
ದೇಶೀ ಕ್ರಿಕೆಟ್‌ನಲ್ಲಿ ಭಾರೀ ವಂಚನೆ
Team Udayavani, Mar 15, 2019, 12:30 AM IST

ಹೊಸದಿಲ್ಲಿ: ದೇಶಿ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಭಾರೀ ವಂಚನೆ ಪ್ರಕರಣವೊಂದು ಬಯಲಿಗೆ ಬಂದಿದೆ.
ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಮಣಿಪುರ, ಜಾರ್ಖಂಡ್ ರಣಜಿ ತಂಡದಲ್ಲಿ ಸ್ಥಾನ ನೀಡುತ್ತೇವೆಂದು ಹೇಳಿ 80 ಲಕ್ಷ ರೂ. ಮೋಸ ಮಾಡಿರುವ ಸ್ಫೋಟಕ ಸುದ್ದಿ ಭಾರತೀಯ ಕ್ರಿಕೆಟ್‌ನಲ್ಲಿ ತಲ್ಲಣವನ್ನೆಬ್ಬಿಸಿದೆ. ಈ ಬಗ್ಗೆ ಉದಯೋನ್ಮುಖ ಕ್ರಿಕೆಟಿಗರಾದ ಕಾನಿಷ್ ಗೌರ್, ಕಿಶನ್ ಅತ್ರಿ, ಶಿವಂ ಶರ್ಮ ಬಿಸಿಸಿಐಗೆ ದೂರು ಸಲ್ಲಿಸಿದ್ದಾರೆ. ದೂರಿನ್ವಯ ಬಿಸಿಸಿಐ ದಿಲ್ಲಿ ಪೊಲೀಸ್ ಠಾಣೆಯೊಂದರಲ್ಲಿ ಕೋಚ್ ಸೇರಿದಂತೆ ಒಟ್ಟು 11 ಜನರ ವಿರುದ್ಧ ವಂಚನೆ ದೂರನ್ನು ದಾಖಲಿಸಿದೆ.
ಭಾರೀ ವಂಚನೆ ಪ್ರಕರಣ
ಹೊಸದಿಲ್ಲಿಯ ಮೂವರು ಕ್ರಿಕೆಟಿಗರು ರಣಜಿ ತಂಡದಲ್ಲಿ ಸ್ಥಾನ ಬಯಸಿ 80 ಲಕ್ಷ ರೂ. ಹಣ ನೀಡಿದ್ದರು. ಇವರಿಗೆ ನಕಲಿ ಆಯ್ಕೆ ಪ್ರಮಾಣ ಪತ್ರ ನೀಡಲಾಗಿದೆ. ಮಾತ್ರವಲ್ಲ ನಾಗಾಲ್ಯಾಂಡ್, ಮಣಿಪುರ ಹಾಗೂ ಜಾರ್ಖಂಡ್ ತಂಡಗಳಲ್ಲಿ ಅವಕಾಶ ನೀಡಲಾಗುತ್ತದೆ ಎನ್ನುವ ಭಾರೀ ಭರವಸೆಯನ್ನೂ ನೀಡಲಾಗಿದೆ.
ನಾಗಾಲ್ಯಾಂಡ್ ತಂಡದಲ್ಲಿ ಕೋಚ್ ಹಾಗೂ ಅತಿಥಿ ಆಟಗಾರನಾಗಿ ಪಾಲ್ಗೊಳ್ಳಲು ಕಾನಿಷ್R ಗೌರ್ ಅವರಿಂದ 15 ಲಕ್ಷ ರೂ. ಹಣ ಕೇಳಲಾಗಿತ್ತು. ಕೊನೆಗೆ ಕೌರ್‌ಗೆ ಅಂಡರ್-19 ನಾಗಾಲ್ಯಾಂಡ್ ತಂಡದಲ್ಲಿ ಸ್ಥಾನ ನೀಡಲಾಗಿತ್ತು. 2 ಪಂದ್ಯ ಆಡಿದ ಬಳಿಕ ಹಠಾತ್ ಆಗಿ ಗೌರ್ ಆಡದಂತೆ ತಡೆಯಲಾಗಿತ್ತು ಎನ್ನುವುದನ್ನು ಪೊಲೀಸ್ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ
ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳದ ಪ್ರಾದೇಶಿಕ ಸಮಗ್ರತೆ ಅಧ್ಯಕ್ಷ ಅಂಶುಮಾನ್ ಉಪಧ್ಯಾಯ್ ಮಾತನಾಡಿ,
“ಕೋಚ್, ಅಧಿಕಾರಿಗಳು ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ದೂರು ದಾಖಲಾಗಿದೆ. ಬಿಸಿಸಿಐ ಹೆಸರಿಗೆ ಕಳಂಕ ತಂದ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಲಾಗುತ್ತದೆ’ ಎಂದಿದ್ದಾರೆ.
ಟಾಪ್ ನ್ಯೂಸ್
