

Team Udayavani, Oct 13, 2024, 11:34 AM IST
ಮುಲ್ತಾನ್: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನದ ಹೀನಾಯ ಸೋಲಿನ ನಂತರ, ಮಾಜಿ ನಾಯಕ ಬಾಬರ್ ಅಜಮ್ (Babar Azam) ಅವರನ್ನು ಎರಡನೇ ಟೆಸ್ಟ್ ಪಂದ್ಯದಿಂದ ಕೈ ಬಿಡಲಾಗಿದೆ ಎಂದು ವರದಿಯಾಗಿದೆ.
ಬಾಬರ್ ಕಳೆದ ಕೆಲವು ತಿಂಗಳುಗಳಿಂದ ಉತ್ತಮ ಫಾರ್ಮ್ ನಲ್ಲಿಲ್ಲ. ಮುಲ್ತಾನ್ (Multan) ಟೆಸ್ಟ್ ಪಂದ್ಯದಲ್ಲಿ ರನ್ ರಾಶಿಯೇ ಹರಿದರೂ ಬಾಬರ್ ಬ್ಯಾಟಿಂಗ್ ರನ್ ಬರಲಿಲ್ಲ. ಅವರು ಎರಡು ಇನ್ನಿಂಗ್ಸ್ ಗಳಲ್ಲಿ ಒಟ್ಟು ಗಳಿಸಿದ್ದು 35 ರನ್ ಮಾತ್ರ. ಪಿಚ್ ಬ್ಯಾಟರ್‌ಗಳಿಗೆ ಸಂಪೂರ್ಣ ಸಹಾಯ ನೀಡುತ್ತಿದ್ದದ್ದರೂ ಸಹ ಅವರು ಬ್ಯಾಟಿಂಗ್ ನಲ್ಲಿ ವಿಫಲರಾದರು.
ಮುಲ್ತಾನ್ ಟೆಸ್ಟ್ ನಲ್ಲಿ ಪಾಕಿಸ್ತಾನದ ಹೀನಾಯ ಸೋಲಿನ ಕೆಲವೇ ಗಂಟೆಗಳ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಹೊಸ ಆಯ್ಕೆ ಸಮಿತಿಯನ್ನು ರಚಿಸಿದೆ. ಇದು ಬಾಬರ್ ಅವರನ್ನು ಎರಡನೇ ಟೆಸ್ಟ್ ತಂಡದಿಂದ ಹೊರಗಿಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಮಾಜಿ ಅಂಪಾಯರ್ ಅಲೀಂ ದಾರ್, ಆಕಿಬ್ ಜಾವೇದ್, ಮತ್ತು ಅಜರ್ ಅಲಿ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಂ ಫಾರ್ಮ್ ನಲ್ಲಿಲ್ಲದ ಕಾರಣ ಅವರನ್ನು ತಂಡದಿಂದ ಕೈಬಿಡಲು ನಿರ್ಧರಿಸಿದೆ ಎಂದು ವರದಿ ಹೇಳಿದೆ.
ನಾಯಕ ಶಾನ್ ಮಸೂದ್ ಮತ್ತು ಕೋಚ್ ಜೇಸನ್ ಗಿಲ್ಲೆಸ್ಪಿ ಅವರನ್ನು ಭೇಟಿ ಮಾಡಲು ಆಯ್ಕೆಗಾರರು ಶನಿವಾರ ಮುಲ್ತಾನ್ ಗೆ ತೆರಳಿದ್ದರು. ಮುಲ್ತಾನ್ ನಲ್ಲಿ ಅತ್ಯಂತ ಬ್ಯಾಟಿಂಗ್-ಸ್ನೇಹಿ ಪಿಚ್ ರಚಿಸಿ ಟೀಕೆಗೆ ಗುರಿಯಾದ ಬಳಿಕ ಅವರು ಪಿಸಿಬಿ ಕ್ಯುರೇಟರ್ ಟೋನಿ ಹೆಮ್ಮಿಂಗ್ ಅವರೊಂದಿಗೆ ಸಭೆ ನಡೆಸಿದರು.
ಪಿಸಿಬಿ ನೇಮಿಸಿದ ಸಮಿತಿಯಲ್ಲಿನ ಕೆಲವು ಮಾರ್ಗದರ್ಶಕರು ಬಾಬರ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಪರವಾಗಿದ್ದಾರೆ ಎಂದು ವರದಿ ಹೇಳಿಕೊಂಡಿದೆ. ಆದರೆ ಬಹುಮತದ ತೀರ್ಪು ಅವರು ತಂಡದಲ್ಲಿ ಉಳಿಯಲು ವಿರುದ್ಧವಾಗಿದೆ.
Ad
Himachal Pradesh: ಭೂಕುಸಿತಕ್ಕೂ ಮುನ್ನ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ.!
Kota: ಯಡ್ತಾಡಿ ಕಂಬಳ ಗದ್ದೆಯ ಸಾಂಪ್ರದಾಯಿಕ ನಾಟಿ: ನೂರಕ್ಕೂ ಅಧಿಕ ಮಹಿಳೆಯರು ಭಾಗಿ!
Udupi: ಆಯುರ್ವೇದ ಶಿಕ್ಷಣ, ಚಿಕಿತ್ಸೆ, ಔಷಧ ಕ್ಷೇತ್ರದಲ್ಲಿ ದಾಪುಗಾಲು
Kundapura: ಶತಮಾನದ ಹೊಸ್ತಿಲಲ್ಲಿರುವ ಕೊಡ್ಲಾಡಿ ಶಾಲೆಗೆ ಬೇಕು ಕೊಠಡಿ
ಜು.13 ರಂದು ಜಮ್ಮುವಿನಲ್ಲಿ ನಡೆಯುವ ಹಿಂದೂ ಸಮಾವೇಶದಲ್ಲಿ ಶ್ರೀರಾಮ ಸೇನೆ ಭಾಗಿ: ಮುತಾಲಿಕ್
You seem to have an Ad Blocker on.
To continue reading, please turn it off or whitelist Udayavani.