ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಖಾತೆಯಿಂದ 1.14 ಲಕ್ಷ ರೂ. ಮಾಯ!
Team Udayavani, Dec 10, 2021, 10:45 PM IST
ಮುಂಬೈ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ, ಆನ್ಲೈನ್ ವಂಚನೆಯೊಂದಕ್ಕೆ ಬಲಿಯಾಗಿ 1.14 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಇತ್ತೀಚೆಗೆ ಕಾಂಬ್ಳಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ತನ್ನನ್ನು ತಾನು ಖಾಸಗಿ ಬ್ಯಾಂಕಿನ ಉದ್ಯೋಗಿ ಎಂದು ಹೇಳಿ, “”ಎನಿ ಡೆಸ್ಕ್ (ಒಬ್ಬರ ಮೊಬೈಲ್ ಅಥವಾ ಕಂಪ್ಯೂಟರನ್ನು ಇನ್ನೊಬ್ಬ ನಿರ್ವಹಿಸುವ ವ್ಯವಸ್ಥೆ) ಎಂಬ ಆ್ಯಪ್ ಅನ್ನು ಪ್ಲೇಸ್ಟೋರ್ನಿಂದ ಡೌನ್ಲೋಡ್ ಮಾಡಿ, ಅದರ ಕೋಡ್ ನನಗೆ ಕೊಡಿ. ಅದರಿಂದ ನಿಮ್ಮ ಕಂಪ್ಯೂಟರನ್ನು ತಾನು ಬ್ಯಾಂಕಿನಿಂದಲೇ ನಿಯಂತ್ರಿಸಿ, ಆ ಮೂಲಕ ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಅಪ್ಡೇಟ್ ಮಾಡುತ್ತೇನೆ” ಎಂದಿದ್ದಾನೆ.
ಇದನ್ನು ನಂಬಿ ಕಾಂಬ್ಳಿ, “ಎನಿ ಡೆಸ್ಕ್’ ಡೌನ್ಲೋಡ್ ಮಾಡಿ, ಕೋಡ್ ನೀಡಿದ್ದಾರೆ. ತಕ್ಷಣ ಕಾಂಬ್ಳಿಯ ಬ್ಯಾಂಕ್ ಖಾತೆ ವಿವರಗಳನ್ನು ತಿಳಿದು ಹಣ ಲಪಟಾಯಿಸಿದ್ದಾನೆ.
ಇದನ್ನೂ ಓದಿ:ಕತ್ರಿನಾ-ವಿಕ್ಕಿ ಮದುವೆ ಕೇಕ್ ತಯಾರಿಕೆಗೆ ಬರೋಬ್ಬರಿ 48 ಗಂಟೆ ಬೇಕಾಗಿತ್ತಂತೆ!