ಬಾಸ್ಕೆಟ್ಬಾಲ್ ಆಟಗಾರ ಕೋಬ್ ಬ್ರ್ಯಾಂಟ್ ಸಾವಿಗೆ ಕಾಪ್ಟರ್ ಕಾರಣವಲ್ಲ!
Team Udayavani, Feb 9, 2020, 9:28 AM IST
ವಾಷಿಂಗ್ಟನ್: ಅಮೆರಿಕ ಖ್ಯಾತ ಬಾಸ್ಕೆಟ್ಬಾಲ್ ಆಟಗಾರ ಕೋಬ್ ಬ್ರ್ಯಾಂಟ್ ಹಾಗೂ ಇನ್ನಿತರ ಎಂಟು ಮಂದಿಯ ಸಾವಿಗೆ ಕಾರಣವಾಗಿದ್ದ ಹೆಲಿಕಾಪ್ಟರ್ ಅಪಘಾತ, ಆ ಕಾಪ್ಟರ್ನಲ್ಲಿನ ಇಂಜಿನ್ ವೈಫಲ್ಯದಿಂದ ಆಗಿದ್ದಲ್ಲ ಎಂದು ಈ ಪ್ರಕರಣದ ತನಿಖೆ ನಡೆಸಿರುವ ನ್ಯಾಷನಲ್ – ಟ್ರಾನ್ಸ್ಪೋಪೋರ್ಟೇಶನ್ ಸೇಫ್ಟಿ ಬೋರ್ಡ್ (ಎನ್ಟಿಎಸ್ಬಿ) ಹೇಳಿದೆ.
ಘಟನಾ ಸ್ಥಳದಲ್ಲಿ ಸಿಕ್ಕಿರುವ ಹೆಲಿಕಾಪ್ಟರ್ನ ಅವಶೇಷಗಳನ್ನು ಸಂಗ್ರಹಿಸಿ ತಾನು ನಡೆಸಿರುವತನಿಖೆಯಲ್ಲಿ ಈ ವಿಚಾರ ಸ್ಪಷ್ಟವಾಗಿದೆ. ಅಪಘಾತದ ನಿಖರ ಕಾರಣ ಪತ್ತೆ ಹಚ್ಚಲು ತನಗಿನ್ನೂ ಒಂದು ವರ್ಷ ಸಮಯ ಬೇಕಿದೆ ಎಂದು ಎನ್ಟಿಎಸ್ಬಿ ತಿಳಿಸಿದೆ.
ಜ. 26ರಂದು ಹೆಲಿಕಾಪ್ಟರ್ನಲ್ಲಿ ಬ್ರ್ಯಾಂಟ್ ಅವರು ತಮ್ಮ ಪುತ್ರಿ ಜಿಯಾನಾ ಜೊತೆಗೆ ಪ್ರಯಾಣಿಸುತ್ತಿದ್ದಾಗ ಹೆಲಿಕಾಪ್ಟರ್, ಲಾಸ್ ಏಂಜಲೀಸ್ನ ಹೊರ ವಲಯದ ಬೆಟ್ಟಗಳ ತುದಿಗೆ ಅಪ್ಪಳಿಸಿ ಅಪಘಾತಕ್ಕೀಡಾಗಿತ್ತು.
ಬ್ರ್ಯಾಂಟ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದ ಕೆಲವೇ ಗಂಟೆಗಳಲ್ಲಿ ಬ್ರ್ಯಾಂಟ್ ಸಾವಿಗೀಡಾಗಿದ್ದರು. ಇದು ಅನುಮಾನಕ್ಕೆ ಕಾರಣವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