ಐಸಿಸಿ ಟೆಸ್ಟ್‌  ಚಾಂಪಿಯನ್‌ಶಿಪ್‌: ಫೈನಲ್‌ನಲ್ಲಿ ಆಸ್ಟ್ರೇಲಿಯ-ಭಾರತ ಸೆಣಸಾಟ?


Team Udayavani, Jan 9, 2023, 8:15 AM IST

ಐಸಿಸಿ ಟೆಸ್ಟ್‌  ಚಾಂಪಿಯನ್‌ಶಿಪ್‌: ಫೈನಲ್‌ನಲ್ಲಿ ಆಸ್ಟ್ರೇಲಿಯ-ಭಾರತ ಸೆಣಸಾಟ?

ಹೊಸದಿಲ್ಲಿ: ಭಾರತ ಸತತ ಎರಡನೇ ಸಲ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಲಗ್ಗೆ ಹಾಕಲಿದೆಯೇ? ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸೆಣಸಲಿದೆಯೇ? ರವಿವಾರವರೆಗಿನ ಲೆಕ್ಕಾಚಾರದ ಪ್ರಕಾರ 2021-23ರ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಆಸ್ಟ್ರೇಲಿಯ-ಭಾರತ ನಡುವೆ ಫೈನಲ್‌ ಏರ್ಪಡುವುದು ಬಹುತೇಕ ಖಚಿತ.

ಆದರೂ ಇಲ್ಲಿ ನಾನಾ ಲೆಕ್ಕಾಚಾರಗಳಿವೆ. ಸಿಡ್ನಿಯ ನ್ಯೂ ಇಯರ್‌ ಟೆಸ್ಟ್‌ ಪಂದ್ಯದ ಬಳಿಕ ಆಸ್ಟ್ರೇಲಿಯ ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಗಟ್ಟಿಗೊಳಿಸಿದೆ. 10 ಗೆಲುವು, ಒಂದು ಸೋಲು, 4 ಡ್ರಾ ಫ‌ಲಿತಾಂಶದೊಂದಿಗೆ ತನ್ನ ಪಾಯಿಂಟ್‌ ಪರ್ಸಂಟೇಜ್‌ ಅನ್ನು (ಪಿಸಿಟಿ) 75.55ಕ್ಕೆ ಏರಿಸಿ ಕೊಂಡಿದೆ. ಸರಣಿಗೂ ಮುನ್ನ ದ್ವಿತೀಯ ಸ್ಥಾನದ ಲ್ಲಿದ್ದ ದ. ಆಫ್ರಿಕಾ 4ನೇ ಸ್ಥಾನಕ್ಕೆ ಜಾರಿದೆ (48.71).

ಇದೇ ವೇಳೆ ಬಾಂಗ್ಲಾದೇಶ ವಿರುದ್ಧ 2-0 ಸರಣಿ ಜಯಿಸಿದ ಭಾರತ ದ್ವಿತೀಯ ಸ್ಥಾನಕ್ಕೆ ಏರಿತು (58.93). ಶ್ರೀಲಂಕಾ 3ನೇ ಸ್ಥಾನದಲ್ಲಿದೆ (53.93). ಇಲ್ಲಿಗೇ ಭಾರತ-ಆಸ್ಟ್ರೇಲಿಯ ನಡುವೆ ಫೈನಲ್‌ ನಡೆಯಲಿದೆ ಎಂದು ಲೆಕ್ಕಾಚಾರ ಹಾಕಿಕೊಳ್ಳುವುದು ತಪ್ಪಾಗುತ್ತದೆ. ಮುಂದಿನ 3 ಸರಣಿಗಳ ಫ‌ಲಿತಾಂಶ ಇಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

