ಇಂದಿನಿಂದ ಫುಟ್‌ಬಾಲ್‌ ವಿಶ್ವಕಪ್‌ ಕ್ವಾರ್ಟರ್‌ ಸೆಣೆಸಾಟ


Team Udayavani, Dec 9, 2022, 6:50 AM IST

ಇಂದಿನಿಂದ ಫುಟ್‌ಬಾಲ್‌ ವಿಶ್ವಕಪ್‌ ಕ್ವಾರ್ಟರ್‌ ಸೆಣೆಸಾಟ

ದೋಹಾ: ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಕೂಟ ರೋಮಾಂಚಕ ಹಂತಕ್ಕೆ ತಲುಪಿದೆ. ಶುಕ್ರವಾರದಿಂದ ಕ್ವಾರ್ಟರ್‌ ಫೈನಲ್‌ ಹೋರಾಟ ಆರಂಭಗೊಳ್ಳಲಿದ್ದು ವಿಶ್ವದ ಬಲಿಷ್ಠ ಎಂಟು ತಂಡಗಳು ಪ್ರಶಸ್ತಿಗಾಗಿ ಹೋರಾಡಲಿವೆ.

ಶುಕ್ರವಾರದ ಮೊದಲೆರಡು ಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ಬ್ರೆಝಿಲ್‌ ತಂಡವು ಕ್ರೊವೇಷ್ಯಾವನ್ನು ಹಾಗೂ ನೆದರ್ಲೆಂಡ್ಸ್‌ ತಂಡವು ಅರ್ಜೆಂಟೀನವನ್ನು ಎದುರಿಸಲಿದೆ. ಶನಿವಾರದ ಎರಡು ಪಂದ್ಯಗಳಲ್ಲಿ ಮೊರೊಕ್ಕೊ ತಂಡವು ಪೋರ್ಚುಗಲ್‌ ಹಾಗೂ ಹಾಲಿ ಚಾಂಪಿಯನ್‌ ಫ್ರಾನ್ಸ್‌ ತಂಡವು ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ.

ಬ್ರೆಝಿಲ್‌ ಫೇವರಿಟ್‌: ಐದು ಬಾರಿಯ ಚಾಂಪಿಯನ್‌ ಬ್ರೆಝಿಲ್‌ ತಂಡವು ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವಾಗಿದೆ. ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಅದು ದಕ್ಷಿಣ ಕೊರಿಯವನ್ನು 4-1 ಗೋಲುಗಳಿಂದ ಸೋಲಿಸಿರುವುದು ತಂಡದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಕೇವಲ 36  ನಿಮಿಷಗಳ ಅಂತರದಲ್ಲಿ ನಾಲ್ಕು ಭರ್ಜರಿ ಗೋಲು ದಾಖಲಿಸಿದ್ದ ಬ್ರೆಝಿಲ್‌ ಅದ್ಭುತ ರೀತಿಯಲ್ಲಿಯೇ ಕ್ವಾರ್ಟರ್‌ ಫೈನಲಿಗೆ ನೆಗೆದಿತ್ತು.

ತಂಡದ ನಂಬಿಗಸ್ಥ ಆಟಗಾರ ನೇಮಾರ್‌ ಸಹಿತ ಯುವ ಆಟಗಾರರಾದ ವಿನಿಸಿಯಸ್‌ ಜೂನಿಯರ್‌, ಲುಕಾಸ್‌ ಪಕ್ವೆಟ ಮತ್ತು ರಿಚಾರ್ಲಿಸನ್‌ ಅವರು ತಂಡದಲ್ಲಿದ್ದು ಶ್ರೇಷ್ಠ ನಿರ್ವಹಣೆ ನೀಡುವ ಉತ್ಸಾಹದಲ್ಲಿದ್ದಾರೆ. ಇವರ ಜತೆ ಗಾಯಗೊಂಡ ಅಲೆಕ್ಸ್‌ ಸ್ಯಾಂಡ್ರೊ ಸಹಿತ ಕೆಲವು ಆಟಗಾರರು ತಂಡಕ್ಕೆ ಮರಳಿದ್ದಾರೆ. ಹೀಗಾಗಿ ಬ್ರೆಝಿಲ್‌ ಪರಿಪೂರ್ಣ ತಂಡವಾಗಿ ಕ್ವಾರ್ಟರ್‌ ಫೈನಲ್‌ನಲ್ಲಿ ಕ್ರೊವೇಷ್ಯಾ ವಿರುದ್ಧ ಹೋರಾಡುವುದು ಖಚಿತವಾಗಿದೆ.

