ವಿಶ್ವಕಪ್ ಹಾಕಿ ಟೂರ್ನಿ; ಆರಂಭಿಕ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಮಣಿಸಿದ ಭಾರತ


Team Udayavani, Jan 13, 2023, 9:25 PM IST

1-wa-ddasd

ರೂರ್ಕೆಲಾ: ಆತಿಥೇಯ ಭಾರತ ಶುಕ್ರವಾರ ನಡೆದ ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್‌ನ ತನ್ನ ಆರಂಭಿಕ ಪಂದ್ಯದಲ್ಲಿ ಸ್ಪೇನ್‌ನನ್ನು 2-0 ಗೋಲುಗಳಿಂದ ಸೋಲಿಸಿತು.

ಎರಡನೇ ಪೂಲ್ ಡಿ ಪಂದ್ಯದಲ್ಲಿ ಭಾರತದ ಪರ ಉಪನಾಯಕ ಅಮಿತ್ ರೋಹಿದಾಸ್ 12ನೇ ನಿಮಿಷ ಮತ್ತು ಹಾರ್ದಿಕ್ ಸಿಂಗ್ 26ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಐದು ಪೆನಾಲ್ಟಿ ಕಾರ್ನರ್‌ಗಳನ್ನು ಗಳಿಸುವುದರ ಜೊತೆಗೆ ಸ್ವಾಧೀನದಲ್ಲಿ ಪ್ರಾಬಲ್ಯ ಸಾಧಿಸಿದ ಭಾರತವು ಉತ್ತಮ ಆಟವಾಡಿತು, ಅದರಲ್ಲಿ ರೋಹಿದಾಸ್ ಒಂದನ್ನು ಗೋಲ್ ಆಗಿ ಪರಿವರ್ತಿಸಿದರು. ಸ್ಪೇನ್ ಮೂರು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದುಕೊಂಡಿತು ಆದರೆ ಎಲ್ಲವನ್ನೂ ವ್ಯರ್ಥ ಮಾಡಿತು.

ಇಂಗ್ಲೆಂಡ್‌ಗೆ ಭರ್ಜರಿ ಗೆಲುವು
ಇಂಗ್ಲೆಂಡ್‌-ವೇಲ್ಸ್‌ ನಡುವಿನ ದಿನದ 3ನೇ ಪಂದ್ಯ ಕೂಡ ಏಕಪಕ್ಷೀಯವಾಗಿ ಸಾಗಿತು. ಇದನ್ನು ಇಂಗ್ಲೆಂಡ್‌ 5-0 ಅಂತರದಿಂದ ತನ್ನದಾಗಿಸಿಕೊಂಡಿತು.

ಇಂಗ್ಲೆಂಡ್‌ ವಿರಾಮದ ವೇಳೆ 2-0, 3ನೇ ಕ್ವಾರ್ಟರ್‌ ವೇಳೆ 4-0 ಮುನ್ನಡೆಯಲ್ಲಿತ್ತು. ಲಿಯಮ್‌ ಆ್ಯನ್ಸೆಲ್‌ 2 ಗೋಲು, ನಿಕೋಲಸ್‌ ಪಾರ್ಕ್‌, ಫಿಲ್‌ ರೋಪರ್‌ ಮತ್ತು ನಿಕೋಲಸ್‌ ಬಾಂಡುರಕ್‌ ಒಂದೊಂದು ಗೋಲು ಬಾರಿಸಿ ದರು. ಇದು ರೂರ್ಕೆಲದ “ಬಿರ್ಸಾ ಮುಂಡಾ ಸ್ಟೇಡಿಯಂ’ ನಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಪಂದ್ಯ.

ಆರ್ಜೆಂಟೀನಾ ಜಯ
2023ರ ವಿಶ್ವಕಪ್‌ ಹಾಕಿ ಪಂದ್ಯಾವಳಿಯಲ್ಲಿ ಮೊದಲ ಗೆಲುವು ದಾಖಲಿಸಿದ ತಂಡವೆಂಬ ಹೆಗ್ಗಳಿಕೆ ಮಾಜಿ ಒಲಿಂಪಿಕ್‌ ಚಾಂಪಿಯನ್‌ ಆರ್ಜೆಂಟೀನಾದ್ದಾಯಿತು. “ಎ’ ವಿಭಾಗದ ಪಂದ್ಯದಲ್ಲಿ ಅದು ದಕ್ಷಿಣ ಆಫ್ರಿಕಾವನ್ನು ಏಕೈಕ ಗೋಲಿನಿಂದ ಸೋಲಿಸಿತು.

