
ಇಂದು ಕೊಹ್ಲಿ ಪಡೆಗೆ ಕೊನೆಯ ಅಭ್ಯಾಸ ಪಂದ್ಯ
Team Udayavani, Oct 20, 2021, 8:55 AM IST

ದುಬೈ: ಇಂಗ್ಲೆಂಡನ್ನು 7 ವಿಕೆಟ್‌ಗಳಿಂದ ಬಗ್ಗುಬಡಿದು ಟಿ20 ವಿಶ್ವಕಪ್‌ಗೆ ಪರಿಪೂರ್ಣ ಅಭ್ಯಾಸವೊಂದನ್ನು ನಡೆಸಿದ ಭಾರತ ಬುಧವಾರದ ಕೊನೆಯ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಎದುರಿಸಲಿದೆ. ಇನ್ನೊಂದೆಡೆ ಕಾಂಗರೂ ಪಡೆ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡನ್ನು ಮಣಿಸಿದ ಹುರುಪಿನಲ್ಲಿದೆ.
ಹೀಗಾಗಿ ಇದು ಗೆದ್ದವರ ಗುದ್ದಾಟ. ತನ್ನ ಮೊದಲ ಲೀಗ್ ಪಂದ್ಯದಲ್ಲೇ ಬದ್ಧ ಎದುರಾಳಿ ಪಾಕಿಸ್ತಾನವನ್ನು ಎದುರಿಸುವುದರಿಂದ ಭಾರತಕ್ಕೆ ಆಸೀಸ್ ಎದುರಿನ ಮುಖಾಮುಖೀ ಅತ್ಯಂತ ಮಹತ್ವ ದ್ದಾಗಿದೆ. ಮುಖ್ಯವಾಗಿ ಬ್ಯಾಟಿಂಗ್ ಸಂಯೋ ಜನೆಯೊಂದನ್ನು ಅಂತಿಮಗೊಳಿಸಬೇಕಿದೆ. ಇಂಗ್ಲೆಂಡ್ ಎದುರಿನ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮ ಅವರಿಗೆ ಜೋಡಿ ಯಾರು ಎಂಬ ಚರ್ಚೆ ನಡೆದಿತ್ತು.
ಆದರೆ ಅವರು ಬ್ಯಾಟಿಂಗಿಗೇ ಬರಲಿಲ್ಲ. ಕೆ.ಎಲ್.ರಾಹುಲ್ -ಇಶಾನ್ ಕಿಶನ್ ಸ್ಫೋಟಕ ಆರಂಭದ ಮೂಲಕ ಆಂಗ್ಲ ಪಡೆಯನ್ನು ಬೆಚ್ಚಿ ಬೀಳಿಸಿ ದರು. ನಾಯಕ ಕೊಹ್ಲಿ ಒನ್‌ಡೌನ್‌ನಲ್ಲಿ ಬಂದರು. ಸೂರ್ಯಕುಮಾರ್ ಯಾದವ್‌ಗೂ ಮೊದಲು ರಿಷಭ್ ಪಂತ್ ಆಗಮಿಸಿದರು.
ರೋಹಿತ್ ಆರಂಭ: ಆಸ್ಟ್ರೇಲಿಯದ ವಿರುದ್ಧ ಆರಂಭಿಕ ಜೋಡಿ ಬದಲಾಗುವುದು ಬಹುತೇಕ ನಿಶ್ಚಿತ. ಇಲ್ಲಿ ಖಾಯಂ ಆರಂಭಿಕ ರೋಹಿತ್ ಶರ್ಮ ಬರಬೇಕಿದೆ. ಆಗ ರಾಹುಲ್ ಅಥವಾ ಇಶಾನ್ ಕಿಶನ್, ಇಬ್ಬರ ಲ್ಲೊಬ್ಬರಿಗೆ ವಿಶ್ರಾಂತಿ ನೀಡಬೇಕಾಗುತ್ತದೆ. ಅಥವಾ ಒಬ್ಬರು ಕೆಳ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲೂಬಹುದು.
ರೋಹಿತ್, ರಾಹುಲ್, ಕೊಹ್ಲಿ, ಇಶಾನ್ ಕಿಶನ್, ಸೂರ್ಯಕುಮಾರ್, ಪಂತ್… ಈ ಬ್ಯಾಟಿಂಗ್ ಸರದಿಯನ್ನು ಟಿ20 ಪ್ರಧಾನ ಸಮರಕ್ಕೆ ಅಂತಿಮಗೊಳಿಸುವ ಯೋಜನೆ ಭಾರತದ್ದು. ಆಲ್‌ರೌಂಡರ್ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ಫಿಟ್ ಆಗಲಾರರು ಎಂಬುದು ಈಗಾಗಲೇ ಸಾಬೀತಾಗಿದೆ.
ಕಾರಣ, ಅವರೀಗ ಬೌಲಿಂಗ್ ನಡೆಸುವ ಸ್ಥಿತಿಯಲ್ಲಿಲ್ಲ. ಆದರೂ ಆಸ್ಟ್ರೇಲಿಯ ವಿರುದ್ಧ ತಜ್ಞ ಬ್ಯಾಟ್ Õಮನ್ ಆಗಿ ಅವರು ಆಡುವ ಸಾಧ್ಯತೆ ಇದೆ. ಈ ಸ್ಥಾನಕ್ಕೆ ಶಾದೂìಲ್ ಠಾಕೂರ್ ಕೂಡ μಟ್ ಆಗಬಲ್ಲರು. ರವೀಂದ್ರ ಜಡೇಜ ಹೊರತುಪಡಿಸಿದರೆ ಬೌಲಿಂಗ್, ಬ್ಯಾಟಿಂಗ್ ಎರಡರನ್ನೂ ನಿಭಾಯಿಸಬಲ್ಲ ಸಾಮರ್ಥ್ಯ ಠಾಕೂರ್ ಅವರಲ್ಲಿದೆ. ಆಸೀಸ್ ವಿರುದ್ಧ ಭುವನೇಶ್ವರ್ ಅವರನ್ನು ಕೈಬಿಟ್ಟು ಠಾಕೂರ್‌ಗೆ ಅವಕಾಶ ನೀಡುವುದು ಖಚಿತ.
ಇಂಗ್ಲೆಂಡ್ ಎದುರು ಅತ್ಯಂತ ದುಬಾರಿಯಾದ ಭುವನೇಶ್ವರ್ 4 ಓವರ್ ಗಳಿಂದ 54 ರನ್ ಬಿಟ್ಟುಕೊಟ್ಟದ್ದು ಭಾರತದ ಪಾಲಿಗೆ ಚಿಂತೆಯ ಸಂಗತಿಯಾಗಿದೆ. ಉಳಿದಂತೆ ಬುಮ್ರಾ, ಅಶ್ವಿನ್ ಉತ್ತಮ ನಿಯಂತ್ರಣ ಸಾಧಿಸಿದ್ದರು. ಶಮಿ ಮೊದಲ ಸ್ಪೆಲ್‌ನಲ್ಲಿ ಘಾತಕವಾಗಿ ಪರಿಣಮಿಸಿದ್ದರು. ಅಷ್ಟೇನೂ ಪರಿಣಾಮ ಬೀರದ ರಾಹುಲ್ ಚಹರ್ ಬದಲು ವರುಣ್ ಚಕ್ರವರ್ತಿ ದಾಳಿಗಿಳಿಯುವ ಸಾಧ್ಯತೆ ಇದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತವರಿನ ಲಾಭವಿಲ್ಲ, ಟಾಸ್ ಗೆದ್ದು ಫೀಲ್ಡಿಂಗ್ ಮಾಡಬೇಕಿಲ್ಲ…: ಇದು 2023ರ IPL ವಿಶೇಷತೆ