ಇವುಗಳಲ್ಲಿ ಅತ್ಯಂತ ಮಹತ್ವದ ಸರಣಿಯೆಂದರೆ ಭಾರತ-ಆಸ್ಟ್ರೇಲಿಯ ನಡುವೆ ನಡೆಯುವ 4 ಪಂದ್ಯಗಳ “ಬೋರ್ಡರ್‌-ಗಾವಸ್ಕರ್‌ ಟ್ರೋಫಿ’. ಹಾಗೆಯೇ ದಕ್ಷಿಣ ಆಫ್ರಿಕಾ ತವರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 2 ಪಂದ್ಯಗಳ ಸರಣಿಯನ್ನು ಆಡಲಿದೆ. ಶ್ರೀಲಂಕಾ ತಂಡ ನ್ಯೂಜಿಲ್ಯಾಂಡ್‌ ವಿರುದ್ಧವೂ ತವರಲ್ಲಿ 2 ಟೆಸ್ಟ್‌ಗಳನ್ನು ಆಡಲಿದೆ. ಇದರೊಂದಿಗೆ 2021-2023ರ ಆವೃತ್ತಿಯ ಟೆಸ್ಟ್‌ ಚಾಂಪಿಯನ್‌ಶಿಪ್‌ ಸರಣಿ ಕೊನೆಗೊಳ್ಳಲಿದೆ. ಆಗ ಯಾವ ತಂಡಕ್ಕೆ ಎಷ್ಟು ಅವಕಾಶವಿದೆ ಎಂಬುದರ ಕಿರುನೋಟವನ್ನು ಇಲ್ಲಿ ನೀಡಲಾಗಿದೆ.

ಆಸ್ಟ್ರೇಲಿಯ
ಸಿಡ್ನಿ ಟೆಸ್ಟ್‌ ಪಂದ್ಯವನ್ನೂ ಜಯಿಸಿದ್ದರೆ ಆಸ್ಟ್ರೇಲಿ ಯದ ಫೈನಲ್‌ ಪ್ರವೇಶ ರವಿವಾರವೇ ಅಧಿಕೃತ ಗೊಳ್ಳುತ್ತಿತ್ತು. ಹೀಗಾಗಿ ಭಾರತದೆದುರಿನ ಸರಣಿ ಫ‌ಲಿತಾಂಶ ನಿರ್ಣಾಯಕ. ಇಲ್ಲಿ ಆಸ್ಟ್ರೇಲಿಯ 4-0 ಅಂತರದಿಂದ ಗೆದ್ದರೆ 80.07 ಪಿಸಿಟಿಯೊಂದಿಗೆ ಅಗ್ರಸ್ಥಾನಿಯಾಗಿ ಫೈನಲ್‌ ಪ್ರವೇಶಿಸಲಿದೆ. ಅಕಸ್ಮಾತ್‌ ಭಾರತದ ವಿರುದ್ಧ ಇಷ್ಟೇ ಅಂತರದಿಂದ ಸೋತರೆ ಅದರ ಗೆಲುವಿನ ಸರಾಸರಿ ಅಂಕ 59.64ಕ್ಕೆ ಕುಸಿಯಲಿದೆ. ಕನಿಷ್ಠ ದ್ವಿತೀಯ ಸ್ಥಾನಕ್ಕೆ ಇಷ್ಟು ಧಾರಾಳ ಸಾಕು ಎನ್ನಬಹುದು.

ಭಾರತ
ಆಸ್ಟ್ರೇಲಿಯ ಎದುರಿನ 4 ಪಂದ್ಯಗಳ ಸರಣಿಯನ್ನು 3-1 ಅಂತರದಿಂದ ಜಯಿಸಿದರೆ ಭಾರತಕ್ಕೆ ಫೈನಲ್‌ ಟಿಕೆಟ್‌ ಲಭಿಸಲಿದೆ (61.92). ಆಗ ಫೈನಲ್‌ನಲ್ಲಿ ಆಸ್ಟ್ರೇಲಿಯವೇ ಎದುರಾಗಲಿದೆ. ಸರಣಿ 2-2ರಿಂದ ಡ್ರಾಗೊಂಡರೂ ಭಾರತಕ್ಕೆ ಗಂಡಾಂತರವಿಲ್ಲ (56.4). ನಾಲ್ಕೂ ಟೆಸ್ಟ್‌ ಗೆದ್ದರೆ ಭಾರತದ ಪಿಸಿಟಿ 67.43ಕ್ಕೆ ಏರಲಿದೆ. ನಾಲ್ಕರಲ್ಲೂ ಸೋತರೆ ಪಿಸಿಟಿ 45.4ಕ್ಕೆ ಕುಸಿಯಲಿದೆ. ಆಗ ಶ್ರೀಲಂಕಾಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.

