
ಹಾಕಿ ವಿಶ್ವಕಪ್: ಜಪಾನ್ ವಿರುದ್ಧ ಗೆದ್ದ ದಕ್ಷಿಣ ಕೊರಿಯ
Team Udayavani, Jan 18, 2023, 12:08 AM IST

ಭುವನೇಶ್ವರ: ಹಾಕಿ ವಿಶ್ವಕಪ್‌ನಲ್ಲಿ ದಕ್ಷಿಣ ಕೊರಿಯ ತಂಡವು ಜಪಾನ್ ವಿರುದ್ಧ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದೆ.
ಬಿ ಗುಂಪು ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯ ಉತ್ತಮ ಆಟ ಪ್ರದರ್ಶಿಸಿತು. ವಿಶೇಷವೆಂದರೆ, ಮೊದಲ ಕ್ವಾರ್ಟರ್‌ನಲ್ಲಿ ಇತ್ತಂಡಗಳು ತಲಾ ಒಂದು ಗೋಲು ಬಾರಿಸಿದ್ದವು. ಆದರೆ ಎರಡನೇ ಕ್ವಾರ್ಟರ್‌ನಲ್ಲಿ ದಕ್ಷಿಣ ಕೊರಿಯಾ ಇನ್ನೊಂದು ಗೋಲು ಹೊಡೆದು, 2-1ರಿಂದ ಮುನ್ನಡೆ ಕಾಯ್ದುಕೊಂಡಿತು. ಲೀ ಜಂಗ್ವಿನ್ ಅವರೇ ಎರಡೂ ಗೋಲುಗಳನ್ನು ಬಾರಿಸಿದರು. ಜಪಾನ್ ಪರ ನಾಗಯೋಶಿ ಕೆನ್ ಅವರು ಒಂದು ಗೋಲ್ ಬಾರಿಸಿದರು.
ಜರ್ಮನಿ-ಬೆಲ್ಜಿಯಂ ಡ್ರಾ
ಬಿ ಗುಂಪಿನ ಮತ್ತೊಂದು ಪಂದ್ಯದಲ್ಲಿ ಜರ್ಮನಿ ಮತ್ತು ಬೆಲ್ಜಿಯಂ ತಂಡಗಳು ತಲಾ 2 ಗೋಲು ಬಾರಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡವು. ಜರ್ಮನಿ ಪರ ವೆಲ್ಲೆನ್ ನಿಕ್ಲೋಸ್, ಗ್ರಾಮ್‌ಬುಶ್ ಟಾಪ್ ತಲಾ ಒಂದು ಗೋಲು, ಚಾರ್ಲಿಕ್ ಸೆಡ್ರಿಕ್, ವೆಗ್ನಾಜ್ ವಿಕ್ಟರ್ ಬೆಲ್ಜಿಯಂ ಪರ ತಲಾ ಒಂದು ಗೋಲು ಬಾರಿಸಿದರು.
ಟಾಪ್ ನ್ಯೂಸ್
