ಧನಾತ್ಮಕ ಅಂಶಗಳನ್ನು ಸ್ವೀಕರಿಸಿ: ಗೌತಮ್ ಗಂಭೀರ್ ಸಲಹೆ
Team Udayavani, Dec 25, 2020, 7:59 AM IST
ಹೊಸದಿಲ್ಲಿ: ಭಾರೀ ಒತ್ತಡದಲ್ಲಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ಮಾಜಿ ಆರಂಭಕಾರ ಗೌತಮ್ ಗಂಭೀರ್ ಉಪಯುಕ್ತ ಸಲಹೆಯೊಂದನ್ನು ನೀಡಿದ್ದಾರೆ. ಅಡಿಲೇಡ್ ಟೆಸ್ಟ್ ಪಂದ್ಯದ ಕಹಿಯನ್ನು ಬಿಟ್ಟು ಧನಾತ್ಮಕ ಅಂಶಗಳನ್ನು ಸ್ವೀಕರಿಸಿ ಮುನ್ನಡೆಯಿರಿ ಎಂಬ ಸಂದೇಶವನ್ನು ರವಾನಿಸಿದ್ದಾರೆ.
“ಅಡಿಲೇಡ್ ಟೆಸ್ಟ್ ಪಂದ್ಯದ ಮೊದಲೆರಡು ದಿನ ಭಾರತವೇ ಮೇಲುಗೈ ಸಾಧಿಸಿತ್ತು ಎಂಬುದನ್ನು ಮರೆಯಬಾರದು. 53 ರನ್ ಮೊದಲ ಇನ್ನಿಂಗ್ಸ್ ಮುನ್ನಡೆಯೂ ಲಭಿಸಿತ್ತು. ಮೂರನೇ ದಿನದ ಕೇವಲ ಒಂದು ಅವಧಿಯಲ್ಲಿ ತಂಡಕ್ಕೆ ವಿಪರೀತ ಹಾನಿಯಾಯಿತು. ಈ ಸಂಗತಿಯನ್ನು ಬಿಟ್ಟು ಮೊದಲೆರಡು ದಿನಗಳ ಧನಾತ್ಮಕ ಅಂಶಗಳನ್ನು ನಮ್ಮವರು ಸ್ವೀಕರಿಸಬೇಕಿದೆ. ಸರಣಿಯಲ್ಲಿ ಇನ್ನೂ ಮೂರು ಪಂದ್ಯಗಳಿವೆ ಎಂಬುದನ್ನು ಮರೆಯಬಾರದು’ ಎಂದು ಗಂಭೀರ್ “ಕ್ರಿಕೆಟ್ ಕನೆಕ್ಟೆಡ್’ ಕಾರ್ಯಕ್ರಮದಲ್ಲಿ ಹೇಳಿದರು.
ಮೆಲ್ಬೋರ್ನ್ ಟೆಸ್ಟ್ ಪಂದ್ಯ ಶನಿವಾರ (ಡಿ.26) ರಂದು ನಡೆಯಲಿದೆ. ಭಾರತ ತಂಡ ವಿರಾಟ್, ಶಮಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ಅಜಿಂಕ್ಯ ರಹಾನೆ ತಂಡದ ನಾಯಕನಾಗಿರಲಿದ್ದಾರೆ