್‌ ದಾಳಿ?

ಫೆ. 12: ಮಣಿಪಾಲ ಮ್ಯಾರಥಾನ್‌; ಮಕ್ಕಳ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುವ ಯತ್ನ

ಫೆ. 12: ಮಣಿಪಾಲ ಮ್ಯಾರಥಾನ್‌; ಮಕ್ಕಳ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುವ ಯತ್ನ

ಅಬುಧಾಬಿ ಓಪನ್‌: ಸಾನಿಯಾ ಜೋಡಿಗೆ ಆಘಾತ

ಅಬುಧಾಬಿ ಓಪನ್‌: ಸಾನಿಯಾ ಜೋಡಿಗೆ ಆಘಾತ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

ಭೂಗತ ವಾಯುಪಡೆ ನೆಲೆ ಅನಾವರಣಗೊಳಿಸಿದ ಇರಾನ್‌

ಭೂಗತ ವಾಯುಪಡೆ ನೆಲೆ ಅನಾವರಣಗೊಳಿಸಿದ ಇರಾನ್‌

ಹೊಳಲ್ಕೆರೆಯಲ್ಲಿ ಮೊಳಗಲಿದೆ ಪ್ರಜಾಧ್ವನಿ… ಬಿಜೆಪಿ ನಾಯಕರಲ್ಲಿ ನಡುಕ

ಹೊಳಲ್ಕೆರೆಯಲ್ಲಿ ಮೊಳಗಲಿದೆ ಪ್ರಜಾಧ್ವನಿ… ಬಿಜೆಪಿ ನಾಯಕರಲ್ಲಿ ನಡುಕ

ಜಿಪಂ-ತಾಪಂ ಚುನಾವಣೆ: ಫೆ.14ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಜಿಪಂ-ತಾಪಂ ಚುನಾವಣೆ: ಫೆ.14ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಯಲ್ಲಾಪುರ: ಹೆಣ್ಣು ಚಿರತೆ ಅಸಹಜ ಸಾವು, ಪ್ರಕರಣ ದಾಖಲು

ಯಲ್ಲಾಪುರ: ಹೆಣ್ಣು ಚಿರತೆ ಅಸಹಜ ಸಾವು, ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

ಹಳ್ಳದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ: ಪೊಲೀಸರಿಂದ ತನಿಖೆ

ಹಳ್ಳದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ: ಪೊಲೀಸರಿಂದ ತನಿಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.