Football; ಗೋಲ್ಕೀಪರ್ ಸುಬ್ರತ ಪಾಲ್ ವಿದಾಯ
Team Udayavani, Dec 8, 2023, 11:08 PM IST
ಕೋಲ್ಕತಾ: ಭಾರತೀಯ ಫುಟ್ಬಾಲ್ನ ಖ್ಯಾತ ಗೋಲ್ಕೀಪರ್ ಸುಬ್ರತ ಪಾಲ್ ಶುಕ್ರವಾರ ವಿದಾಯ ಘೋಷಿಸಿದರು. ಇದರೊಂದಿಗೆ ಪಾಲ್ ಅವರ 16 ವರ್ಷಗಳ ಸುದೀರ್ಘ ಫುಟ್ಬಾಲ್ ವೃತ್ತಿಬದುಕಿಗೆ ತೆರೆ ಬಿತ್ತು.
“ಥ್ಯಾಂಕ್ ಯೂ ಸ್ಪೈಡರ್ಮ್ಯಾನ್. ಬ್ಲೂ ಟೈಗರ್ ಪಾಲಕ ಇಂದು ತಮ್ಮ ಗ್ಲೌಸ್ಗಳನ್ನು ಕಳಚಿಟ್ಟರು’ ಎಂಬುದಾಗಿ ಅಖೀಲ ಭಾರತ ಫುಟ್ಬಾಲ್ ಫೆಡರೇಶನ್ ಸುಬ್ರತ ಪಾಲ್ ಅವರ ಕರ್ತವ್ಯನಿಷ್ಠೆಯನ್ನು ಕೊಂಡಾಡಿದೆ.
36 ವರ್ಷದ ಸುಬ್ರತ ಪಾಲ್ ಭಾರತ ಪರ 65 ಪಂದ್ಯಗಳನ್ನಾಡಿದ್ದಾರೆ. 2007ರಲ್ಲಿ ಲೆಬನಾನ್ ವಿರುದ್ಧದ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು.
ಸುಮಾರು 35 ಗೋಲುಗಳನ್ನು ತಡೆದ ಸಾಹಸ ಪಾಲ್ ಅವರದು. 2018ರ ವಿಶ್ವಕಪ್ ಅರ್ಹತಾ ಪಂದ್ಯಾವಳಿಯ ವೇಳೆ ಭಾರತದ ನೇತೃತ್ವವನ್ನೂ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