ಅಂದು ಧೋನಿ ಅವಕಾಶ ನೀಡಿದ್ದರೇ…ಟೀಮ್‌ ಇಂಡಿಯಾದಲ್ಲಿ ಆಡುತ್ತಿದ್ದೆ:ನಿವೃತ್ತಿ ಘೋಷಿಸಿದ ವೇಗಿ

Team Udayavani, Sep 14, 2022, 4:04 PM IST

ಅಂದು ಧೋನಿ ಅವಕಾಶ ನೀಡಿದ್ದರೇ.., ಟೀಮ್‌ ಇಂಡಿಯಾದಲ್ಲಿ ಆಡುತ್ತಿದ್ದೆ: ನಿವೃತಿ ಘೋಷಿಸಿದ ವೇಗಿ

ಮುಂಬಯಿ:  ದೇಶಿಯ ಕ್ರಿಕೆಟ್‌ ನಲ್ಲಿ ತನ್ನ ವೇಗದ ಬೌಲಿಂಗ್‌ ನಿಂದ ಮಿಂಚಿದ್ದ ಮಧ್ಯ ಪ್ರದೇಶದ ವೇಗಿ ಈಶ್ವರ್‌ ಪಾಂಡೆ ಅಂತಾರಾಷ್ಟ್ರೀಯ ಹಾಗೂ ಎಲ್ಲಾ ಮಾದರಿಯ ಕ್ರಿಕೆಟ್‌ ಗೆ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ.

75 ಪ್ರಥಮ ದರ್ಜೆ ಪಂದ್ಯವನ್ನಾಡಿ  263 ವಿಕೆಟ್‌ ಗಳನ್ನು ಪಡೆದಿದ್ದಾರೆ. ಮಧ್ಯ ಪ್ರದೇಶದ ಪರವಾಗಿ ದೇಶಿಯ ಕ್ರಿಕೆಟ್‌ ನ್ನು ಆಡಿರುವ ಅವರು, 2013 ರಲ್ಲಿ ಪುಣೆ ವಾರಿಯರ್ಸ್‌ ತಂಡದಲ್ಲಿ ಅವಕಾಶ ಪಡೆಯುವ ಮೂಲಕ ಐಪಿಎಲ್‌ ಗೆ ಎಂಟ್ರಿಯಾಗಿದ್ದರು. ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಪರವಾಗಿಯೂ ಅವರು ತಮ್ಮ ಬೌಲಿಂಗ್‌ ಸಾಮರ್ಥ್ಯವನ್ನು ತೋರಿಸಿದ್ದರು. ಐಪಿಎಲ್‌ ನಲ್ಲಿ ಒಟ್ಟು 25 ಪಂದ್ಯಗಳಲ್ಲಿ 18 ವಿಕೆಟ್‌ ಪಡೆದಿದ್ದಾರೆ.

ನಿವೃತ್ತಿ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿರುವ ಈಶ್ವರ್‌ ಪಾಂಡೆ, ಒಂದು ವೇಳೆ ಅಂದು ಧೋನಿ ನನಗೆ ಆಡಲು ಅವಕಾಶ ನೀಡಿದ್ದರೆ, ಇಂದು ನನ್ನ ಕೆರಿಯರ್‌ ಉತ್ತಮವಾಗಿರುತ್ತಿತ್ತು. ಆಗ ನಾನು 23-24ರ ಹರೆಯದವನಾಗಿದ್ದೆ, ಫಿಟ್‌ ಕೂಡ ಆಗಿದ್ದೆ. ಆ ಸಮಯದಲ್ಲಿ ಧೋನಿ ನನಗೆ ಒಂದು ಅವಕಾಶ ನೀಡುತ್ತಿದ್ದರೆ, ಭಾರತ ತಂಡದಲ್ಲಿ ಆಡಬಹುದಿತ್ತು. ನನ್ನ ವೃತ್ತಿ ಜೀವನ ಭಿನ್ನವಾಗಿರುತ್ತಿತ್ತು ಎಂದು ತನ್ನ ನೋವನ್ನು ತೋಡಿಕೊಂಡಿದ್ದಾರೆ.

2014 ರಲ್ಲಿ ನ್ಯೂಜಿಲ್ಯಾಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಈಶ್ವರ್‌ ಪಾಂಡೆ ಆಯ್ಕೆಯಾಗಿದ್ದರು. ಆ ಸಮಯದಲ್ಲಿ ಧೋನಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದರು. ಆ ವೇಳೆ ಈಶ್ವರ್‌ ಪಾಂಡೆಗೆ ಟೆಸ್ಟ್‌ ನಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.

