
ಬಾಂಗ್ಲಾದೇಶದ ಟಿ 20 ತಂಡಕ್ಕೆ ಕೋಚ್ ಆಗಿ ಭಾರತದ ಶ್ರೀಧರನ್ ಶ್ರೀರಾಮ್
Team Udayavani, Aug 19, 2022, 4:55 PM IST

ಢಾಕಾ : ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಭಾರತದ ಮಾಜಿ ಆಲ್‌ರೌಂಡರ್ ಶ್ರೀಧರನ್ ಶ್ರೀರಾಮ್ ಅವರನ್ನು ಮುಂಬರುವ ಏಷ್ಯಾ ಕಪ್ 2022 ಮತ್ತು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಗೆ ರಾಷ್ಟ್ರೀಯ ತಂಡಕ್ಕೆ ತರಬೇತುದಾರರನ್ನಾಗಿ ನೇಮಿಸಿದೆ.
‘ದಿ ಡೈಲಿ ಸ್ಟಾರ್’ ಪತ್ರಿಕೆಯಲ್ಲಿನ ವರದಿಯೊಂದು ಬಿಸಿಬಿ ನಿರ್ದೇಶಕರನ್ನು ಉಲ್ಲೇಖಿಸಿ, ಶ್ರೀರಾಮ್ ಅವರ ನೇಮಕಾತಿಯನ್ನು ದೃಢಪಡಿಸಿದ್ದು, ವಿಶ್ವಕಪ್ ವರೆಗೆ ಶ್ರೀರಾಮ್ ಅವರನ್ನು ಆಯ್ಕೆ ಮಾಡಲಾಗಿದೆ. ಡೊಮಿಂಗೊ ಬಾಂಗ್ಲಾದ ಏಕದಿನ ಮತ್ತು ಟೆಸ್ಟ್ ಕೋಚ್ ಆಗಿ ಮುಂದುವರಿಯಲಿದ್ದಾರೆ.
ಶ್ರೀರಾಮ್ ಅವರು ಪಂಜಾಬ್‌ನ ಬೌಲಿಂಗ್ ಕೋಚ್ ಆಗಿ, ಆರ್ ಸಿಬಿಯ ಬ್ಯಾಟಿಂಗ್ ಮತ್ತು ಸ್ಪಿನ್ ಬೌಲಿಂಗ್ ಕೋಚ್ ಆಗಿ, ಆಸ್ಟ್ರೇಲಿಯಾದ ಸಹಾಯಕ ತರಬೇತುದಾರರಾಗಿ 2021 ರ ವಿಶ್ವ ಕಪ್ ವಿಜೇತ ತಂಡದ ಭಾಗವಾಗಿದ್ದರು.
ಶ್ರೀರಾಮ್ 2000 ಮತ್ತು 2004 ರ ನಡುವೆ ಎಂಟು ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WPL Auction: ಕಳೆದ ವರ್ಷ ಅನ್ ಸೋಲ್ಡ್, ಈ ಬಾರಿ 2 ಕೋಟಿ ರೂ ಪಡೆದ ದಾಖಲೆ ಬರೆದ ಕಶ್ವಿ

WPL Auction; ಬರೋಬ್ಬರಿ 1.3 ಕೋಟಿ ರೂ ಬಾಚಿದ ಕರ್ನಾಟಕದ 21 ವರ್ಷದ ವೃಂದಾ ದಿನೇಶ್

WPL Auction : 2 ಕೋಟಿ ಪಡೆದ ಸತರ್ಲ್ಯಾಂಡ್; ಸೇಲಾಗದ ವೇದಾ, ಪ್ರಿಯಾ ಪೂನಿಯಾ

ಕ್ರಿಕೆಟ್ ಆಸ್ಟ್ರೇಲಿಯಕ್ಕಿಂತ 28 ಪಟ್ಟು ಶ್ರೀಮಂತವಾಗಿದೆ ಬಿಸಿಸಿಐ! ಆದಾಯ ಎಷ್ಟು ಗೊತ್ತಾ?

INDvsSA; ಭಾರತ ವಿರುದ್ಧ ಸರಣಿಗೆ ಮೊದಲು ಹರಿಣಗಳಿಗೆ ಚಿಂತೆ; ಪ್ರಮುಖ ಬೌಲರ್ ಔಟ್