ದಕ್ಷಿಣ ಆಫ್ರಿಕಾ
ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡೂ ಟೆಸ್ಟ್‌ ಪಂದ್ಯಗಳನ್ನು ಗೆದ್ದರೆ ದಕ್ಷಿಣ ಆಫ್ರಿಕಾದ ಪಿಸಿಟಿ 55.55 ಆಗಲಿದೆ. ಆದರೆ ಇದು ಫೈನಲ್‌ ಪ್ರವೇಶಕ್ಕೆ ಸಾಲದು. ಆಸ್ಟ್ರೇಲಿಯ ವಿರುದ್ಧ ಭಾರತ ಕನಿಷ್ಠ 2 ಪಂದ್ಯ ಗೆದ್ದರೂ ದಕ್ಷಿಣ ಆಫ್ರಿಕಾ ಫೈನಲ್‌ ರೇಸ್‌ನಿಂದ ಹೊರಬೀಳಲಿದೆ.ಹಾಗೆಯೇ ವೆಸ್ಟ್‌ ಇಂಡೀಸ್‌ ವಿರುದ್ಧ ಎರಡೂ ಟೆಸ್ಟ್‌ ಸೋತರೆ ಹರಿಣಗಳ ಪಿಸಿಟಿ 42.2ಕ್ಕೆ ಕುಸಿಯಲಿದೆ.

ಶ್ರೀಲಂಕಾ
ನ್ಯೂಜಿಲ್ಯಾಂಡ್‌ ವಿರುದ್ಧ 2-0 ಅಂತರದ ಜಯ ಸಾಧಿಸಿದರೆ ಶ್ರೀಲಂಕಾದ ಗೆಲುವಿನ ಪ್ರತಿಶತ ಅಂಕ 61.11ಕ್ಕೆ ತಲುಪುತ್ತದೆ. ಆದರೂ ಫೈನಲ್‌ ಪ್ರವೇಶಕ್ಕೆ ಈ ಅಂಕ ಸಾಲದು. ಆಸೀಸ್‌ ವಿರುದ್ಧ ಭಾರತ 3-1, 3-0 ಅಥವಾ 4-0 ಅಂತರದಿಂದ ಗೆದ್ದರೆ ಶ್ರೀಲಂಕಾ ರೇಸ್‌ನಿಂದ ಹೊರಬೀಳಲಿದೆ. ಆದರೆ ಭಾರತ-ಆಸ್ಟ್ರೇಲಿಯ ಸರಣಿ 2-2ರಿಂದ ಸಮನಾದರೆ ಆಗ ಲಂಕೆಗೆ ಅವಕಾಶವೊಂದು ಲಭಿಸಲಿದೆ. ಆದರೆ ಅದು ನ್ಯೂಜಿಲ್ಯಾಂಡ್‌ಗೆ ವೈಟ್‌ವಾಶ್‌ ಮಾಡುವುದು ಅನಿವಾರ್ಯ.ನ್ಯೂಜಿಲ್ಯಾಂಡ್‌ ವಿರುದ್ಧ ಎರಡರಲ್ಲೂ ಸೋತರೆ ಲಂಕೆಯ ಪಿಸಿಟಿ 44.44ಕ್ಕೆ ಇಳಿಯಲಿದೆ.

