ಮೂರೇ ದಿನದಲ್ಲಿ ಮುಗಿಯುವ ಹಂತದಲ್ಲಿ ಮೊದಲ ಟೆಸ್ಟ್

Team Udayavani, Nov 16, 2019, 12:07 PM IST

ಇಂಧೋರ್: ಪ್ರವಾಸಿ ಬಾಂಗ್ಲಾ ದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಗಿಯುವ ಹಂತದಲ್ಲಿದೆ. 343 ರನ್ ಹಿನ್ನಡೆ ಅನುಭವಿಸಿದ್ದ ಬಾಂಗ್ಲಾ ಎರಡನೇ ಇನ್ನಿಂಗ್ಸ್ ನಲ್ಲಿ 60 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡಿದೆ.

ಎರಡನೇ ದಿನದಾಟದ ಅಂತ್ಯಕ್ಕೆ ಆರು ವಿಕೆಟ್ ಗೆ 493 ರನ್ ಗಳಿಸಿದ್ದ ಭಾರತ ಇನ್ನಿಂಗ್ಸ್ ಅಲ್ಲಿಗೆ ಡಿಕ್ಲೇರ್ ಮಾಡಿಕೊಂಡಿತು.

ಇಂದು ಎರಡನೇ ಇನ್ನಿಂಗ್ ಆರಂಭಿಸಿದ ಬಾಂಗ್ಲಾ ನಿರಂತರ ಆಘಾತ ಅನುಭವಿಸಿತು. ಊಟದ ವಿರಾಮದ ವೇಳೆ ಕೇವಲ 60 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡಿದೆ.

ಬಾಂಗ್ಲಾ ಇನ್ನಿಂಗ್ಸ್ ಸೋಲು ತಪ್ಪಿಸಬೇಕಾದರೆ ಇನ್ನೂ 283 ರನ್ ಗಳಿಸಬೇಕಾಗಿದೆ.

ಶಮಿ ಎರಡು ವಿಕೆಟ್ ಪಡೆದರೆ, ಉಮೇಶ್ ಮತ್ತು ಇಶಾಂತ್ ತಲಾ ಒಂದು ವಿಕೆಟ್ ಪಡೆದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