ಐಸಿಸಿಯ ಬೌಂಡರಿ ಕೌಂಟ್‌ ನಿಯಮಕ್ಕೆ ಭಾರೀ ಟೀಕೆ

Team Udayavani, Jul 16, 2019, 5:51 AM IST

ಲಂಡನ್‌: ಅಂತಾ ರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ “ಬೌಂಡರಿ ಕೌಂಟ್‌’ ನಿಯಮವನ್ನು ರೋಹಿತ್‌ ಸಹಿತ ಹಾಲಿ ಮತ್ತು ಮಾಜಿ ಕ್ರಿಕೆಟಿಗ ರನೇಕರು ಟೀಕಿಸಿದ್ದಾರೆ. ವಿಶ್ವಕಪ್‌ ಪ್ರಶಸ್ತಿ ವಿಜೇತರನ್ನು ಬೌಂಡರಿ ಕೌಂಟ್‌ ನಿಯಮದಡಿ ನಿರ್ಧರಿಸುವುದು ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.

ಗಂಭೀರ ಚಿಂತನೆ
ಕ್ರಿಕೆಟ್‌ನ ಕೆಲವೊಂದು ನಿಯಮಗಳ ಬಗ್ಗೆ ಖಂಡಿತವಾಗಿಯೂ ಗಂಭೀರ ಚಿಂತನೆ ಹರಿಸಬೇಕಾದ ಅಗತ್ಯವಿದೆ ಎಂದು ಭಾರತೀಯ ಆರಂಭಿಕ ರೋಹಿತ್‌ ಟ್ವೀಟ್‌ ಮಾಡಿದ್ದಾರೆ.

ರೋಹಿತ್‌ ಮಾತಿಗೆ ಗೌತಮ್‌ ಗಂಭೀರ್‌ ಧ್ವನಿಗೂಡಿಸಿದ್ದಾರೆ. ವಿಶ್ವಕಪ್‌ ಫೈನಲ್‌ನ ಫ‌ಲಿತಾಂಶವನ್ನು ಯಾವ ತಂಡ ಗರಿಷ್ಠ ಬೌಂಡರಿ ಬಾರಿಸಿದೆ ಎಂಬ ಮೂಲಕ ನಿರ್ಧರಿಸಿರುವುದು ನನಗೆ ಅರ್ಥವಾಗುತ್ತಿಲ್ಲ. ಇದೊಂದು ಐಸಿಸಿಯ ಹಾಸ್ಯಾಸ್ಪದ ನಿಯಮ. ಪಂದ್ಯ ಟೈ ಆಗಿದ್ದರಿಂದ ನಾನು ಅದ್ಭುತ ರೀತಿಯಲ್ಲಿ ಫೈನಲ್‌ ಪಂದ್ಯ ಆಡಿದ ಎರಡೂ ತಂಡಗಳನ್ನು ಅಭಿನಂದಿಸುತ್ತೇನೆ ಎಂದು ಗಂಭೀರ್‌ ಹೇಳಿದ್ದಾರೆ.

ಇದನ್ನು ಒಪ್ಪಲಾರೆ: ಯುವಿ
ಬೌಂಡರಿ ಕೌಂಟ್‌ ಮೂಲಕ ವಿಜೇತರನ್ನು ನಿರ್ಧರಿಸಿದ ಐಸಿಸಿ ನಿಯಮವನ್ನು ನಾನು ಒಪ್ಪುವುದಿಲ್ಲ. ಆದರೆ ನಿಯಮವೆಂದರೆ ನಿಯಮ. ಕೊನೆಗೂ ವಿಶ್ವಕಪ್‌ ಗೆದ್ದ ಇಂಗ್ಲೆಂಡಿಗೆ ಅಭಿನಂದನೆಗಳು. ಕೊನೆ ಕ್ಷಣದವರೆಗೂ ಗೆಲುವಿಗಾಗಿ ಹೋರಾಡಿದ ಕಿವೀಸ್‌ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಯುವರಾಜ್‌ ಹೇಳಿದ್ದಾರೆ.

ಯು ಆರ್‌ ಎ ಜೋಕ್‌ !
ನ್ಯೂಜಿಲ್ಯಾಂಡಿನ ಮಾಜಿ ಆಲ್‌ರೌಂಡರ್‌ ಸ್ಕಾಟ್‌ ಸ್ಟೈರಿಸ್‌ ಐಸಿಸಿಯನ್ನು ಜೋಕ್‌ ಎಂದು ಕರೆದಿದ್ದಾರೆ. ನೈಸ್‌ ವರ್ಕ್‌ ಎಟ್‌ ಐಸಿಸಿ… ಯು ಆರ್‌ ಎ ಜೋಕ್‌ ಎಂದು ಬರೆದಿದ್ದಾರೆ.

ಭಾರತೀಯ ಸ್ಪಿನ್‌ ಲೆಜೆಂಡ್‌ ಬಿಷನ್‌ ಸಿಂಗ್‌ ಬೇಡಿ ಕೂಡ ಐಸಿಸಿ ನಿಯಮವನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ. ಕಲ್ಪನಾಶೂನ್ಯ ಐಸಿಸಿ ನಿಯಮವು ಇಂಗ್ಲೆಂಡ್‌ ವಿಶ್ವಕಪ್‌ ಗೆಲ್ಲಲು ನೆರವಾಗಿದೆ. ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಿದರೆ ಒಳ್ಳೆಯದಿತ್ತು.

ನ್ಯೂಜಿಲ್ಯಾಂಡ್‌ ಫೈನಲ್‌ನಲ್ಲಿ ಆ ರೀತಿಯಲ್ಲಿ ಅಮೋಘವಾಗಿ ಆಡಿತ್ತು. ಐಸಿಸಿ ಈ ಬಗ್ಗೆ ಆಲೋಚಿಸಲಿ ಎಂದು ಬೇಡಿ ಟ್ವೀಟ್‌ ಮಾಡಿದ್ದಾರೆ.

ನ್ಯಾಯೋಚಿತವಲ್ಲ: ಜೋನ್ಸ್‌
ಡಿ-ಎಲ್‌ ನಿಯಮದಲ್ಲಿ ತಂಡ ಗಳಿಸಿದ ರನ್‌ ಮತ್ತು ಕಳೆದುಕೊಂಡ ವಿಕೆಟ್‌ಗಳನ್ನು ಪರಿಗಣಿಸಲಾಗುತ್ತದೆ. ಆದರೆ ವಿಶ್ವಕಪ್‌ ಫೈನಲ್‌ ಪಂದ್ಯದ ಫ‌ಲಿತಾಂಶವನ್ನು ಕೇವಲ ಬೌಂಡರಿಗಳ ಆಧಾರದಲ್ಲಿ ನಿರ್ಧರಿಸಿರುವುದು ನ್ಯಾಯೋಚಿತವಲ್ಲ ಎಂದು ಆಸ್ಟ್ರೇಲಿ ಯದ ಮಾಜಿ ಆಟಗಾರ ಡೀನ್‌ ಜೋನ್ಸ್‌ ಅಭಿಪ್ರಾಯಪಟ್ಟಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