ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಸೋತ ಭಾರತ; ತಂಡದಲ್ಲಿ ಎರಡು ಬದಲಾವಣೆ
Team Udayavani, Dec 10, 2022, 11:07 AM IST
ಚತ್ತೋಗ್ರಾಮ್: ಮೊದಲೆರಡು ಪಂದ್ಯಗಳನ್ನು ಸೋತ ಅವಮಾನ ಒಂದೆಡೆಯಾದರೆ, ಪ್ರಮುಖ ಆಟಗಾರರು ಒಬ್ಬರಾದ ಮೇಲೆ ಒಬ್ಬರಂತೆ ಗಾಯಗೊಳ್ಳುತ್ತಿದ್ದಾರೆ. ಈ ಎಲ್ಲಾ ಒತ್ತಡಗಳ ನಡುವೆ ಭಾರತ ತಂಡವು ಬಾಂಗ್ಲಾದೇಶ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯವಾಡಲು ತಯಾರಾಗಿದೆ.
ಚತ್ತೋಗ್ರಾಮ್ ನ ಜಹುರ್ ಅಹಮದ್ ಚೌಧರಿ ಸ್ಟೇಡಿಯಂನಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡ ಆಡುತ್ತಿದೆ. ಸರಣಿ ಸೋತರೂ, ಕೊನೆಯ ಪಂದ್ಯ ಗೆದ್ದು ಮರ್ಯಾದೆ ಉಳಿಸಿಕೊಳ್ಳಲು ರಾಹುಲ್ ಪಡೆ ಆಡುತ್ತಿದೆ.
ಟಾಸ್ ಗೆದ್ದ ಬಾಂಗ್ಲಾದೇಶವು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.
ಇದನ್ನೂ ಓದಿ:ಯುವತಿ ಮನೆಗೆ ನುಗ್ಗಿ ಸುಮಾರು 100 ಮಂದಿಯಿಂದ ದಾಂಧಲೆ: ಪೋಷಕರ ಮುಂದೆಯೇ ಕಿಡ್ನ್ಯಾಪ್
ಇಂದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಗಾಯಗೊಂಡ ರೋಹಿತ್ ಶರ್ಮಾ, ದೀಪಕ್ ಚಾಹರ್ ಬದಲಿಗೆ ಇಶಾನ್ ಕಿಶನ್ ಮತ್ತು ಕುಲದೀಪ್ ಯಾದವ್ ತಂಡ ಸೇರಿದ್ದಾರೆ. ಬಾಂಗ್ಲಾ ತಂಡದಲ್ಲೂ ಎರಡು ಬದಲಾವಣೆ ಮಾಡಲಾಗಿದೆ.
ತಂಡಗಳು
ಭಾರತ: ಶಿಖರ್ ಧವನ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾ/ವಿ.ಕೀ), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್
ಬಾಂಗ್ಲಾದೇಶ: ಅನಾಮುಲ್ ಹಕ್, ಲಿಟ್ಟನ್ ದಾಸ್ (ನಾ), ಶಕೀಬ್ ಅಲ್ ಹಸನ್, ಯಾಸಿರ್ ಅಲಿ, ಮುಶ್ಫಿಕರ್ ರಹೀಮ್ (ವಿ.ಕೀ), ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಎಬಾಡೋತ್ ಹೊಸೈನ್, ಮುಸ್ತಾಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾರ್ಡರ್- ಗಾವಸ್ಕರ್ ಟ್ರೋಫಿ ಆರಂಭ: ಟೀಂ ಇಂಡಿಯಾಗೆ ಇಬ್ಬರು ಪದಾರ್ಪಣೆ
ಆರ್.ಅಶ್ವಿನ್ ಕಾಲು ಮುಟ್ಟಿ ನಮಸ್ಕರಿಸಿದ ಆಸೀಸ್ ನೆಟ್ ಬೌಲರ್ ಮಹೇಶ್ ಪಿಥಿಯ
ಸ್ಪಿನ್ ತಂತ್ರವೇ ಗೆಲುವಿನ ಮಂತ್ರ: ಇಂದಿನಿಂದ ಭಾರತ-ಆಸ್ಟ್ರೇಲಿಯ ಟೆಸ್ಟ್ ಸರಣಿ
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಓವಲ್ ಆತಿಥ್ಯ
ರಣಜಿ ಟ್ರೋಫಿ ಸೆಮಿಫೈನಲ್: ಕಾಡಿದ ಸೌರಾಷ್ಟ್ರ; ಕಾಪಾಡಿದ ಅಗರ್ವಾಲ್