ನಿವೃತ್ತಿ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ಮಾಹಿತಿ ಹಂಚಿಕೊಂಡಿರುವ ಈಶ್ವರ್‌ ಪಾಂಡೆ, ʼಈ ದಿನ ತುಂಬಾ ಕಷ್ಟದಿಂದ ಈ ನಿರ್ಧಾರವನ್ನು ಕೈಗೊಂಡಿದ್ದೇನೆ. ಅಂತಾರಾಷ್ಟ್ರೀಯ ಹಾಗೂ ಪ್ರಥಮ ದರ್ಜೆಯ ಕ್ರಿಕೆಟ್‌ ಗೆ ವಿದಾಯ ಹೇಳುತ್ತಿದ್ದೇನೆ.  2007 ರಲ್ಲಿ ಆರಂಭವಾದ ಜರ್ನಿ ನಿಜಕ್ಕೂ ಅಸಾಧಾರಣ ಹಾಗೂ ಅವಿಸ್ಮರಣಿಯವಾದದು ಎಂದಿದ್ದಾರೆ.

ನ್ಯೂಜಿಲ್ಯಾಂಡ್‌, ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಆಯ್ಕೆಯಾದ ಕ್ಷಣ ಅದ್ಭುತ. ಆದರೆ ಆಡಲು ಅವಕಾಶ ಸಿಕ್ಕಿಲಿಲ್ಲ ಎಂಬ ಬೇಸರವಿದೆ. ತಂಡದ ಸದಸ್ಯನಾಗಿದ್ದೆ ಎನ್ನುವ ಸಂತೃಪ್ತಿಯಿದೆ ಎಂದಿದ್ದಾರೆ.

ಡ್ರೆಸ್ಸಿಂಗ್‌ ರೂಮ್‌ ನಲ್ಲಿ  ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಇಶಾಂತ್ ಶರ್ಮಾ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್ ಅವರೊಂದಿಗೆ ಕಳೆದ ಕ್ಷಣ ಸ್ಮರಣೀಯ. ಸಚಿನ್ ತೆಂಡೂಲ್ಕರ್ ಅವರ ವಿರುದ್ಧ ಆಡಿದ್ದು ನನ್ನ ಪಾಲಿಗೆ ವಿಶೇಷ ನೆನಪು ಎಂದು ಹೇಳಿದ್ದಾರೆ.ಐಪಿಎಲ್‌ ನಲ್ಲಿ ಆಡಲು ಅವಕಾಶ ಕೊಟ್ಟ ಚೆನ್ನೈ, ಪುಣೆ ತಂಡಕ್ಕೂ ಈ ಸಂದರ್ಭದಲ್ಲಿ ಅವರು ಧನ್ಯವಾದವನ್ನು ಹೇಳಿದ್ದಾರೆ.

View this post on Instagram

A post shared by Ishwar pandey (@ishwar22)

ಟಾಪ್ ನ್ಯೂಸ್

ಐಎಎಸ್‌, ಐಪಿಎಸ್‌ ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

ಐಎಎಸ್‌, ಐಪಿಎಸ್‌ ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

ಜಿ.ಶಂಕರ್‌ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್‌: ಫೆ.10ರ ತನಕ ನೋಂದಣಿ ಅವಧಿ ವಿಸ್ತರಣೆ

ಜಿ.ಶಂಕರ್‌ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್‌: ಫೆ.10ರ ತನಕ ನೋಂದಣಿ ಅವಧಿ ವಿಸ್ತರಣೆ

ಫಾಝಿಲ್‌ ಕುಟುಂಬಕ್ಕೂ ಪರಿಹಾರ ಸಿಗಬೇಕು: ಡಾ| ಭರತ್‌ ಶೆಟ್ಟಿ

ಫಾಝಿಲ್‌ ಕುಟುಂಬಕ್ಕೂ ಪರಿಹಾರ ಸಿಗಬೇಕು: ಡಾ| ಭರತ್‌ ಶೆಟ್ಟಿ

ವನಿತಾ ಟಿ20 ಬೌಲಿಂಗ್‌ ರ್‍ಯಾಂಕಿಂಗ್‌: ಅಗ್ರಸ್ಥಾನದತ್ತ ದೀಪ್ತಿ ಶರ್ಮ

ವನಿತಾ ಟಿ20 ಬೌಲಿಂಗ್‌ ರ್‍ಯಾಂಕಿಂಗ್‌: ಅಗ್ರಸ್ಥಾನದತ್ತ ದೀಪ್ತಿ ಶರ್ಮ

ರಣಜಿ ಕ್ವಾರ್ಟರ್‌ ಫೈನಲ್ಸ್‌: ಮೊದಲ ದಿನವೇ ಕರ್ನಾಟಕ ಮೇಲುಗೈ

ರಣಜಿ ಕ್ವಾರ್ಟರ್‌ ಫೈನಲ್ಸ್‌: ಮೊದಲ ದಿನವೇ ಕರ್ನಾಟಕ ಮೇಲುಗೈ

ಕೇರಳ ಚಲನಚಿತ್ರ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಅಡೂರ್‌ ಗೋಪಾಲಕೃಷ್ಣನ್‌ ರಾಜೀನಾಮೆ