ಮೊದಲೆರಡು ಕ್ವಾರ್ಟರ್‌ಗಳಲ್ಲಿ ಎರಡೂ ತಂಡಗಳು ಸಮಬಲದ ಪೈಪೋಟಿ ನೀಡಿದ್ದರಿಂದ ಯಾರಿಂದಲೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. 3ನೇ ಕ್ವಾರ್ಟರ್‌ನ 42ನೇ ನಿಮಿಷ ದಲ್ಲಿ ಕ್ಯಾಸೆಲ್ಲ ಮೈಕೊ ಆಕರ್ಷಕ ಫೀಲ್ಡ್‌ ಗೋಲ್‌ ಮೂಲಕ ಆರ್ಜೆಂಟೀನಾಕ್ಕೆ ಮುನ್ನಡೆ ಒದಗಿಸಿದರು. ಈ ಗೋಲೇ ಪಂದ್ಯದ ಫ‌ಲಿ ತಾಂಶವನ್ನು ನಿರ್ಧರಿಸಿತು.

ಮೊದಲ ಕ್ವಾರ್ಟರ್‌ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಗೋಲು ಬಾರಿಸುವ ಉತ್ತಮ ಅವಕಾಶವಿತ್ತು. ಆದರೆ ಲಾಸ್‌ ಲಿಯೋನೆಸ್‌ ಈ ಅವಕಾಶವನ್ನು ಕೈಚೆಲ್ಲಿದರು.

ಆಸ್ಟ್ರೇಲಿಯ ಜಯಭೇರಿ
“ಎ’ ವಿಭಾಗದ ದ್ವಿತೀಯ ಪಂದ್ಯದಲ್ಲಿ ವಿಶ್ವದ ನಂ.1 ಖ್ಯಾತಿಯ ಆಸ್ಟ್ರೇಲಿಯ ಇದಕ್ಕೆ ತಕ್ಕ ಪ್ರದರ್ಶನ ನೀಡಿತು. 8-0 ಗೋಲುಗಳಿಂದ ಫ್ರಾನ್ಸ್‌ ತಂಡವನ್ನು ಹೊಡೆದುರುಳಿಸಿತು. ಈ ಪಂದ್ಯದಲ್ಲಿ ಕಾಂಗರೂ ನಾಡಿನ ಇಬ್ಬರಿಂದ ಹ್ಯಾಟ್ರಿಕ್‌ ಸಾಧನೆ ದಾಖಲಾಯಿತು. ಇವರೆಂದರೆ ಜೆರೆಮಿ ಹೇವಾರ್ಡ್‌ ಮತ್ತು ಕ್ರೆಗ್‌ ಟಾಮ್‌.

ಜೆರೆಮಿ ಹೇವಾರ್ಡ್‌ ಈ ಕೂಟದ ಮೊದಲ ಹ್ಯಾಟ್ರಿಕ್‌ ಹೀರೋ ಎನಿಸಿದರು. ಅವರು ಪಂದ್ಯದ 26ನೇ, 28ನೇ ಹಾಗೂ 38ನೇ ನಿಮಿಷ ದಲ್ಲಿ ಗೋಲು ಸಿಡಿಸಿದರು. ಈ ಮೂರೂ ಗೋಲುಗಳು ಪೆನಾಲ್ಟಿ ಕಾರ್ನರ್‌ ಮೂಲಕ ಬಂದವು. ಹೇವಾರ್ಡ್‌ 2014ರ ವಿಶ್ವಕಪ್‌ ವಿಜೇತ ಆಸ್ಟ್ರೇಲಿಯ ತಂಡದ ಸದಸ್ಯರಾಗಿದ್ದರು. 2018ರಲ್ಲಿ ಕಂಚು ಗೆದ್ದಾಗಲೂ ತಂಡದಲ್ಲಿದ್ದರು.

ಕ್ರೆಗ್‌ ಟಾಮ್‌ 8ನೇ, 31ನೇ ಹಾಗೂ 44ನೇ ನಿಮಿಷದಲ್ಲಿ ಗೋಲು ಬಾರಿಸಿ ಹ್ಯಾಟ್ರಿಕ್‌ ಪೂರ್ತಿಗೊಳಿಸಿದರು.

 

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.