Super 8; ಬಾಂಗ್ಲಾ ವಿರುದ್ಧ ಭಾರತ ಅಮೋಘ ಜಯ: ಸೆಮಿ ಹಾದಿ ಸುಲಭ


Team Udayavani, Jun 22, 2024, 11:24 PM IST

1-ewwewe

ನಾರ್ತ್‌ ಸೌಂಡ್‌ (ಆ್ಯಂಟಿಗುವಾ): ಬಾಂಗ್ಲಾದೇಶ ವಿರುದ್ಧ ಸೊಗಸಾದ ಬ್ಯಾಟಿಂಗ್‌ ಮತ್ತು ಬೌಲಿಂಗ್ ಪ್ರದರ್ಶಿಸಿದ ಭಾರತ ಶನಿವಾರದ ಸೂಪರ್‌-8 ಪಂದ್ಯದಲ್ಲಿ 50 ರನ್ ಗಳ ಅಮೋಘ ಜಯ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ ಪಟ್ಟ ಭಾರತ 5 ವಿಕೆಟಿಗೆ 196 ರನ್‌ ಪೇರಿಸಿತು. ಹಾರ್ದಿಕ್‌ ಪಾಂಡ್ಯ ಅಜೇಯ ಅರ್ಧ ಶತಕದ ಮೂಲಕ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು. ದೊಡ್ಡ ಗುರಿ ಬೆನ್ನಟ್ಟಿದ ಬಾಂಗ್ಲಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಲಷ್ಟೇ ಶಕ್ತವಾಯಿತು.

ಭಾರತದ ಸೆಮಿ ಫೈನಲ್ ಹಾದಿ ಈಗ ಸುಲಭವಾಗಿದ್ದು ಸೂಪರ್‌-8 ನ ಕೊನೆಯ ಮತ್ತೊಂದು ಪಂದ್ಯದಲ್ಲಿ ಜೂನ್ 24 ರಂದು ಭಾರತ ತಂಡ ಆಸ್ಟ್ರೇಲಿಯವನ್ನು ಎದುರಿಸಲಿದೆ.

ಭಾರತದ ಓಪನಿಂಗ್‌ ಈ ಕೂಟದಲ್ಲಿ ಮೊದಲ ಸಲ ಕ್ಲಿಕ್‌ ಆಯಿತು. ಬಿರುಸಿನ ಆಟಕ್ಕೆ ಮುಂದಾದ ರೋಹಿತ್‌ ಶರ್ಮ- ವಿರಾಟ್‌ ಕೊಹ್ಲಿ 3.4 ಓವರ್‌ಗಳಿಂದ 39 ರನ್‌ ಪೇರಿಸಿದರು. ಇದು ಈ ವಿಶ್ವಕಪ್‌ನಲ್ಲಿ ಭಾರತದ ಆರಂಭಿಕ ವಿಕೆಟಿಗೆ ಒಟ್ಟುಗೂಡಿದ ಅತ್ಯಧಿಕ ಮೊತ್ತ. ಪವರ್‌ ಪ್ಲೇಯಲ್ಲಿ ಸ್ಕೋರ್‌ ಒಂದಕ್ಕೆ 53 ರನ್‌ ಆಗಿತ್ತು. 11 ಎಸೆತಗಳಿಂದ 23 ರನ್‌ ಹೊಡೆದ ರೋಹಿತ್‌ ಅವರಿಗೆ ಶಕಿಬ್‌ ಪೆವಿಲಿಯನ್‌ ಹಾದಿ ತೋರಿಸಿದರು. ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ 50ನೇ ವಿಕೆಟ್‌ ಉರುಳಿಸಿದ ಮೊದಲ ಬೌಲರ್‌ ಎಂಬ ದಾಖಲೆ ಶಕಿಬ್‌ ಅವರದಾಯಿತು. ಈವರೆಗಿನ ಎಲ್ಲ ವಿಶ್ವಕಪ್‌ಗ್ಳಲ್ಲಿ ಪಾಲ್ಗೊಂಡ ಆಟ ಗಾರರು ಇವರಿಬ್ಬರು ಮಾತ್ರ ಎಂಬುದು ಇಲ್ಲಿನ ಸ್ವಾರಸ್ಯ!

