
ಆ್ಯಂಡರ್ಸನ್ ದಾಳಿಗೆ ಶರಣಾದ ಟೀಂ ಇಂಡಿಯಾ: ಚೆನ್ನೈನಲ್ಲಿ ಗೆದ್ದು ಕುಣಿದಾಡಿದ ಆಂಗ್ಲರು
Team Udayavani, Feb 9, 2021, 1:32 PM IST

ಚೆನ್ನೈ: ಜೇಮ್ಸ್ ಆ್ಯಂಡರ್ಸನ್ ಮತ್ತು ಜ್ಯಾಕ್ ಲೀಚ್ ಬಿಗು ದಾಳಿಗೆ ಟೀಂ ಇಂಡಿಯಾ ಬ್ಯಾಟ್ಸಮನ್ ಗಳು ಉತ್ತರ ಕಂಡುಕೊಳ್ಳಲು ವಿಫಲರಾದ ಕಾರಣ ಭಾರತ ತಂಡ ಮೊದಲ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದೆ. 420 ರನ್ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಕೇವಲ 192 ರನ್ ಗೆ ಆಲ್ ಔಟ್ ಆಗಿ 227 ರನ್ ಅಂತರದ ಸೋಲನುಭವಿತು.
39 ರನ್ ಗೆ ಒದು ವಿಕೆಟ್ ಕಳೆದುಕೊಂಡಿದ್ದಲ್ಲಿಂದ ಅಂತಿಮ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅರ್ಧಶತಕ ಬಾರಿಸಿ ನೆರವಾದರು. ಆದರೆ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಮತ್ತು ಸ್ಪಿನ್ನರ್ ಜ್ಯಾಕ್ ಲೀಚ್ ಸತತ ವಿಕೆಟ್ ಕಬಳಿಸಿ ಭಾರತವನ್ನು ಕಾಡಿದರು.
ಇದನ್ನೂ ಓದಿ:ICC ತಿಂಗಳ ಆಟಗಾರ : ಪಂತ್‌ಗೆ ಮೊದಲ ಗೌರವದ ಗರಿಮೆ, ಶಬ್ನಿಮ್ ಇಸ್ಮಾಯಿಲ್ ತಿಂಗಳ ಆಟಗಾರ್ತಿ
ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ 15 ರನ್ ಗಳಿಸಿದರೆ, ಉಪ ನಾಯಕ ಅಜಿಂಕ್ಯ ರಹಾನೆ ಶೂನ್ಯ ಸುತ್ತಿದ್ದರು. ಮೊದಲ ಇನ್ನಿಂಗ್ಸ್ ಹೀರೊ ರಿಷಭ್ ಪಂತ್ ಕೂಡಾ ಕೇವಲ 11 ರನ್ ಮಾತ್ರ ಗಳಿಸಿದರು. ವಾಷಿಂಗ್ಟನ್ ಸುಂದರ್ ಅವರದ್ದೂ ಶೂನ್ಯ ಸಂಪಾದನೆ!
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ಇನ್ನಿಂಗ್ಸ್ ಕಟ್ಟಿದ ನಾಯಕ ವಿರಾಟ್ ಕೊಹ್ಲಿ 72 ರನ್ ಬಾರಿಸಿದರು. ರವಿಚಂದ್ರನ್ ಅಶ್ವಿನ್ ಜೊತೆಗೆ ಅರ್ಧಶತಕದ ಜೊತೆಯಾಟವಾಡಿದರು. ಆದರೆ ಸ್ಟೋಕ್ಸ್ ಎಸೆತಕ್ಕೆ ಕೊಹ್ಲಿ ಬೌಲ್ಡ್ ಆಗುವುರೊಂದಿಗೆ ಭಾರತದ ಸೋಲು ಖಾತ್ರಿಯಾಯಿತು.
ಜ್ಯಾಕ್ ಲೀಚ್ ನಾಲ್ಕು ವಿಕೆಟ್ ಪಡೆದರೆ, ಮೂರು ವಿಕೆಟ್ ಆ್ಯಂಡರ್ಸನ್ ಪಾಲಾಯಿತು. ಆರ್ಚರ್, ಬೆಸ್ ಮತ್ತು ಸ್ಟೋಕ್ಸ್ ತಲಾ ಒಂದು ವಿಕೆಟ್ ಪಡೆದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
