ಐಸಿಸಿ ಟೆಸ್ಟ್ ರ್‍ಯಾಂಕಿಂಗ್: ಪಂತ್ ಜೀವನಶ್ರೇಷ್ಠ 5ನೇ ಸ್ಥಾನ
Team Udayavani, Jul 7, 2022, 12:22 AM IST
ದುಬಾೖ: ಭಾರತದ ಸ್ಟಾರ್ ವಿಕೆಟ್‌ಕೀಪರ್ ತಥಾ ಬ್ಯಾಟ್ಸ್‌ಮನ್ ರಿಷಬ್ ಪಂತ್ ನೂತನ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ತನ್ನ ಜೀವನಶ್ರೇಷ್ಠ ಐದನೇ ಸ್ಥಾನಕ್ಕೇರಿದ್ದಾರೆ. ಫಾರ್ಮ್ ನಲ್ಲಿರದ ವಿರಾಟ್ ಕೊಹ್ಲಿ ಕಳೆದ ಆರು ವರ್ಷಗಳಲ್ಲಿ ಇದೇ ಮೊದಲ ಬಾರಿ ಹತ್ತರೊಳಗಿನ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಕೋವಿಡ್‌ನಿಂದ ತಡವಾಗಿ ನಡೆದ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ಪಂತ್ 146 ಮತ್ತು 57 ರನ್ ಗಳಿಸಿದ್ದರಿಂದ ರ್‍ಯಾಂಕಿಂಗ್‌ನಲ್ಲಿ ಉನ್ನತ ಸ್ಥಾನ ಪಡೆಯಲು ಯಶಸ್ವಿಯಾದರು. ಪಂತ್ ಕಳೆದ ಆರು ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಎರಡು ಶತಕ ಮತ್ತು ಮೂರು ಅರ್ಧಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.
ಸುದೀರ್ಘ ಸಮಯದಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಕೊಹ್ಲಿ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ 13ನೇ ಸ್ಥಾನಕ್ಕೆ ಜಾರಿದ್ದಾರೆ. ಹಾಲಿ ನಾಯಕ ರೋಹಿತ್ ಶರ್ಮ ಒಂದು ಸ್ಥಾನ ಕಳೆದುಕೊಂಡಿದ್ದಾರೆ.
ಅಗ್ರಸ್ಥಾನದಲ್ಲಿ ರೂಟ್
ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಭರ್ಜರಿ ಆಟದ ಪ್ರದ ರ್ಶನ ನೀಡಿದ ಇಂಗ್ಲೆಂಡಿನ ಜೋ ರೂಟ್ 923 ಅಂಕಗ ಳೊಂದಿಗೆ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿ ಕೊಂಡಿದ್ದಾರೆ. ಆಸ್ಟ್ರೇಲಿಯದ… ಲಬುಸ್‌ಚಾಗ್ನೆ ಮತ್ತು ಸ್ಟೀವ್ ಸ್ಮಿತ್ ಅನುಕ್ರಮವಾಗಿ 2ನೇ, 3ನೇ ಸ್ಥಾನದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿಂಬಾಬ್ವೆ ಸರಣಿಯಿಂದ ಬ್ರೇಕ್ ತೆಗೆದುಕೊಂಡ ಕೋಚ್ ದ್ರಾವಿಡ್: ಲಕ್ಷ್ಮಣ್ ಗೆ ಜವಾಬ್ದಾರಿ
ಮುಂದಿನ ವರ್ಷದಿಂದ ವನಿತಾ ಐಪಿಎಲ್: 5 ತಂಡಗಳ ನಡುವಿನ ಟಿ20 ಮುಖಾಮುಖಿ
ಇಂಡಿಯಾ ಮಹಾರಾಜಾಸ್-ವರ್ಲ್ಡ್ ಜೈಂಟ್ಸ್: 75ರ ಸ್ವಾತಂತ್ರ್ಯ ಸಂಭ್ರಮಕ್ಕೆ ಕ್ರಿಕೆಟ್ ಮೆರುಗು
600 ವಿಕೆಟ್ ಬೇಟೆ : ಟಿ20 ಕ್ರಿಕೆಟ್ನಲ್ಲಿ ದಾಖಲೆ ನಿರ್ಮಿಸಿದ ಡ್ವೇನ್ ಬ್ರಾವೋ
ಕೆನಡಿಯನ್ ಮಾಸ್ಟರ್’ ಟೆನಿಸ್: ಕ್ವಾರ್ಟರ್ ಫೈನಲ್ ಗೆ ನಿಕ್ ಕಿರ್ಗಿಯೋಸ್
MUST WATCH
ಹೊಸ ಸೇರ್ಪಡೆ
ಪ್ರೇಮ ಪ್ರಕರಣ; ತಿರಗಲು ಬಂದ ವಿದ್ಯಾರ್ಥಿ- ವಿದ್ಯಾರ್ಥಿನಿಗೆ ಚೂರಿ ಇರಿತ: ಆರೋಪಿ ವಶಕ್ಕೆ
ಬಿಸಿಲೂರಿನಲ್ಲಿ ಮಲೆನಾಡ ವಾತಾವರಣ: ಗಾಯಮುಖ ಜಲಪಾತ ವೈಭವ ನೋಡ ಬನ್ನಿ
ಧಾರವಾಡ ಹೈಕೋರ್ಟ್ ಪೀಠ ಲೋಕ ಅದಾಲತ್: 5 ಕೋಟಿ 77 ಲಕ್ಷ ರೂ.ಮೊತ್ತದ 183 ಪ್ರಕರಣಗಳ ಇತ್ಯರ್ಥ
ಕಾಪು: ಬಿಜೆಪಿ ಮಹಿಳಾ ಮೋರ್ಚಾ ತಿರಂಗಾ ಕಾಲ್ನಡಿಗೆ ಜಾಥಕ್ಕೆ ಸಚಿವೆ ಶೋಭಾ ಚಾಲನೆ
ಪಿನ್ ಕೋಡ್ ಜಾರಿಗೆ ಬಂದು ಆ.15ಕ್ಕೆ 50 ವರ್ಷ: ಅಂಚೆ ಕಚೇರಿಯ ಪಿನ್ ಕೋಡ್ ಇತಿಹಾಸ ಗೊತ್ತಾ?