
ಸರಣಿ ನಿರ್ಣಾಯಕ ಪಂದ್ಯ: ಆಸೀಸ್ 269ಕ್ಕೆ ಆಲೌಟ್ ಮಾಡಿದ ಟೀಮ್ ಇಂಡಿಯಾ
Team Udayavani, Mar 22, 2023, 5:56 PM IST

ಚೆನ್ನೈ : ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾವನ್ನು ಭಾರತ ತಂಡ 49 ಓವರ್ ಗಳಲ್ಲಿ 269 ರನ್ ಗಳಿಗೆ ಆಲೌಟ್ ಮಾಡಿದೆ.
ಆಸೀಸ್ ಆರಂಭಿಕರಾದ ಟ್ರಾವಿಸ್ ಹೆಡ್ 33 ಮತ್ತು ಮಿಚೆಲ್ ಮಾರ್ಷ್ 47 ಗಳಿಸಿ ಔಟಾದರು. ನಾಯಕ ಸ್ಮಿತ್ ಶೂನ್ಯಕ್ಕೆ ಔಟಾದರು. ಡೇವಿಡ್ ವಾರ್ನರ್ 23 ಮಾರ್ನಸ್ ಲ್ಯಾಬುಸ್ಚಾಗ್ನೆ 28 ರನ್ ಕೊಡುಗೆ ಸಲ್ಲಿಸಿದರು. ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ 38 ರನ್, ಮಾರ್ಕಸ್ ಸ್ಟೊಯಿನಿಸ್ 25, ಸೀನ್ ಅಬಾಟ್ 26 ರನ್, ಆಷ್ಟನ್ ಅಗರ್ 17, ಮಿಚೆಲ್ ಸ್ಟಾರ್ಕ್ 10, ಆಡಮ್ ಝಂಪಾ ಅಜೇಯ 10 ರನ್ ಗಳಿಸಿದರು. ಎಲ್ಲಾ ಆಟಗಾರವು ತಮ್ಮದೇ ಆದ ರನ್ ಗಳ ಕೊಡುಗೆಯ ಮೂಲಕ ಗೌರವಯುತ ಮೊತ್ತ ಕಲೆ ಹಾಕಲು ಕಾರಣವಾದರು.
ಭಾರತದ ಪರ ಬೌಲಿಂಗ್ ನಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ 8 ಓವರ್ ಗಳಲ್ಲಿ 44 ರನ್ ನೀಡಿ 3 ವಿಕೆಟ್ ಪಡೆದರು. ಕುಲದೀಪ್ ಯಾದವ್ 1 ಮೇಡನ್ ಓವರ್ ಎಸೆದು 3 ವಿಕೆಟ್ ಕಿತ್ತರು. ಮೊಹಮ್ಮದ್ ಸಿರಾಜ್ 7 ಓವರ್ ಎಸೆದು 1 ಮೇಡನ್ ಓವರ್ ನಲ್ಲಿ 37 ರನ್ ನೀಡಿ 2 ವಿಕೆಟ್ ಪಡೆದರು. ಅಕ್ಷರ್ ಪಟೇಲ್ ದುಬಾರಿ ಓವರ್ ಎಸೆದರು, 2 ವಿಕೆಟ್ ಪಡೆದರು.
ಟಾಪ್ ನ್ಯೂಸ್
