
ODI: ಭಾರತದ ಎದುರು ವೈಟ್‌ವಾಶ್ ತಪ್ಪಿಸಿಕೊಂಡ ಆಸೀಸ್ ; 66 ರನ್ ಗಳ ಜಯ
ಕ್ರಿಸ್ ಗೇಲ್ ದಾಖಲೆ ಮುರಿಯಲು ಸಾರಥಿ ರೋಹಿತ್ ಶರ್ಮ ರಿಗೆ ವಿಶ್ವಕಪ್ ನಲ್ಲಿದೆ ಅವಕಾಶ
Team Udayavani, Sep 27, 2023, 9:44 PM IST

ರಾಜ್‌ಕೋಟ್: ಏಕದಿನ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ವಿರುದ್ಧ ಸರಣಿಯೊಂದನ್ನು ವೈಟ್‌ವಾಶ್ ಆಗಿ ಕಳೆದುಕೊಳ್ಳುವುದರಿಂದ ಆಸ್ಟ್ರೇಲಿಯ ಪಾರಾಗಿದ್ದು, ಅಂತಿಮ ಮೂರನೇ ಪಂದ್ಯದಲ್ಲಿ 66 ರನ್ ಗಳ ಜಯ ಸಾಧಿಸಿ ಸಮಾಧಾನ ಪಟ್ಟುಕೊಂಡಿದೆ. ಮೊದಲೆರಡು ಪಂದ್ಯಗಳನ್ನು ಗೆದ್ದ ಭಾರತ ಸರಣಿ ಗೆಲುವಿನ ಸಂಭ್ರಮದಲ್ಲಿ ವಿಶ್ವಕಪ್ ಆಡಲು ಸಜ್ಜಾಗಿದೆ.
ಮೂರನೇ ಪಂದ್ಯವನ್ನೂ ಗೆದ್ದು ವಿಶ್ವಕಪ್‌ಗೂ ಮುನ್ನ ಇತಿಹಾಸವೊಂದನ್ನು ನಿರ್ಮಿಸುವುದು ಟೀಮ್ ಇಂಡಿಯಾದ ಯೋಜನೆಯಾಗಿತ್ತು, ಆದರೆ ಆಸೀಸ್ ಭಾರಿ ಮೊತ್ತ ಕಲೆ ಹಾಕಿ ಬೌಲಿಂಗ್ ಕೂಡ ಬಿಗಿಯಾಗಿಸಿ ಗೆಲುವು ತನ್ನದಾಗಿಸಿಕೊಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 352 ರನ್ ಕಲೆಹಾಕಿತು. ಅಮೋಘ ಆಟವಾಡಿದ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ 96 ರನ್ ಗಳಿಸಿದ್ದ ವೇಳೆ ಔಟಾಗಿ ಶತಕ ವಂಚಿತರಾದರು. ಅವರಿಗೆ ಸಾಥ್ ನೀಡಿ ಭರ್ಜರಿ ಆರಂಭ ಒದಗಿಸಿಕೊಟ್ಟ ವಾರ್ನರ್ 56 ರನ್ (34 ಎಸೆತ ) ಗಳಿಸಿ ಔಟಾದರು. ಸ್ಟೀವನ್ ಸ್ಮಿತ್ 74, ಲಬು ಶೇನ್ 72 ರನ್ ಗಳಿಸಿ ಉತ್ತಮ ಮೊತ್ತ ಗಳಿಸಲು ನೆರವಾದರು. ನಾಯಕ ಕಮ್ಮಿನ್ಸ್ ಔಟಾಗದೆ 19 ರನ್ ಗಳಿಸಿದರು.
ಭಾರತದ ವೇಗಿಗಳಾದ ಬುಮ್ರಾ 3 ವಿಕೆಟ್ ಪಡೆದರೆ, ಸಿರಾಜ್ ಮತ್ತು ಪ್ರಸಿದ್ ತಲಾ ಒಂದು ವಿಕೆಟ್ ಪಡೆದರು. ಕುಲ್ ದೀಪ್ ಯಾದವ್ 2 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಭಾರತ ರೋಹಿತ್ ಶರ್ಮ ಅವರ ಅಮೋಘ ಆಟದ ನೆರವಿನಿಂದ ಭರ್ಜರಿ ಆರಂಭ ಪಡೆಯಿತು. ಆದರೆ 49.4 ಓವರ್ ಗಳಲ್ಲಿ 286 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು.
ಶರ್ಮ 57 ಎಸೆತಗಳಲ್ಲಿ 81 ರನ್ ಗಳಿಸಿದ್ದ ವೇಳೆ ಮ್ಯಾಕ್ಸ್‌ವೆಲ್ ಅವರು ಎಸೆದ ಚೆಂಡನ್ನು ಅವರ ಕೆಗೆ ಕೊಟ್ಟು ನಿರ್ಗಮಿಸಿದರು. 5 ಬೌಂಡರಿ ಮತ್ತು ಆರು ಅತ್ಯಾಕರ್ಷಕ 6 ಸಿಕ್ಸರ್ ಗಳನ್ನು ಕಪ್ತಾನ ಸಿಡಿಸಿದ್ದರು. ಆರಂಭಿಕನಾಗಿ ಬಂದ ವಾಷಿಂಗ್ಟನ್ ಸುಂದರ್ 18, ಕೊಹ್ಲಿ 56, ಶ್ರೇಯಸ್ ಅಯ್ಯರ್ 48, ರಾಹುಲ್ 26, ರವೀಂದ್ರ ಜಡೇಜಾ 35 ರನ್ ಗಳಿಸಿ ಔಟಾದರು. ಮ್ಯಾಕ್ಸ್‌ವೆಲ್4 ವಿಕೆಟ್ ಕಬಳಿಸಿ ಆಸೀಸ್ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದರು.
ಗೇಲ್ ದಾಖಲೆ ಮುರಿಯಲು ವಿಶ್ವಕಪ್ ನಲ್ಲಿ ಅವಕಾಶ
ರೋಹಿತ್ ಶರ್ಮ ಅವರಿಗೆ ವೆಸ್ಟ್ ಇಂಡೀಸ್ ದೈತ್ಯ ಪ್ರತಿಭೆ ಕ್ರಿಸ್ ಗೇಲ್ ಅವರ ಹೆಸರಿನಲ್ಲಿರುವ ದಾಖಲೆ ಮುರಿಯುವ ದೊಡ್ಡ ಅವಕಾಶವಿದೆ. ಇಂದು ಆ ದಾಖಲೆ ಮುರಿಯುವ ನಿರೀಕ್ಷೆ ಈಡೇರಲಿಲ್ಲ. ‘ಯೂನಿವರ್ಸ್ ಬಾಸ್’ ಕ್ರಿಸ್ ಗೇಲ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬೆರಗುಗೊಳಿಸುವ 553 ಸಿಕ್ಸರ್‌ಗಳೊಂದಿಗೆ ದಾಖಲೆ ಹೊಂದಿದ್ದಾರೆ.
ರೋಹಿತ್ ಶರ್ಮ 551 ಸಿಕ್ಸರ್‌ಗಳೊಂದಿಗೆ ಅವರ ಸಮೀಪಕ್ಕೆ ಬಂದು ದಾಖಲೆ ಯನ್ನು ತನ್ನ ಹೆಸರಿಗೆ ಬರೆದುಕೊಳ್ಳುವ ಉತ್ಸಾಹದಲ್ಲಿದ್ದು , ಆರಂಭಿಕ ಆಟಗಾರ ಶರ್ಮ ಅವರಿಗೆ ವಿಶ್ವ ಕಪ್ ವೇದಿಕೆಯಲ್ಲಿ ದೊಡ್ಡ ಅವಕಾಶವಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Farewell Sereis; ಪಾಕ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದ ಡೇವಿಡ್ ವಾರ್ನರ್