ಕೊಹ್ಲಿ 3 ಸಾವಿರ ರನ್‌
37 ರನ್‌ ಮಾಡಿದ ವಿರಾಟ್‌ ಕೊಹ್ಲಿ ವಿಶ್ವಕಪ್‌ಗ್ಳಲ್ಲಿ (ಟಿ20 ಪ್ಲಸ್‌ ಏಕದಿನ) 3 ಸಾವಿರ ರನ್‌ ಪೂರೈ ಸಿದ ಪ್ರಥಮ ಕ್ರಿಕೆಟಿಗನೆನಿಸಿದರು. ಇವರನ್ನು ತಾಂಜಿಮ್‌ ಹಸನ್‌ ಬೌಲ್ಡ್‌ ಮಾಡಿದರು.

ಸೂರ್ಯಕುಮಾರ್‌ ಬಂದವರೇ ಒಂದು ಸಿಕ್ಸ್‌ ಎತ್ತಿದರು. ಮುಂದಿನ ಎಸೆತದಲ್ಲೇ ಔಟಾದರು. 10 ಓವರ್‌ ಅಂತ್ಯಕ್ಕೆ ಭಾರತ 3 ವಿಕೆಟಿಗೆ 83 ರನ್‌ ಮಾಡಿತ್ತು.ರಿಷಭ್‌ ಪಂತ್‌ ಆಕ್ರಮಣ ಕಾರಿ ಬೀಸುಗೆಯಲ್ಲಿ 36 ರನ್‌ ಬಾರಿಸಿದರು (4 ಫೋರ್‌, 2 ಸಿಕ್ಸರ್‌). ಸಾಕಷ್ಟು ಟೀಕೆಗೊಳಗಾಗಿದ್ದ ಶಿವಂ ದುಬೆ 24 ಎಸೆತಗಳಿಂದ 36 ರನ್‌ ಕೊಡುಗೆ ಸಲ್ಲಿಸಿದರು. ಇದರಲ್ಲಿ 3 ಸಿಕ್ಸರ್‌ ಸೇರಿತ್ತು.

ಹಾರ್ದಿಕ್‌ ಪಾಂಡ್ಯ ಫಿಫ್ಟಿ
ಹಾರ್ದಿಕ್‌ ಪಾಂಡ್ಯ ಡೆತ್‌ ಓವರ್‌ಗಳಲ್ಲಿ ಸಿಡಿದು ನಿಂತು ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ನೆರವಾದರು. ಕೊನೆಯ ಎಸೆತವನ್ನು ಬೌಂಡರಿಗೆ ಬಡಿದಟ್ಟಿ ಅರ್ಧ ಶತಕ ಪೂರ್ತಿಗೊಳಿಸಿದರು. 27 ಎಸೆತ ಗಳಲ್ಲಿ ದಾಖಲಾಯಿತು. ಸಿಡಿಸಿದ್ದು 4 ಬೌಂಡರಿ ಹಾಗೂ 3 ಸಿಕ್ಸರ್‌.

ಬದಲಾಗದ ತಂಡ
ಭಾರತ ತನ್ನ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿ ಕೊಳ್ಳಲಿಲ್ಲ. ಹೀಗಾಗಿ ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌ ಕಾಯು ವವರ ಯಾದಿಯಲ್ಲಿಯೇ ಉಳಿ ದರು. ಬಾಂಗ್ಲಾದೇಶ ತಂಡದಿಂದ ತಸ್ಕಿನ್‌ ಅಹ್ಮದ್‌ ಹೊರಗುಳಿದರು.