ಈ ಹೋರಾಟವು ಕ್ರೊವೇಷ್ಯಾದ ಡೆಜಾನ್‌ ಲೊವ್ರೆನ್‌ ಮತ್ತು ಬ್ರೆಝಿಲ್‌ನ ನೇಮಾರ್‌ ನಡುವಣ ಸೆಣೆಸಾಟವೆಂದು ಪರಿಗಣಿಸಲಾಗಿದೆ. ಅಂಗಣದ ಬಲ ಬದಿಯಲ್ಲಿ ಆಡಲಿರುವ ಲೊವ್ರೆನ್‌ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅವರಿಗೆ ಲೀಪ್‌ಜಿಗ್‌ ಮತ್ತು ಜೊಸ್ಕೊ ಗ್ವಾರ್ಡಿಯೋಲ್‌ ನೆರವಾಗುವ ಸಾಧ್ಯತೆಯಿದೆ. 33ರ ಹರೆಯದ ಲೊವ್ರೆನ್‌ ಮತ್ತು ನೇಮಾರ್‌ ಪರಸ್ಪರ ಮೂರು ಬಾರಿ ಮುಖಾಮುಖಿಯಾಗಿದ್ದರೂ ಬ್ರೆಝಿಲ್‌ನ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಸಾಧ್ಯವಾಗಲಿಲ್ಲ.

ಐದು ಬಾರಿ ಮುಖಾಮುಖಿ: ಬ್ರೆಝಿಲ್‌ ಮತ್ತು ಕ್ರೊವೇಷ್ಯಾ ಒಟ್ಟಾರೆ ಐದು ಬಾರಿ ಮುಖಾಮುಖಿಯಾಗಿದ್ದು ಬ್ರೆಝಿಲ್‌ ಮೂರು ಬಾರಿ ಗೆಲುವು ಸಾಧಿಸಿದೆ. ಇನ್ನೆರಡು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದ್ದವು.

ಪೀಲೆ ದಾಖಲೆ ಸನಿಹ ನೇಮಾರ್‌: ಉತ್ತಮ ಫಾರ್ಮ್ನಲ್ಲಿರುವ ನೇಮಾರ್‌ ಅವರಿಗೆ ಬ್ರೆಝಿಲ್‌ ಪರ ಗರಿಷ್ಠ ಗೋಲು ಹೊಡೆದಿರುವ ಪೀಲೆ ದಾಖಲೆ (77 ಗೋಲು) ಸಮಗಟ್ಟಲು ಇನ್ನೊಂದು ಗೋಲಿನ ಆವಶ್ಯಕತೆಯಿದೆ. ನೇಮಾರ್‌ ತನ್ನ 76ನೇ ಗೋಲನ್ನು ದಕ್ಷಿಣ ಕೊರಿಯ ವಿರುದ್ಧ ಹೊಡೆದಿದ್ದರು ಮತ್ತು ಅದನ್ನು ಪೀಲೆ ಅವರಿಗೆ ಅರ್ಪಿಸಿದ್ದರು.

ಲೊವ್ರೆನ್ ಅವರಲ್ಲದೇ 20ರ ಹರೆಯದ ಗ್ವಾರ್ಡಿಯೋಲ್‌ ಅದ್ಭುತ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. ಹಲವು ಬಾರಿ ಇತರ ಆಟಗಾರರ ಜತೆ ಹೋರಾಡಿ ಎದುರಾಳಿ ತಂಡದ ಗೋಲು ಹೊಡೆಯುವ ಅವಕಾಶವನ್ನು ತಪ್ಪಿಸಿದ್ದಾರೆ. ಕತಾರ್‌ನಲ್ಲಿ ಇಷ್ಟರವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಕ್ರೊವೇಷ್ಯಾ ಎದುರಾಳಿಗೆ ಕೇವಲ ಎರಡು ಗೋಲು ಬಿಟ್ಟುಕೊಟ್ಟಿರುವುದು ಗಮನಿಸಬೇಕಾದ ಅಂಶವಾಗಿದೆ. ಇದೀಗ ತಂಡದ ಬಲುದೊಡ್ಡ ಸವಾಲು ಬ್ರೆಝಿಲ್‌ ಓಟಕ್ಕೆ ಬ್ರೇಕ್‌ ಹಾಕುವುದು ಆಗಿದೆ.

ಬ್ರೆಝಿಲ್‌ ಅದ್ಭುತ: ಇಷ್ಟರವರೆಗಿನ ಪಂದ್ಯಗಳನ್ನು ಗಮನಿಸಿದರೆ ಪೂರ್ಣ  ಪ್ರಮಾಣದ ಬ್ರೆಝಿಲ್‌ ಅದ್ಭುತ ತಂಡವಾಗಿದೆ ಎಂದು ಕ್ರೊವೇಷ್ಯಾ ಕೋಚ್‌ ಜ್ಲಾಟ್ಕೊ ಡ್ಯಾಲಿಕ್‌ ಹೇಳಿದ್ದಾರೆ. ಆಟಗಾರರ ಗುಣಮಟ್ಟ, ಕೌಶಲ ಮತ್ತು ಮೌಲ್ಯವನ್ನು ಗಮನಿಸಿದರೆ ತಂಡವು ಅದ್ಭುತವೆಂದು ಹೇಳಬಹುದು. ನಾವು ಇದೀಗ ಅವರನ್ನು ಎದುರಿಸಬೇಕು ಎಂದು ಡ್ಯಾಲಿಕ್‌ ತಿಳಿಸಿದರು.

