

Team Udayavani, Nov 21, 2023, 6:00 AM IST
ಮುಂಬೈ: ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ಕಾಂಗರೂಗಳ ವಿರುದ್ಧ ಹೃದಯ ವಿದ್ರಾವಕ ಸೋಲು ಅನುಭವಿಸಿತು. ವಿಶ್ವಕಪ್ ಸೋಲಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಸಮಯವಿಲ್ಲ ಎಂಬಂತೆ ನ 23 ರಿಂದ ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಮುಂದಿನ ಟಿ 20 ಸರಣಿ ಪ್ರಾರಂಭವಾಗಲಿದೆ.
ಸೂರ್ಯ ಸಾರಥ್ಯ
ಸೂರ್ಯಕುಮಾರ್ ಯಾದವ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ರುತುರಾಜ್ ಗಾಯಕ್ವಾಡ್ ಉಪನಾಯಕರಾಗಿದ್ದಾರೆ. ಸೂರ್ಯಕುಮಾರ್ ಸೇರಿದಂತೆ ವಿಶ್ವಕಪ್ ತಂಡದ ಕೇವಲ ಮೂವರು ಆಟಗಾರರು ಇಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಿಬ್ಬರೆಂದರೆ ಇಶಾನ್ ಕಿಶನ್ ಮತ್ತು ಪ್ರಸಿದ್ಧ್ ಕೃಷ್ಣ. ಕೊನೆಯ 2 ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ಲಭ್ಯರಾಗಲಿದ್ದು, ಉಪನಾಯಕತ್ವ ವಹಿಸಲಿದ್ದಾರೆ. ಮೊದಲ ಪಂದ್ಯ ನ. 23ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ರಿಂಕು ಸಿಂಗ್, ಜಿತೇಶ್ ಶರ್ಮ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯಿ, ಆರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಆವೇಶ್ ಖಾನ್, ಮುಕೇಶ್ ಕುಮಾರ್.
ಪಂದ್ಯದ ವೇಳಾಪಟ್ಟಿ
ಮೊದಲ ಟಿ 20 ನವೆಂಬರ್ 23ರಂದು ವಿಶಾಖಪಟ್ಟಣಂ (Vizag)ನಲ್ಲಿ ನಡೆಯಲಿದೆ. 2ನೇ ಪಂದ್ಯ ನ 26 ರಂದು ತಿರುವನಂತಪುರ, 3ನೇ ಪಂದ್ಯ ನ. 28 ರಂದು ಗುವಾಹಟಿ, 4ನೇ ಪಂದ್ಯ ಡಿಸೆಂಬರ್ 1 ರಂದು ನಾಗ್ಪುರ ಮತ್ತು ಸರಣಿಯ ಕೊನೆಯ 5ನೇ ಟಿ 20 ಪಂದ್ಯ ಡಿ.3 ರಂದು ಹೈದರಾಬಾದ್ ನಲ್ಲಿ ನಡೆಯಲಿದೆ.
ಪ್ರಸಾರ
ಸರಣಿಯನ್ನು ಸ್ಪೋರ್ಟ್ಸ್ 18 ಮತ್ತುಕಲರ್ಸ್ ಸಿನಿಪ್ಲೆಕ್ಸ್ ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ, ಆದರೆ ಪಂದ್ಯದ ಲೈವ್ ಸ್ಟ್ರೀಮ್ ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಪಂದ್ಯದ ದಿನದಂದು 7 ಗಂಟೆಯಿಂದ ಲಭ್ಯವಿರುತ್ತದೆ.
Ad
INDWvsENGW: ಇಂದಿನಿಂದ ಭಾರತ-ಇಂಗ್ಲೆಂಡ್ ವನಿತಾ ತಂಡಗಳ ಏಕದಿನ ಸರಣಿ
Maharaja Trophy auction: ದೇವದತ್ತ ಪಡಿಕ್ಕಲ್ ದುಬಾರಿ ಆಟಗಾರ
Harassment Case: ಯಶ್ ದಯಾಳ್ ಬಂಧನಕ್ಕೆ ಹೈಕೋರ್ಟ್ ತಡೆ
Los Angeles Olympics 2028: ಜು.12ರಿಂದ ಟಿ20 ಕ್ರಿಕೆಟ್ ಪಂದ್ಯಗಳು
INDvsENG: ಭಾರತ ವಿರುದ್ದದ ಟೆಸ್ಟ್ ಸರಣಿಯಿಂದ ಹೊರಬಿದ್ದ ಸ್ಪಿನ್ನರ್ ಶೋಯೆಬ್ ಬಶೀರ್
Hemant Malviya: ಮೋದಿ, ಆರ್‌ಎಸ್‌ಎಸ್ ಟೀಕೆ: ವ್ಯಂಗ್ಯಚಿತ್ರಕಾರನಿಗೆ ಮಧ್ಯಂತರ ಜಾಮೀನು
ದೇವನಹಳ್ಳಿ ಭೂಸ್ವಾಧೀನ ರದ್ದು ಬೆನ್ನಲ್ಲೇ ಉದ್ಯಮಿಗಳಿಗೆ ಆಂಧ್ರ ಪ್ರದೇಶ ಗಾಳ
ಕಂ ಬ್ಯಾಕ್ ಟೈಗರ್! ವಿವಿಧ ರಾಜ್ಯಗಳಲ್ಲಿನ ಕರಾವಳಿಯ ಐಟಿ ವೃತ್ತಿಪರರಿಗೆ ಆಹ್ವಾನ
Daily Horoscope ;ತಾವಾಗಿ ಒಲಿದು ಬಂದ ಅವಕಾಶಗಳ ಸದುಪ ಯೋಗ
ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ ವಿವಾದ ತಾತ್ಕಾಲಿಕ ಅಂತ್ಯ
You seem to have an Ad Blocker on.
To continue reading, please turn it off or whitelist Udayavani.