ಸಂಕ್ಷಿಪ್ತ ಸ್ಕೋರ್‌
ಭಾರತ-5 ವಿಕೆಟಿಗೆ 196 (ರೋಹಿತ್‌ 23, ಕೊಹ್ಲಿ 37, ಪಂತ್‌ 36, ಸೂರ್ಯ 6, ದುಬೆ 34, ಪಾಂಡ್ಯ ಔಟಾಗದೆ 50, ತಾಂಜಿಮ್‌ 32ಕ್ಕೆ 2, ರಿಶಾದ್‌ 43ಕ್ಕೆ 2). ಬಾಂಗ್ಲಾದೇಶ 8 ವಿಕೆಟಿಗೆ 146 (ತಂಜಿದ್ ಹಸನ್ 29, ನಜ್ಮುಲ್ ಹೊಸೈನ್ ಶಾಂಟೊ 40,ರಿಶಾದ್ ಹೊಸೈನ್ 24, ಕುಲದೀಪ್ ಯಾದವ್ 19ಕ್ಕೆ 3,ಬುಮ್ರಾ 13ಕ್ಕೆ 2, ಅರ್ಶದೀಪ್ ಸಿಂಗ್ 30ಕ್ಕೆ 2)

ವಿಂಡೀಸ್‌ಗೆ ಸೆಮಿಫೈನಲ್‌ ಹೋಪ್‌
ಅಮೆರಿಕ ವಿರುದ್ಧ 9 ವಿಕೆಟ್‌ ಜಯ…  ಪೈಪೋಟಿ ತೀವ್ರ

ಬ್ರಿಜ್‌ಟೌನ್‌ (ಬಾರ್ಬಡಾಸ್‌): ಸಹ ಆತಿಥೇಯ ರಾಷ್ಟ್ರವಾದ ಅಮೆರಿಕವನ್ನು 9 ವಿಕೆಟ್‌ಗಳಿಂದ ಬಗ್ಗುಬಡಿದ ವೆಸ್ಟ್‌ ಇಂಡೀಸ್‌ ಸೂಪರ್‌-8 ವಿಭಾಗದಲ್ಲಿ ಗೆಲುವಿನ ಖಾತೆ ತೆರೆದಿದೆ. ಇದರೊಂದಿಗೆ ಎರಡನೇ ಗ್ರೂಪ್‌ನಲ್ಲಿ ಪೈಪೋಟಿ ತೀವ್ರಗೊಂಡಿದೆ.

ಬ್ರಿಜ್‌ಟೌನ್‌ನಲ್ಲಿ ನಡೆದ ಮುಖಾಮುಖೀಯಲ್ಲಿ ಅಮೆರಿಕವನ್ನು 19.5 ಓವರ್‌ಗಳಲ್ಲಿ ಹಿಡಿದು ನಿಲ್ಲಿಸಿದ ವೆಸ್ಟ್‌ ಇಂಡೀಸ್‌, 10.5 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 130 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಎರಡೂ ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿದೆ.

ವೆಸ್ಟ್‌ ಇಂಡೀಸನ್ನು ಮಣಿಸಿರುವ ಇಂಗ್ಲೆಂಡ್‌ ಕೂಡ 2 ಅಂಕ ಹೊಂದಿದ್ದು, ರನ್‌ರೇಟ್‌ನಲ್ಲಿ ಹಿಂದಿರುವ ಕಾರಣ 3ನೇ ಸ್ಥಾನದಲ್ಲಿದೆ. ಇಂಗ್ಲೆಂಡ್‌ನ‌ ಮುಂದಿನ ಎದುರಾಳಿ ಅಮೆರಿಕವಾದ ಕಾರಣ ಹಾಲಿ ಚಾಂಪಿಯನ್ನರ ಮೇಲೆ ಗೆಲುವಿನ ನಿರೀಕ್ಷೆ ಇರಿಸಿಕೊಳ್ಳಬಹುದು. ಆದರೆ ಕೊನೆಯ ಮುಖಾಮುಖೀ ದಕ್ಷಿಣ ಆಫ್ರಿಕಾ-ವೆಸ್ಟ್‌ ಇಂಡೀಸ್‌ ನಡುವೆ ಸಾಗಲಿದ್ದು, ಇಲ್ಲಿನ ಫ‌ಲಿತಾಂಶ ನಿರ್ಣಾಯಕವಾಗಲಿದೆ. ಹರಿಣಗಳ ಪಡೆ ಅಜೇಯ ಓಟ ಬೆಳೆಸಿದರೆ ವಿಂಡೀಸ್‌ ಹೊರಬೀಳಲಿದೆ! ಹೀಗಾಗಿ ಎರಡನೇ ಗ್ರೂಪ್‌ನಲ್ಲಿ ಪೈಪೋಟಿ ತೀವ್ರಗೊಂಡಿದೆ.

