
ಮೊದಲೆರಡು ಐಪಿಎಲ್ ಪಂದ್ಯಗಳಿಗೆ ದ. ಆಫ್ರಿಕಾ ಕ್ರಿಕೆಟಿಗರು ಗೈರು
Team Udayavani, Mar 28, 2023, 5:44 AM IST

ಲಕ್ನೋ: ದಕ್ಷಿಣ ಆಫ್ರಿಕಾ ಮಾ. 31 ಮತ್ತು ಎ. 2ರಂದು ನೆದರ್ಲೆಂಡ್ಸ್ ವಿರುದ್ಧ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯವನ್ನು ಆಡಲಿದ್ದು, ಇದರಲ್ಲಿ ಪ್ರಮುಖ ಆಟಗಾರರೆಲ್ಲ ಪಾಲ್ಗೊಳ್ಳಲಿದ್ದಾರೆ.
ಹೀಗಾಗಿ ಹರಿಣಗಳ ನಾಡಿನ ಕ್ರಿಕೆಟಿಗರು ಮೊದಲೆರಡು ಐಪಿಎಲ್ ಪಂದ್ಯಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತದೆ.
ಈ ಕಾರಣಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್‌ನ ಮೊದಲೆರಡು ಐಪಿಎಲ್ ಪಂದ್ಯಗಳಲ್ಲಿ ಕೆ.ಎಲ್. ರಾಹುಲ್ ಅವರು ವೆಸ್ಟ್ ಇಂಡೀಸ್‌ನ ಕೈಲ್ ಮೇಯರ್ ಅಥವಾ ಹಾರ್ಡ್ ಹಿಟ್ಟರ್ ದೀಪಕ್ ಹೂಡಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಕ್ವಿಂಟನ್ ಡಿ ಕಾಕ್ ಗೈರಲ್ಲಿ ಇಂಥದೊಂದು ಬದಲಾವಣೆ ಕಂಡುಬರಲಿದೆ.
ಇದೇ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಆ್ಯನ್ರಿಚ್ ನೋರ್ಜೆ ಮತ್ತು ಲುಂಗಿ ಎನ್‌ಗಿಡಿ ಸೇವೆಯಿಂದ ವಂಚಿತವಾಗಲಿದೆ. ಜತೆಗೆ ಬಾಂಗ್ಲಾದ ಮುಸ್ತಫಿಜುರ್ ರೆಹಮಾನ್ ಕೂಡ ಹೊರಗುಳಿಯಲಿದ್ದಾರೆ. ಬಾಂಗ್ಲಾ ತಂಡ ಐರ್ಲೆಂಡ್ ವಿರುದ್ಧ ಸರಣಿ ಆಡುವುದರಿಂದ ಮುಸ್ತಫಿಜುರ್ “ರಾಷ್ಟ್ರೀಯ ಸೇವೆ’ಗೆ ತೆರಳಲಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