ಕೇರಳ ಚಲನಚಿತ್ರ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಅಡೂರ್‌ ಗೋಪಾಲಕೃಷ್ಣನ್‌ ರಾಜೀನಾಮೆ

ಸೇಡಿಗಾಗಿ ಪಕ್ಷ ಸ್ಥಾಪಿಸಿಲ್ಲ, ಯಾರಿಗೂ ಹೆದರಲ್ಲ: ಜನಾರ್ದನ ರೆಡ್ಡಿ

ಸೇಡಿಗಾಗಿ ಪಕ್ಷ ಸ್ಥಾಪಿಸಿಲ್ಲ, ಯಾರಿಗೂ ಹೆದರಲ್ಲ: ಜನಾರ್ದನ ರೆಡ್ಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವನಿತಾ ಟಿ20 ಬೌಲಿಂಗ್‌ ರ್‍ಯಾಂಕಿಂಗ್‌: ಅಗ್ರಸ್ಥಾನದತ್ತ ದೀಪ್ತಿ ಶರ್ಮ

ವನಿತಾ ಟಿ20 ಬೌಲಿಂಗ್‌ ರ್‍ಯಾಂಕಿಂಗ್‌: ಅಗ್ರಸ್ಥಾನದತ್ತ ದೀಪ್ತಿ ಶರ್ಮ

ರಣಜಿ ಕ್ವಾರ್ಟರ್‌ ಫೈನಲ್ಸ್‌: ಮೊದಲ ದಿನವೇ ಕರ್ನಾಟಕ ಮೇಲುಗೈ

ರಣಜಿ ಕ್ವಾರ್ಟರ್‌ ಫೈನಲ್ಸ್‌: ಮೊದಲ ದಿನವೇ ಕರ್ನಾಟಕ ಮೇಲುಗೈ

thumb-4

ಪಾಕಿಸ್ಥಾನ ತಂಡಕ್ಕೆ ಆನ್ ಲೈನ್ ಕೋಚ್? ಏನಿದು ವಿಚಿತ್ರ ನಿರ್ಧಾರ?

thumb-2

ಅಂಡರ್ 19: ಅರ್ಚನಾ ಕುಟುಂಬ ಫೈನಲ್‌ ನೋಡಲು ನೆರವು ನೀಡಿದ ಪೊಲೀಸ್‌ ಅಧಿಕಾರಿ

thumb-1

ದೊಡ್ಡ ಟ್ರೋಫಿ ಇನ್ನೂ ಒಂದಿದೆ: ಶಫಾಲಿ ವರ್ಮ

MUST WATCH

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

udayavani youtube

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

udayavani youtube

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಹೊಸ ಸೇರ್ಪಡೆ

ಐಎಎಸ್‌, ಐಪಿಎಸ್‌ ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

ಐಎಎಸ್‌, ಐಪಿಎಸ್‌ ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

ಕೆ.ವಿ. ತಿರುಮಲೇಶ್‌ – ನುಡಿನಮನ: ಖಂಡಾಂತರ ನೆಗೆವ ಕಾವ್ಯ

ಕೆ.ವಿ. ತಿರುಮಲೇಶ್‌ – ನುಡಿನಮನ: ಖಂಡಾಂತರ ನೆಗೆವ ಕಾವ್ಯ

ಜಿ.ಶಂಕರ್‌ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್‌: ಫೆ.10ರ ತನಕ ನೋಂದಣಿ ಅವಧಿ ವಿಸ್ತರಣೆ

ಜಿ.ಶಂಕರ್‌ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್‌: ಫೆ.10ರ ತನಕ ನೋಂದಣಿ ಅವಧಿ ವಿಸ್ತರಣೆ

ಫಾಝಿಲ್‌ ಕುಟುಂಬಕ್ಕೂ ಪರಿಹಾರ ಸಿಗಬೇಕು: ಡಾ| ಭರತ್‌ ಶೆಟ್ಟಿ

ಫಾಝಿಲ್‌ ಕುಟುಂಬಕ್ಕೂ ಪರಿಹಾರ ಸಿಗಬೇಕು: ಡಾ| ಭರತ್‌ ಶೆಟ್ಟಿ

ವನಿತಾ ಟಿ20 ಬೌಲಿಂಗ್‌ ರ್‍ಯಾಂಕಿಂಗ್‌: ಅಗ್ರಸ್ಥಾನದತ್ತ ದೀಪ್ತಿ ಶರ್ಮ

ವನಿತಾ ಟಿ20 ಬೌಲಿಂಗ್‌ ರ್‍ಯಾಂಕಿಂಗ್‌: ಅಗ್ರಸ್ಥಾನದತ್ತ ದೀಪ್ತಿ ಶರ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.