ರಸೆಲ್‌, ಚೇಸ್‌ ದಾಳಿ
ಅಮೆರಿಕಕ್ಕೆ ಆ್ಯಂಡ್ರೆ ರಸೆಲ್‌ ಮತ್ತು ರೋಸ್ಟನ್‌ ಚೇಸ್‌ ಸೇರಿಕೊಂಡು ಕಡಿವಾಣ ಹಾಕಿದರು. ಇಬ್ಬರೂ 3 ವಿಕೆಟ್‌ ಉರುಳಿಸಿದರು. ದ್ವಿತೀಯ ವಿಕೆಟಿಗೆ ಆ್ಯಂಡ್ರೀಸ್‌ ಗೌಸ್‌ (29) ಮತ್ತು ನಿತೀಶ್‌ ಕುಮಾರ್‌ (20) 5.1 ಓವರ್‌ಗಳಲ್ಲಿ 48 ರನ್‌ ಒಟ್ಟುಗೂಡಿಸಿದಾಗ ಅಮೆರಿಕ ದೊಡ್ಡ ಮೊತ್ತದ ಸೂಚನೆ ನೀಡಿತ್ತು. ಈ ಜೋಡಿಯನ್ನು ಗುಡಕೇಶ್‌ ಮೋಟಿ ಬೇರ್ಪಡಿಸಿದ ಬಳಿಕ ಯುಎಸ್‌ಎ ಕುಸಿತ ಮೊದಲ್ಗೊಂಡಿತು.

ಚೇಸಿಂಗ್‌ ವೇಳೆ ರನ್‌ರೇಟ್‌ ಹೆಚ್ಚಿಸುವ ಗುರಿ ಇರಿಸಿಕೊಂಡಿದ್ದ ವಿಂಡೀಸಿಗೆ ಶೈ ಹೋಪ್‌ ಆಪತಾºಂಧವರಾಗಿ ಪರಿಣಮಿಸಿದರು. ಇವರದು ಅಜೇಯ 82 ರನ್‌ ಕೊಡುಗೆ. ಎದುರಿಸಿದ್ದು 39 ಎಸೆತ, ಸಿಡಿಸಿದ್ದು 4 ಫೋರ್‌ ಹಾಗೂ 8 ಸಿಕ್ಸರ್‌. ಜಾನ್ಸನ್‌ ಚಾರ್ಲ್ಸ್‌ 15 ಮತ್ತು ನಿಕೋಲಸ್‌ ಪೂರಣ್‌ ಅಜೇಯ 27 ರನ್‌ ಹೊಡೆದರು.

