
ಜಿಂಬಾಬ್ವೆ ಸವಾಲಿಗೆ ರೋಹಿತ್ ಪಡೆ ರೆಡಿ: ತಂಡದಲ್ಲಿ ಪಂತ್ ಗೆ ಅವಕಾಶ
Team Udayavani, Nov 6, 2022, 1:14 PM IST

ಮೆಲ್ಬರ್ನ್: ಐಸಿಸಿ ಟಿ20 ವಿಶ್ವಕಪ್ 2022ರ ಕೂಟದ ಸೂಪರ್ 12 ಹಂತದ ಕೊನೆಯ ಪಂದ್ಯಕ್ಕೆ ಐತಿಹಾಸಿಕ ಮೆಲ್ಬರ್ನ್ ಮೈದಾನ ಸಜ್ಜಾಗಿದೆ. ಟ್ರೋಫಿ ಗೆಲ್ಲುವ ಫೇವರೆಟ್ ಭಾರತ ತಂಡ ಮತ್ತು ಈಗಾಗಲೇ ಕೂಟದಿಂದ ಹೊರಬಿದ್ದಿರುವ ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗುತ್ತಿದೆ.
ಟಾಸ್ ಗೆದ್ದ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅಂದಹಾಗೆ ರೋಹಿತ್ ಶರ್ಮಾ ಅವರು ನಾಯಕನಾಗಿ ಇಂದು 50 ನೇ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿದ್ದಾರೆ.
ಬಾಂಗ್ಲಾ ವಿರುದ್ಧ ಗೆದ್ದ ಬಳಿಕ ಪಾಕಿಸ್ಥಾನ ತಂಡವು ಗ್ರೂಪ್ 2ರಲ್ಲಿ ಅಗ್ರಸ್ಥಾನಿಯಾಗಿದೆ. ಜಿಂಬಾಬ್ವೆ ವಿರುದ್ಧ ಭಾರತ ತಂಡ ಗೆದ್ದರೆ ಭಾರತವೇ ಅಗ್ರಸ್ಥಾನಿಯಾಗಲಿದೆ.
ಇದನ್ನೂ ಓದಿ:ಕಪೂರ್ ಕುಟುಂಬದಲ್ಲಿ ಸಂಭ್ರಮ: ತಂದೆ – ತಾಯಿಯಾದ ರಣ್ಬೀರ್ – ಆಲಿಯಾ
ಟೀಂ ಇಂಡಿಯಾದಲ್ಲಿ ಇಂದು ಒಂದು ಬದಲಾವಣೆ ಮಾಡಲಾಗಿದೆ. ಇದುವರೆಗೆ ಕೂಟದಲ್ಲಿ ಅವಕಾಶ ಪಡೆದಿರದ ರಿಷಭ್ ಪಂತ್ ಇಂದು ತಂಡದಲ್ಲಿ ಸ್ಥಾನ ಪಡೆದಿದ್ದು, ಅವರಿಗಾಗಿ ದಿನೇಶ್ ಕಾರ್ತಿಕ್ ಜಾಗ ತೆರವು ಮಾಡಿದ್ದಾರೆ.
ಜಿಂಬಾಬ್ವೆಯು ಎರಡು ಬದಲಾವಣೆ ಮಾಡಿಕೊಂಡಿದೆ. ಮಿಲ್ಟನ್ ಮತ್ತು ಲ್ಯೂಕ್ ಜೊಂಗ್ವೆ ಬದಲಿಗೆ ಟೋನಿ ಮುನ್ಯೊಂಗಾ ಮತ್ತು ವೆಲ್ಲಿಂಗ್ಟನ್ ಮಸಕಡ್ಜಾ ಅವಕಾಶ ಪಡೆದಿದ್ದಾರೆ.
ತಂಡಗಳು
ಭಾರತ: ಕೆಎಲ್ ರಾಹುಲ್, ರೋಹಿತ್ ಶರ್ಮಾ(ನಾ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್(ವಿ.ಕೀ), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.
ಜಿಂಬಾಬ್ವೆ; ವೆಸ್ಲಿ ಮಾಧೆವೆರೆ, ಕ್ರೇಗ್ ಎರ್ವಿನ್(ನಾ), ರೆಗಿಸ್ ಚಕಬ್ವಾ (ವಿ.ಕೀ), ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ಟೋನಿ ಮುನ್ಯೊಂಗಾ, ರಿಯಾನ್ ಬರ್ಲ್, ಟೆಂಡೈ ಚಟಾರಾ, ರಿಚರ್ಡ್ ನಾಗರವಾ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ಲೆಸಿಂಗ್ ಮುಜರಬಾನಿ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಡೈರೆಕ್ಟರ್ ಜನರಲ್ ನೇವಲ್ ಆಪರೇಷನ್ಸ್ ಆಗಿ ಅತುಲ್ ಆನಂದ ಅಧಿಕಾರ ಸ್ವೀಕಾರ

ಕಲಬುರಗಿ ಗ್ರಾಮೀಣ ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ

ವಿನಯ್ ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸಬೇಕು: ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳ ಧರಣಿ

ಬೈಂದೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಮುನಿಯಾಲು ಉದಯಕುಮಾರ್ ಶೆಟ್ಟಿ ಹೆಸರು ಪ್ರಸ್ತಾಪ

ಜೈಲು ಶಿಕ್ಷೆ ವಿರುದ್ಧ ರಾಹುಲ್ ಗಾಂಧಿ ನಾಳೆ ಸೂರತ್ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