ನಾನೇನೂ ಪಾಕ್‌ ತಂಡದ ಮಾತೆಯಲ್ಲ: ಸಾನಿಯ ತಿರುಗೇಟು

Team Udayavani, Jun 19, 2019, 10:27 AM IST

ಹೊಸದಿಲ್ಲಿ: ಭಾರತ ವಿರುದ್ಧ ಪಾಕಿಸ್ಥಾನ ತಂಡ ಸೋತ ಬೆನ್ನಲ್ಲೇ ಪಾಕ್‌ ತಂಡದ ವಿರುದ್ಧ ಟೀಕೆಗಳ ಸುರಿಮಳೆ ಆಗುತ್ತಿದೆ. ಪಾಕಿಸ್ಥಾನ ಸೋತ ಬಳಿಕ ಸಾನಿಯಾ ಮಿರ್ಜಾ ಮತ್ತು ಪಾಕಿಸ್ಥಾನದ ನಟಿ ವೀಣಾ ಮಲ್ಲಿಕ್‌ ಟ್ವೀಟ್‌ನಲ್ಲಿ ಜಗಳ ಮಾಡಿಕೊಂಡಿದ್ದಾರೆ.

“ಮಗುವಿನ ಬಗ್ಗೆ ನನಗೆ ಚಿಂತೆಯಾಗಿದೆ. ನೀವು ಮಗುವನ್ನು ಹಾಗೆಲ್ಲ ಪಾರ್ಟಿಗೆ ಕರೆದುಕೊಂಡು ಹೋಗುವುದು ಸರಿಯಲ್ಲ. ಅಲ್ಲಿ ಒಳ್ಳೆಯ ಆಹಾರ ಸಿಗುವುದಿಲ್ಲ. ನೀವು ಒಬ್ಬರು ಮಗುವಿನ ತಾಯಿ ಅಥವಾ ಆ್ಯತ್ಲೀಟ್‌ ಎಂಬುದನ್ನು ಗಮನದ ಲ್ಲಿಟ್ಟುಕೊಳ್ಳಬೇಕಿತ್ತು’. ಎಂದು ವೀಣಾ ಮಲಿಕ್‌ ಟ್ವೀಟ್‌ ಮಾಡಿದ್ದರು.

ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ಸಾನಿಯಾ ಇದು ನನ್ನ ವೈಯಕ್ತಿಕ ವಿಚಾರ. ನನ್ನ ಮಗನ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕು ಎಂಬುದು ನನಗೆ ತಿಳಿಸಿದೆ. ಬೇರಾರೂ ಹೇಳಬೇಕಾದ ಅಗತ್ಯ ವಿಲ್ಲ. ಮಾತ್ರವಲ್ಲದೇ ಪಾಕ್‌ ಕ್ರಿಕೆಟಿಗರ ಬಗ್ಗೆ ಕಾಳಜಿ ವಹಿಸಲು ನಾನೇನೂ ಪಾಕಿಸ್ಥಾನ ತಂಡದ ಮಾತೆಯಲ್ಲ, ಅಥವಾ ಅವರ ಕಾಲೇಜಿನ ಪ್ರಾಂಶುಪಾಲೆಯೂ ಅಲ್ಲ ಎಂದು ಸಾನಿಯಾ ತಿರುಗೇಟು ನೀಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