ಸಿಕ್ಸರ್‌ ದಾಖಲೆ ಪತನ
ಪೂರಣ್‌ ಈ ವಿಶ್ವಕಪ್‌ನಲ್ಲಿ ಅತ್ಯಧಿಕ 17 ಸಿಕ್ಸರ್‌ ಸಿಡಿಸಿ ಕ್ರಿಸ್‌ ಗೇಲ್‌ ದಾಖಲೆಯನ್ನು ಮುರಿದರು. ಗೇಲ್‌ 2012ರ ಆವೃತ್ತಿಯಲ್ಲಿ 16 ಸಿಕ್ಸರ್‌ ಬಾರಿಸಿದ್ದರು. ಈ ವಿಶ್ವಕಪ್‌ನಲ್ಲಿ ಸರ್ವಾಧಿಕ 412 ಸಿಕ್ಸರ್‌ ಸಿಡಿಯಲ್ಪಟ್ಟಿತು. 2021ರಲ್ಲಿ 405 ಸಿಕ್ಸರ್‌ ಬಾರಿಸಲ್ಪಟ್ಟದ್ದು ಈವರೆಗಿನ ದಾಖಲೆ ಆಗಿತ್ತು.

ಸಂಕ್ಷಿಪ್ತ ಸ್ಕೋರ್‌: ಅಮೆರಿಕ-19.5 ಓವರ್‌ಗಳಲ್ಲಿ 128 (ಗೌಸ್‌ 29, ನಿತೀಶ್‌ 20, ಮಿಲಿಂದ್‌ 19, ಚೇಸ್‌ 19ಕ್ಕೆ 3, ರಸೆಲ್‌ 31ಕ್ಕೆ 3). ವೆಸ್ಟ್‌ ಇಂಡೀಸ್‌-10.5 ಓವರ್‌ಗಳಲ್ಲಿ ಒಂದು ವಿಕೆಟಿಗೆ 130 (ಹೋಪ್‌ ಔಟಾಗದೆ 82, ಪೂರಣ್‌ ಔಟಾಗದೆ 27, ಚಾರ್ಲ್ಸ್‌ 15, ಹರ್ಮೀತ್‌ 18ಕ್ಕೆ 1).
ಪಂದ್ಯಶ್ರೇಷ್ಠ: ರೋಸ್ಟನ್‌ ಚೇಸ್‌.

Ad

ಟಾಪ್ ನ್ಯೂಸ್

ಕಿರುತೆರೆಗೆ ಮರಳಿದ ಸ್ಮೃತಿ ಇರಾನಿ: ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಕಿರುತೆರೆಗೆ ಮರಳಿದ ಸ್ಮೃತಿ ಇರಾನಿ: ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಖಾಸಗಿ ವಿಡಿಯೋ ಹೆಸರಲ್ಲಿ ಬ್ಲಾಕ್‌ಮೇಲ್… 3 ಕೋಟಿ ಕಳೆದುಕೊಂಡು CA ಪತ್ರ ಬರೆದು ಆತ್ಮಹತ್ಯೆ

ಖಾಸಗಿ ವಿಡಿಯೋ ಹೆಸರಲ್ಲಿ ಬ್ಲಾಕ್‌ಮೇಲ್: ಕಾರು, 3ಕೋಟಿ ಹಣ ಕಳೆದುಕೊಂಡು ಆತ್ಮಹತ್ಯೆ ಶರಣಾದ CA

Video: ಬೈಕ್ – ಸ್ಕೂಟರ್‌ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು; ಸುಟ್ಟು ಕರಕಲಾದ ಹಯಬುಸಾ

Video: ಬೈಕ್ – ಸ್ಕೂಟರ್‌ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು; ಸುಟ್ಟು ಕರಕಲಾದ ಹಯಬುಸಾ

1-gurme

Udupi: ಶಾಸಕರೊಬ್ಬರ ಹೇಳಿಕೆ ರಾಜ್ಯ ಕಾಂಗ್ರೆಸ್ ಸರಕಾರದ ಇಂದಿನ ನೈಜ ಸ್ಥಿತಿ ಅನಾವರಣ: ಗುರ್ಮೆ

Himachal Pradesh: ಭೂಕುಸಿತಕ್ಕೂ ಮುನ್ನ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ.!

Himachal Pradesh: ಭೂಕುಸಿತಕ್ಕೂ ಮುನ್ನ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ.!

