ವಿರಾಟ್ ಕೊಹ್ಲಿಗೆ ಹೃದಯಸ್ಪರ್ಶಿ ಸಂದೇಶದೊಂದಿಗೆ ಜೆರ್ಸಿ ಗಿಫ್ಟ್ ನೀಡಿದ ಹಾಂಕಾಂಗ್ ತಂಡ
Team Udayavani, Sep 1, 2022, 1:20 PM IST
ದುಬೈ: ಏಷ್ಯಾ ಕಪ್ ಕೂಟದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತ ಮತ್ತು ಹಾಂಕಾಂಗ್ ತಂಡಗಳು ಬುಧವಾರ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ನಿರೀಕ್ಷೆಯಂತೆ ಭಾರತ ಗೆದ್ದರೂ, ಹಾಂಕಾಂಗ್ ತಂಡ ತನ್ನದೊಂದು ನಡೆಯಿಂದ ಕ್ರಿಕೆಟ್ ಪ್ರಿಯರ ಹೃದಯ ಗೆದ್ದಿದೆ.
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ತಮ್ಮ ಜೆರ್ಸಿ ನೀಡಿರುವ ಹಾಂಕಾಂಗ್ ತಂಡವು ಅದರಲ್ಲಿ ಹೃದಯಸ್ಪರ್ಶಿ ಸಂದೇಶವೊಂದನ್ನು ಬರೆದಿದೆ. ಇದರ ಚಿತ್ರವನ್ನು ಸ್ವತಃ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
“ವಿರಾಟ್, ಒಂದು ಪೀಳಿಗೆಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ! ನಿಮ್ಮೆದುರಿಗೆ ಹಲವು ಅದ್ಭುತ ದಿನಗಳಿವೆ. ಶಕ್ತಿಯೊಂದಿಗೆ, ಪ್ರೀತಿಯಿಂದ- ಹಾಂಕಾಂಗ್ ತಂಡ” ಎಂದು ಜೆರ್ಸಿಯಲ್ಲಿ ಬರೆಯಲಾಗಿದೆ.
ಇದರ ಚಿತ್ರವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ವಿರಾಟ್ ಕೊಹ್ಲಿ, ಹಾಂಕಾಂಗ್ ಕ್ರಿಕೆಟ್ ಗೆ ಧನ್ಯವಾದಗಳು. ನಿಮ್ಮ ಈ ನಡೆ ಅತ್ಯಂತ ವಿನಮ್ರವಾಗಿದೆ, ತುಂಬಾ ಸಿಹಿಯಾಗಿದೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಬಿಜೆಪಿ ಮುಸ್ಲಿಮರನ್ನು ಬೆದರಿಸಿ ಮತ ಸೆಳೆಯಲು ಬಯಸಿದೆ: ಸಂಸದ ಮೌಲಾನಾ ಅಜ್ಮಲ್
ಕಳಪೆ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಏಷ್ಯಾ ಕಪ್ ನಲ್ಲಿ ಫಾರ್ಮ್ ಕಂಡುಕೊಳ್ಳುತ್ತಿದ್ದಾರೆ. ಹಾಂಕಾಂಗ್ ವಿರುದ್ಧ ವಿರಾಟ್ 44 ಎಸೆತಗಳಲ್ಲಿ ಅಜೇಯ 59 ರನ್ ಗಳಿಸಿದರು. ಈ ಇನ್ನಿಂಗ್ ನಲ್ಲಿ ವಿರಾಟ್ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್ ಬಾರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಯದೊಂದಿಗೆ ಮುಗಿಯಲಿ ಅಭಿಯಾನ: ಸೀಸನ್ ನ ಕೊನೆಯ ಪಂದ್ಯಕ್ಕೆ ಸ್ಮೃತಿ ಟೀಂ ರೆಡಿ
ಭಾರತೀಯನೊಬ್ಬ ಪಾಕಿಸ್ಥಾನ ತಂಡಕ್ಕೆ ಬೆದರಿಕೆ ಹಾಕಿದ್ದ, ಆದರೆ…; ಬಾಂಬ್ ಸಿಡಿಸಿದ ಅಫ್ರಿದಿ
ವನಿತಾ ಪ್ರೀಮಿಯರ್ ಲೀಗ್ :ಡೆಲ್ಲಿ ಕ್ಯಾಪಿಟಲ್ಸ್ ಫೈನಲಿಗೆ
ಏಕದಿನ ಸರಣಿ ಗೆದ್ದರಷ್ಟೇ ಭಾರತ ನಂ. 1
ಪ್ಲೇ ಆಫ್ ಪ್ರವೇಶಿಸಿದ ಯುಪಿ ; ಗ್ರೇಸ್ ಹ್ಯಾರಿಸ್, ಮೆಕ್‌ಗ್ರಾತ್ ಗ್ರೇಟ್ ಬ್ಯಾಟಿಂಗ್