ಇಂಗ್ಲೆಂಡ್‌
ಇಂಗ್ಲೆಂಡ್‌ 46.97 ಪಿಸಿಟಿ ಅಂಕಗಳನ್ನು ಹೊಂದಿದೆ. ಆದರೆ ಇವರ ಮುಂದೆ ಯಾವುದೇ ಟೆಸ್ಟ್‌ ಪಂದ್ಯಗಳಿಲ್ಲ. ಆಸ್ಟ್ರೇಲಿಯ ವಿರುದ್ಧ ಭಾರತ 4-0 ನ್ಯೂಜಿಲ್ಯಾಂಡ್‌ ವಿರುದ್ಧ ಶ್ರೀಲಂಕಾ 2-0 ಅಂತರದ ಸೋಲಿಗೆ ಸಿಲುಕಿದರೆ ಆಗ ಈ ಎರಡೂ ತಂಡಗಳ ಪಿಸಿಟಿ ಇಂಗ್ಲೆಂಡ್‌ಗಿಂತ ಕೆಳಕ್ಕಿಳಿಯಲಿದೆ (ಭಾರತ 45.4, ಶ್ರೀಲಂಕಾ 44.44). ಆಗ ಇಂಗ್ಲೆಂಡ್‌ಗೆ ಫೈನಲ್‌ ಬಾಗಿಲು ತೆರೆಯಲಿದೆ.

ಇದೇ ಲೆಕ್ಕಾಚಾರವನ್ನು ತುಸು ಮುಂದುವರಿಸೋಣ. ವೆಸ್ಟ್‌ ಇಂಡೀಸ್‌ ವಿರುದ್ಧ 2-0 ಗೆಲುವು ಸಾಧಿಸಿದರೆ ಆಗ ಫೈನಲ್‌ಗೆ ನೆಗೆಯುವ ಅವಕಾಶ ದಕ್ಷಿಣ ಆಫ್ರಿಕಾದ್ದಾಗಲಿದೆ. ಅಕಸ್ಮಾತ್‌ ವೆಸ್ಟ್‌ ಇಂಡೀಸ್‌ 2-0 ಅಂತರದಿಂದ ಜಯಿಸಿತು ಎಂದಿಟ್ಟುಕೊಳ್ಳಿ, ಆಗ ವಿಂಡೀಸಿಗೂ ಫೈನಲ್‌ ಸಾಧ್ಯತೆಯೊಂದು ಎದುರಾಗಲಿದೆ (50.00). ಇಲ್ಲಿ ನೆನಪಿಡಬೇಕಾದ ಅಂಶವೆಂದರೆ, ಭಾರತ ಮತ್ತು ಶ್ರೀಲಂಕಾ ವೈಟ್‌ವಾಶ್‌ ಅನುಭವಿಸಬೇಕು!

ಈಗ ಫೈನಲ್‌ ರೇಸ್‌ನಿಂದ ಅಧಿಕೃತವಾಗಿ ಹೊರಗೆ ಬಿದ್ದಿರುವ ತಂಡಗಳೆಂದರೆ ಪಾಕಿಸ್ಥಾನ, ನ್ಯೂಜಿಲ್ಯಾಂಡ್‌ ಮತ್ತು ಬಾಂಗ್ಲಾದೇಶ ಮಾತ್ರ!

ಟಾಪ್ ನ್ಯೂಸ್

ಜಡೇಜ ಕಮಾಲ್… ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಚಾಂಪಿಯನ್‌

IPL 2023 Final: ಜಡೇಜಾ ಕಮಾಲ್… ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಚಾಂಪಿಯನ್‌

ಗಂಗೊಳ್ಳಿ: ತೆಂಗಿನ ಮರಕ್ಕೆ ರಿಕ್ಷಾ ಢಿಕ್ಕಿ; ಸಾವು

ಗಂಗೊಳ್ಳಿ: ತೆಂಗಿನ ಮರಕ್ಕೆ ರಿಕ್ಷಾ ಢಿಕ್ಕಿ; ಸಾವು

1-sadas

Srinagar ದಾಲ್ ಸರೋವರದಿಂದ 21 ಪ್ರವಾಸಿಗರನ್ನು ರಕ್ಷಿಸಿದ ಪೊಲೀಸರು

1-sasd

T Narasipura ಭೀಕರ ಅಪಘಾತ: ಮೈಸೂರು ಆಸ್ಪತ್ರೆಗೆ ಸಚಿವ ನಾಗೇಂದ್ರ ಭೇಟಿ

1-sadsa-d

IPL Final ; ಚೆನ್ನೈಗೆ ದೊಡ್ಡ ಸವಾಲು ಮುಂದಿಟ್ಟ ಗುಜರಾತ್; ಸುದರ್ಶನ್ ಸೆಂಚುರಿ ಮಿಸ್

ಕುರುಬೂರು ಬಳಿ ನಡೆದ ಅಪಘಾತ: ಆಸ್ಪತ್ರೆಗೆ ಸಚಿವರ ಭೇಟಿ, ಗಾಯಾಳುಗಳ ಅರೋಗ್ಯ ವಿಚಾರಣೆ

ಮೈಸೂರು: ಕುರುಬೂರು ಬಳಿ ನಡೆದ ಅಪಘಾತ: ಆಸ್ಪತ್ರೆಗೆ ಸಚಿವರ ಭೇಟಿ, ಗಾಯಾಳುಗಳ ಅರೋಗ್ಯ ವಿಚಾರಣೆ

2018 ರಲ್ಲಿ ಪತ್ನಿ ಮತ್ತು ಮಗುವನ್ನು ಕೊಲೆಗೈದ ಪ್ರಕರಣ…: ಆರೋಪಿ ಪತಿಗೆ ಜೀವಾವಧಿ ಶಿಕ್ಷೆ

2018 ರಲ್ಲಿ ಪತ್ನಿ ಮತ್ತು ಮಗುವನ್ನು ಕೊಲೆಗೈದ ಪ್ರಕರಣ…: ಆರೋಪಿ ಪತಿಗೆ ಜೀವಾವಧಿ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಡೇಜ ಕಮಾಲ್… ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಚಾಂಪಿಯನ್‌

IPL 2023 Final: ಜಡೇಜಾ ಕಮಾಲ್… ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಚಾಂಪಿಯನ್‌

1-sadsa-d

IPL Final ; ಚೆನ್ನೈಗೆ ದೊಡ್ಡ ಸವಾಲು ಮುಂದಿಟ್ಟ ಗುಜರಾತ್; ಸುದರ್ಶನ್ ಸೆಂಚುರಿ ಮಿಸ್

IPL 2023 Final: Dhoni won the toss against GT

GTvsCSK ಮೀಸಲು ದಿನದ ಐಪಿಎಲ್ ಫೈನಲ್: ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಧೋನಿ

wtc

World Test Championship final ಪಂದ್ಯಕ್ಕೆ ಅಂತಿಮ ತಂಡ ಪ್ರಕಟಿಸಿದ ಭಾರತ- ಆಸ್ಟ್ರೇಲಿಯಾ

thumb-1

ಮೀಸಲು ದಿನದಲ್ಲಿ IPL Final: ಇಂದೂ ಮಳೆ ಬಂದು ಪಂದ್ಯ ರದ್ದಾದರೆ ಯಾರು ವಿನ್ನರ್?

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಜಡೇಜ ಕಮಾಲ್… ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಚಾಂಪಿಯನ್‌

IPL 2023 Final: ಜಡೇಜಾ ಕಮಾಲ್… ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಚಾಂಪಿಯನ್‌

ಗಂಗೊಳ್ಳಿ: ತೆಂಗಿನ ಮರಕ್ಕೆ ರಿಕ್ಷಾ ಢಿಕ್ಕಿ; ಸಾವು

ಗಂಗೊಳ್ಳಿ: ತೆಂಗಿನ ಮರಕ್ಕೆ ರಿಕ್ಷಾ ಢಿಕ್ಕಿ; ಸಾವು

1-sadas

Srinagar ದಾಲ್ ಸರೋವರದಿಂದ 21 ಪ್ರವಾಸಿಗರನ್ನು ರಕ್ಷಿಸಿದ ಪೊಲೀಸರು

1-sadss

ಬಡವರ ಕೆಲಸದ ಬಗ್ಗೆ ನಿರ್ಲಕ್ಷ್ಯ ತರವಲ್ಲ: ಶಾಸಕ ಹರೀಶ್‌ ಗೌಡ ಎಚ್ಚರಿಕೆ

1-sad-sa

Hunsur ಟ್ರಾಕ್ಟರ್ ಕಳ್ಳತನ ಮಾಡಿದ್ದ ಆರೋಪಿ ಬಂಧನ