ಐಪಿಎಲ್ ಹರಾಜಿನ ಕೋಟಿವೀರರಿಗೆ ಸಿಗುವ ಅಸಲಿ ಮೊತ್ತವೆಷ್ಟು?


Team Udayavani, Feb 15, 2022, 3:08 PM IST

ಐಪಿಎಲ್ ಹರಾಜಿನ ಕೋಟಿವೀರರಿಗೆ ಸಿಗುವ ಅಸಲಿ ಮೊತ್ತವೆಷ್ಟು?

ಕ್ರಿಕೆಟ್ ಪ್ರೇಮಿಗಳಿಗೆ ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಹಲವು ಅಚ್ಚರಿ ಮತ್ತು ವಿಶೇಷತೆಗಳಿಂದ ಮುಗಿದಿದೆ. ಹತ್ತು ಪ್ರಾಂಚೈಸಿಗಳು ಅವರವರಿಗೆ ಬೇಕೆನಿಸಿದ ಆಟಗಾರರನ್ನು ಕೋಟಿಗಟ್ಟಲೇ ಹಣ ಖರ್ಚು ಮಾಡಿ ಖರೀದಿ ಮಾಡಿದ್ದಾರೆ.

20 ಲಕ್ಷ ಮೂಲ ಬೆಲೆಗೆ ಇದ್ದ ಆಟಗಾರರು ಕೆಲವೇ ನಿಮಿಷದಲ್ಲಿ ಕೋಟಿಯ ಒಡೆಯರಾದರೆ ಇನ್ನೂ ಪ್ರಮುಖ ಆಟಗಾರರೂ ಉತ್ತಮ ಬೆಲೆ ಪಡೆದಿದ್ದಾರೆ. ಇದನ್ನು ಗಮನಿಸಿದ ಅನೇಕರಿಗೆ ಕೋಟಿಗಟ್ಟಲೇ ಮೊತ್ತಕ್ಕೆ ಖರೀದಿ ಮಾಡಿದ ಆಟಗಾರರಿಗೆ ಅಷ್ಟೇ ಹಣವನ್ನು ನೀಡಲಾಗುತ್ತದೆಯೇ ಎಂಬ ಅನುಮಾನ ಮೂಡಿರಬಹುದು.

ಇದಕ್ಕೆ ಉತ್ತರ ಇಲ್ಲ.  ಹರಾಜಿನಲ್ಲಿ ಗಳಿಸಿದಷ್ಟೇ ಹಣ ಆಟಗಾರರ ಕೈಗೆ ಸಿಗುವುದಿಲ್ಲ. ಕೆಲವು ಕಡಿತಗಳ ನಂತರವೇ ಅವರಿಗೆ ಬಾಕಿ ಹಣ ಸಿಗುವುದು.

ಒಬ್ಬ ಆಟಗಾರ ಹರಾಜದ ಮೊತ್ತ ಅದು ಆ ಆವೃತಿಗೆ ಮಾತ್ರ ಅನ್ವಯ, ತಂಡದ ಆಡಳಿತ ಮಂಡಳಿ ಒಬ್ಬೊಬ ಆಟಗಾರನಿಗೆ ಅವರು ಒಂದೊಂದು ರೀತಿಯಲ್ಲಿ ಒಪ್ಪಂದ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಈಗ ಒಬ್ಬ ಆಟಗಾರನ್ನು ಹತ್ತು ಕೋಟಿ ಕೊಟ್ಟು ಒಂದು ತಂಡ ಖರೀದಿ ಮಾಡಿದರೆ ಅವರ ಒಪ್ಪಂದ ಮೂರು ವರ್ಷಕ್ಕಾದರೆ 10*3 ಅಂದರೆ ಒಟ್ಟು 30 ಕೋಟಿ ಕೊಡಬೇಕು. ಅದನ್ನು ವಿವಿಧ ಕಂತುಗಳಾಗಿ ವಿಂಗಡಿಸಿ ನೀಡಲಾಗುತ್ತದೆ.

ಇದನ್ನೂ ಓದಿ:ಕ್ರಮಬದ್ಧವಾಗಿ ಮತ್ತೆ ಆನ್ ಲೈನ್ ಗೇಮಿಂಗ್ ನಿಷೇಧ ಕಾಯ್ದೆ ತರುತ್ತೇವೆ: ಆರಗ ಜ್ಞಾನೇಂದ್ರ

ಟಿಡಿಸ್:  ಇದರಲ್ಲಿ ಎರಡು ರೀತಿ ಇದೆ. ಭಾರತೀಯ ಆಟಗಾರ ಮತ್ತು ವಿದೇಶ ಆಟಗಾರರಿಗೆ ಭಿನ್ನ ರೀತಿಯಲ್ಲಿದೆ. ಒಬ್ಬ ಭಾರತೀಯ ಆಟಗಾರ 10 ಕೋಟಿಗೆ ಹರಾಜಾದರೆ ಅದರಲ್ಲಿ10% ಟಿಡಿಸ್ ಕಡಿತವಾಗುತ್ತದೆ ಅಂದರೆ ಒಂದು ಕೋಟಿ. ಉಳಿದ 9 ಕೋಟಿ ಅವರಿಗೆ ಸೇರುತ್ತದೆಯೆ ನೋಡಿದಾಗ ಅದರ ಸರಿಯಾದ ಮಾಹಿತಿ ಇಲ್ಲ, ಉಳಿದ ಹಣವು ಅವರ ವರ್ಷದ ಐಟಿ ರಿಟರ್ನ್ಸ್ ಮೇಲೆ ಅವಂಬಿತವಾಗಿದೆ.