ಟಾಪ್ ನ್ಯೂಸ್

Kichha Sudeep met dk shivakumar

ಸುದೀಪ್ ಭೇಟಿಯಾದ ಡಿಕೆ ಶಿವಕುಮಾರ್: ಕಾಂಗ್ರೆಸ್ ಪಕ್ಷ ಸೇರುತ್ತಾರಾ ಕಿಚ್ಚ?

air india

ಏರ್ ಇಂಡಿಯಾ ವಿಮಾನದ ಇಂಜಿನ್ ನಲ್ಲಿ ಬೆಂಕಿ; ತುರ್ತು ಲ್ಯಾಂಡಿಂಗ್

NIA

ಮುಂಬಯಿಯಲ್ಲಿ ತಾಲಿಬಾನ್ ದಾಳಿ: ಎನ್ ಐಎಗೆ ಬೆದರಿಕೆ ಮೇಲ್

joginder sharma

ಕ್ರಿಕೆಟ್ ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ

Supreme Court

ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ: ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ

1-sadsdasd

ಅದಾನಿ ಗ್ರೂಪ್ ವಿಚಾರದಲ್ಲಿ ಸಂಸತ್ ಉಭಯ ಸದನದಲ್ಲಿ ಕೋಲಾಹಲ

1-saddasd

ರಾಜ್ಯಸಭೆಯ ಕೊನೆಯ ಸಾಲಿಗೆ ಶಿಫ್ಟ್ ಆದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

joginder sharma

ಕ್ರಿಕೆಟ್ ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ

ರಣಜಿ ಟ್ರೋಫಿ: ಉತ್ತರಾಖಂಡ್ ವಿರುದ್ಧ ಗೆದ್ದು ಸೆಮಿ ಫೈನಲ್ ಪ್ರವೇಶಿಸಿದ ಕರ್ನಾಟಕ

ರಣಜಿ ಟ್ರೋಫಿ: ಉತ್ತರಾಖಂಡ್ ವಿರುದ್ಧ ಗೆದ್ದು ಸೆಮಿ ಫೈನಲ್ ಪ್ರವೇಶಿಸಿದ ಕರ್ನಾಟಕ

ಮತ್ತೆ ಗಾಯದ ನಡುವೆ ಒಂದೇ ಕೈಯಲ್ಲಿ ಆಡಿ ಹೃದಯ ಗೆದ್ದ ಹನುಮ ವಿಹಾರಿ

ಮತ್ತೆ ಗಾಯದ ನಡುವೆ ಒಂದೇ ಕೈಯಲ್ಲಿ ಆಡಿ ಹೃದಯ ಗೆದ್ದ ಹನುಮ ವಿಹಾರಿ

thumb-3

ವಿದಾಯದ ಸೂಚನೆ ನೀಡಿದ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ

tdy-30

71ನೇ ರಾಷ್ಟ್ರೀಯ ವಾಲಿಬಾಲ್‌: ಕುಂದಾಪುರದ ಅನೂಪ್‌ ನಾಯಕ

MUST WATCH

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

udayavani youtube

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

ಹೊಸ ಸೇರ್ಪಡೆ

Kichha Sudeep met dk shivakumar

ಸುದೀಪ್ ಭೇಟಿಯಾದ ಡಿಕೆ ಶಿವಕುಮಾರ್: ಕಾಂಗ್ರೆಸ್ ಪಕ್ಷ ಸೇರುತ್ತಾರಾ ಕಿಚ್ಚ?

air india

ಏರ್ ಇಂಡಿಯಾ ವಿಮಾನದ ಇಂಜಿನ್ ನಲ್ಲಿ ಬೆಂಕಿ; ತುರ್ತು ಲ್ಯಾಂಡಿಂಗ್

ಬೈಂದೂರು:ಒತ್ತಿನೆಣೆ ಅಪಾಯಕಾರಿ ತಿರುವಿಗೆ ಮುಕ್ತಿ ಎಂದು?

ಬೈಂದೂರು:ಒತ್ತಿನೆಣೆ ಅಪಾಯಕಾರಿ ತಿರುವಿಗೆ ಮುಕ್ತಿ ಎಂದು?

NIA

ಮುಂಬಯಿಯಲ್ಲಿ ತಾಲಿಬಾನ್ ದಾಳಿ: ಎನ್ ಐಎಗೆ ಬೆದರಿಕೆ ಮೇಲ್

ಬೆಳ್ತಂಗಡಿ; ಜಿಲ್ಲೆಯಲ್ಲಿಯೇ ಪ್ರಥಮ ಮಲಿನ ನೀರು ಶುದ್ಧೀಕರಣ ಘಟಕ

ಬೆಳ್ತಂಗಡಿ; ಜಿಲ್ಲೆಯಲ್ಲಿಯೇ ಪ್ರಥಮ ಮಲಿನ ನೀರು ಶುದ್ಧೀಕರಣ ಘಟಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.