ಜು.13 ರಂದು ಜಮ್ಮುವಿನಲ್ಲಿ ವಿಶ್ವ ಮಟ್ಟದ ಹಿಂದೂ ಸಮಾವೇಶ: ಮುತಾಲಿಕ್

ಜು.13 ರಂದು ಜಮ್ಮುವಿನಲ್ಲಿ ನಡೆಯುವ ಹಿಂದೂ ಸಮಾವೇಶದಲ್ಲಿ ಶ್ರೀರಾಮ ಸೇನೆ ಭಾಗಿ: ಮುತಾಲಿಕ್

ಎಂಎಂ ಕೀರವಾಣಿ ತಂದೆ, ಖ್ಯಾತ ಗೀತ ರಚನೆಕಾರ ಶಿವಶಕ್ತಿ ದತ್ತ ನಿಧನ; ಟಾಲಿವುಡ್‌ ಸಂತಾಪ

ಎಂಎಂ ಕೀರವಾಣಿ ತಂದೆ, ಖ್ಯಾತ ಗೀತ ರಚನೆಕಾರ ಶಿವಶಕ್ತಿ ದತ್ತ ನಿಧನ; ಟಾಲಿವುಡ್‌ ಸಂತಾಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

Wimbledon 2025; ಕ್ವಾರ್ಟರ್‌ ಫೈನಲ್‌ಗೆ ಜೊಕೋ, ಅನಿಸಿಮೋವಾ

Wimbledon 2025; ಕ್ವಾರ್ಟರ್‌ ಫೈನಲ್‌ಗೆ ಜೊಕೋ, ಅನಿಸಿಮೋವಾ

ಸಂಜೋಗ್‌ ಗುಪ್ತಾ ಐಸಿಸಿ ನೂತನ ಸಿಇಒ ನೇಮಕಸಂಜೋಗ್‌ ಗುಪ್ತಾ ಐಸಿಸಿ ನೂತನ ಸಿಇಒ ನೇಮಕ

ಸಂಜೋಗ್‌ ಗುಪ್ತಾ ಐಸಿಸಿ ನೂತನ ಸಿಇಒ ನೇಮಕ

ಅಂಡರ್‌-19 ಏಕದಿನ: ಭಾರತಕ್ಕೆ 7 ವಿಕೆಟ್‌ ಸೋಲು

ಅಂಡರ್‌-19 ಏಕದಿನ: ಭಾರತಕ್ಕೆ 7 ವಿಕೆಟ್‌ ಸೋಲು

T20I Series; ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಗೆ ಶ್ರೀಲಂಕಾ ತಂಡ ಪ್ರಕಟ

T20I Series; ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಗೆ ಶ್ರೀಲಂಕಾ ತಂಡ ಪ್ರಕಟ

MUST WATCH

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

udayavani youtube

ಸಾವಯವ ಅಕ್ಕಿ ಹಾಗೂ ಸಾವಯವ ಧಾನ್ಯಗಳ ಬಗ್ಗೆ ಮಾಹಿತಿ

ಹೊಸ ಸೇರ್ಪಡೆ

18

Nalatawad ಇದ್ದೂ ಇಲ್ಲದಂತಾಗಿದೆ ದೋಬಿಘಾಟ್‌

17

Vijayapura: ಸ್ನಾತಕೋತ್ತರ ಕೇಂದ್ರಕ್ಕೆ ಬೇಕಿದೆ ಕಾಯಕಲ್ಪ

15

New Kannada Movie: ಹಾಡಿನಲ್ಲಿ ʼತಿಮ್ಮಣ್ಣ  ಡಾಕ್ಟ್ರುʼ

16

Naregal: ನಿರ್ವಹಣೆ ಇಲ್ಲದೇ ಪಾಳು ಬಿದ್ದ ಬಸ್‌ ಶೆಲ್ಟರ್‌

15

Gadag:‌ ನಾಯಿಗಳ ಕಡಿತ ಪ್ರಕರಣಗಳು ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.