ಇದೇ ವೇಳೆ ವಿದೇಶಿ ಆಟಗಾರರಿಗೆ 20% ಕಡಿತವಾಗುತ್ತದೆ, ಅಲ್ಲದೆ ಆ ವಿದೇಶಿ ಆಟಗಾರ ತನ್ನ ಕ್ರಿಕೆಟ್ ಮಂಡಳಿಗೆ 20% ಹಣವನ್ನು ಬಿಸಿಸಿಐ ಮುಖಾಂತರ ನೀಡಬೇಕು.

ಉದಾಹರಣೆಗೆ ಆರ್ ಸಿಬಿಯ ಹಸರಂಗ ಭಾರತದಲ್ಲಿ ನಡೆಯುವ ಕ್ರೀಡಾ ಕೂಟದಲ್ಲಿ ಪಾಲ್ಗೋಳಲು ಅವರ ದೇಶಿ ಮಂಡಳಿಯಾದ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅನುಮತಿ ಬೇಕು. ಜೊತೆಗೆ ಅವರ ಹರಾಜಿನ ಮೊತ್ತದಲ್ಲಿ 20% ಭಾಗವನ್ನು ಲಂಕನ್ ಮಂಡಳಿಗೆ ನೀಡಬೇಕಾಗುತ್ತದೆ. ಉಳಿದ ಹಣವಷ್ಟೇ ಆಟಗಾರನಿಗೆ ಸೇರುತ್ತದೆ.

ಬಹಳಷ್ಟು ಆಟಗಾರರಿಗೆ ಈ ಹರಾಜು ಮೊತ್ತವೇ ಆ ಕೂಟದ ಸಂಬಳವಾಗುತ್ತದೆ. ಆದರೆ ಕೆಲವು ತಂಡದಲ್ಲಿ ಕೆಲವು ಹಿರಿಯ ಆಟಗಾರರಿಗೆ ಮಾತ್ರ ಪಂದ್ಯದ ಆಧಾರದಲ್ಲಿ ಸಂಬಳ ನಿಗದಿಯಾಗುತ್ತದೆ. ಉಳಿದಂತೆ ಆಟಗಾರಿಗೆ ಅವರ ಪ್ರದರ್ಶನದ ಮೇಲೆ ಅನೇಕ ರೀತಿಯಲ್ಲಿ ಬಹುಮಾನಗಳು ದೊರಕುತ್ತದೆ.  ಇದಲ್ಲದೇ ಆಟಗಾರರಿಗೆ ಕೂಟದ ವೇಳೆ ಎಲ್ಲಾ ವೆಚ್ಚವನ್ನು ಪ್ರಾಂಚೈಸಿಯವರು ನೋಡಿಕೊಳ್ಳುತಾರೆ.

ಮನೋಷ್ ಕುಮಾರ್ ಬಸರೀಕಟ್ಟೆ

ಟಾಪ್ ನ್ಯೂಸ್

1-wewqewewq

H.D. Revanna ಎಸ್ ಐಟಿ ವಶಕ್ಕೆ ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

1-qwweqwewq

Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

Priyanka Gandhi Slams PM Modi in Banaskantha Rally

ರಾಹುಲ್ ಸಾಮಾನ್ಯ ಜನರ ಕಷ್ಟ ಕೇಳಿದ್ದಾರೆ, ಆದರೆ ಮೋದಿ ಅರಮನೆಯಲ್ಲಿ ಕುಳಿತಿದ್ದಾರೆ:ಪ್ರಿಯಾಂಕಾ

Allu Arjun: ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿ ದಾಖಲೆ ಬರೆದ ʼಪುಷ್ಪ ಪುಷ್ಪʼ ಹಾಡು

Allu Arjun: ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿ ದಾಖಲೆ ಬರೆದ ʼಪುಷ್ಪ ಪುಷ್ಪʼ ಹಾಡು

1-wwqewqe

BJP ಕುರುಬ ಸಮುದಾಯಕ್ಕೆ ಒಂದೂ ಟಿಕೆಟ್ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ

8

ಅಮಿತಾಭ್‌ ಟು ಶಾರುಖ್:‌ ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

nosthush-kenjige

T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್‌ ಕೆಂಜಿಗೆಗೆ ಸ್ಥಾನ

Kohli IPL 2024

IPL;ಇಂದು ಆರ್‌ಸಿಬಿ ಎದುರಾಳಿ ಗುಜರಾತ್‌ ಟೈಟಾನ್ಸ್‌:ಪ್ಲೇಆಫ್ ಸಾಧ್ಯತೆಗೆ ಗೆಲುವು ಅನಿವಾರ್ಯ

1-qewqeqwe

England;  20 ವರ್ಷದ ಕ್ರಿಕೆಟಿಗ ನಿಗೂಢ ಸಾವು!

1-weweqwe

IPL; ವಾಂಖೇಡೆಯಲ್ಲಿ ಬೌಲರ್‌ಗಳ ಮೇಲುಗೈ: ಮುಂಬೈ ವಿರುದ್ಧ ಕೆಕೆಆರ್ ಜಯಭೇರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewewq

H.D. Revanna ಎಸ್ ಐಟಿ ವಶಕ್ಕೆ ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

1-qwweqwewq

Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್‌ ತಂಗಡಗಿ

ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್‌ ತಂಗಡಗಿ

1-wewqewq

Belagavi; ಶೆಟ್ಟರ್ ಅವರಿಗೆ ಆಶೀರ್ವಾದ ಮಾಡಿದ ವಿವಿಧ ಮಠಾಧೀಶರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.