Pak;ಸಲಹೆಗಾರರಾಗಿ ನೇಮಕಗೊಂಡ 24 ಗಂಟೆಗಳಲ್ಲೇ ಸಲ್ಮಾನ್ ಬಟ್ ರನ್ನು ತೆಗೆದುಹಾಕಿದ ಪಿಸಿಬಿ!

Rinku Singh ಎಲ್ಲರ ಕಣ್ಣು ತೆರೆಸಿದ್ದಾರೆ ಮತ್ತು…: ಆಶಿಶ್ ನೆಹ್ರಾ

World Cup ಫೈನಲ್ ಸೋಲಿನ ಕಾರಣ ಕೇಳಿದ ಬಿಸಿಸಿಐ; ಕೋಚ್ ದ್ರಾವಿಡ್ ಹೇಳಿದ್ದೇನು?

Bengaluru 5ನೇ ಟಿ20 : ಅಂತಿಮ ಪಂದ್ಯ ಅಭ್ಯಾಸಕ್ಕೆ ಮೀಸಲು
MUST WATCH
ಹೊಸ ಸೇರ್ಪಡೆ

ವಿಕಲಚೇತನರಿಗೆ ಸರ್ಕಾರದ ಸೌಲಭ್ಯ ಒದಗಿಸುವ ಪ್ರಮಾಣಿಕ ಪ್ರಯತ್ನ: ಸಚಿವ ಪ್ರಿಯಾಂಕ್ ಖರ್ಗೆ

Illegal liquor; ಅಕ್ರಮ ಮದ್ಯ; ಮೌನಕ್ಕೆ ಜಾರಿದ ಅಬಕಾರಿ ಇಲಾಖೆ

Election; ಸನಾತನ ಧರ್ಮಕ್ಕೆ ನಿಂದಿಸಿದರೆ..: ಕಾಂಗ್ರೆಸ್ ವಿರುದ್ಧ ವೆಂಕಟೇಶ್ ಪ್ರಸಾದ್ ಟೀಕೆ

Dialysis machine: ಚಾ.ನಗರ ಜಿಲ್ಲೆಗೆ ಬೇಕು ಮತ್ತಷ್ಟು ಡಯಾಲಿಸಿಸ್ ಯಂತ್ರಗಳು

Milk Union: ಹಾಲು ಉತ್ಪಾದಕರಿಗೆ ದರ ಕಡಿತದ ಬರೆ!