ಪ್ರೇಮಿಗಳ ದಿನದಂದು ಮತ್ತೊಮ್ಮೆ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಹಾರ್ದಿಕ್ ಪಾಂಡ್ಯ
ದಂಪತಿಗೆ ಅಗಸ್ತ್ಯ ಎನ್ನುವ ಗಂಡು ಮಗುವೂವಿದೆ
Team Udayavani, Feb 12, 2023, 5:57 PM IST
ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ಮದುವೆಯಾಗುತ್ತಿದ್ದಾರೆ. ಈಗಾಗಲೇ ಮದುವೆಯಾಗಿ ವರಿಸಿರುವ ನತಾಶಾ ಸ್ಟಾಂಕೋವಿಕ್ ಅವರನ್ನೇ ಮತ್ತೊಮ್ಮೆ ಅದ್ಧೂರಿ ಸಮಾರಂಭದಲ್ಲಿ ವಿವಾಹವಾಗಲಿದ್ದಾರೆ.
2022 ರ ಮೇ 31 ರಂದು ಕೆಲವೇ ಕೆಲ ಆತ್ಮೀಯರ ಸಮ್ಮುಖದಲ್ಲಿ ಕೋರ್ಟಿನಲ್ಲಿ ಹಾರ್ದಿಕ್ – ನತಾಶಾ ಮದುವೆಯಾಗಿದ್ದರು. ದಂಪತಿಗೆ ಅಗಸ್ತ್ಯ ಎನ್ನುವ ಗಂಡು ಮಗುವೂವಿದೆ. ಇದೀಗ ತಮ್ಮ ಕನಸಿನಂತೆ ರಾಜಸ್ಥಾನದ ಉದಯ್ ಪುರ್ ನಲ್ಲಿ ಮದುವೆಯಾಗಲಿದ್ದಾರೆ. ಫೆ.14 ರಂದು ಪ್ರೇಮಿಗಳ ದಿನದಂದು ಹಾರ್ದಿಕ್ – ನತಾಶ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಫೆ. 13 ರಿಂದ ಫೆ.16 ರವರೆಗೆ ಹಳದಿ, ಮೆಹೆಂದಿ,ಸಂಗೀತ್ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ ಎಂದು ವರದಿ ತಿಳಿಸಿದೆ.