Asia Cup ಶ್ರೀಲಂಕಾದಲ್ಲಿ ಆಡಿ, ಇಲ್ಲವಾದರೆ ಬಿಟ್ಟುಹೋಗಿ: ಪಾಕಿಸ್ಥಾನಕ್ಕೆ BCCI ಚಾಟಿಯೇಟು

WTC Final: ಆಸೀಸ್ ತಂಡ ಈ ಇಬ್ಬರು ಆಟಗಾರರ ಬಗ್ಗೆ ತಲೆಕೆಡೆಸಿಕೊಂಡಿದೆ ಎಂದ ಪಾಂಟಿಂಗ್

IPL Final: ಮೋಹಿತ್ ಜತೆ ಮಾತನಾಡಿದ್ದು ಹಾರ್ದಿಕ್ ಮಾಡಿದ ತಪ್ಪು: ಸೆಹವಾಗ್ ಕಿಡಿ

ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್- ಟೀಮ್ ಇಂಡಿಯಾ ಕಠಿನ ಅಭ್ಯಾಸ
MUST WATCH
ಹೊಸ ಸೇರ್ಪಡೆ

Goa ಸ್ಮಾರ್ಟ್ ಸಿಟಿ ಯೋಜನೆಯ ತನಿಖೆ ನಡೆಸಬೇಕು: ಕಾಂಗ್ರೆಸ್ ಒತ್ತಾಯ

”ನನಗಿದು ಸ್ಪೆಷಲ್ ಸಿನಿಮಾ…”: ‘ಯದಾ ಯದಾ ಹೀ’ ಕುರಿತು ಹರಿಪ್ರಿಯಾ ಮಾತು

ದಾವಣಗೆರೆ: ಮಕ್ಕಳಿಬ್ಬರಿಗೆ ಟಿಕ್ಸೋಟೇಪ್ ಸುತ್ತಿ ಕೊಲೆಗೈದ ತಂದೆ!; ಬಂಧನ

ತವರಿನ ಲಾಭವಿಲ್ಲ, ಟಾಸ್ ಗೆದ್ದು ಫೀಲ್ಡಿಂಗ್ ಮಾಡಬೇಕಿಲ್ಲ…: ಇದು 2023ರ IPL ವಿಶೇಷತೆ

expose!;ಬಸ್ಸಿನಲ್ಲಿ ಮಹಿಳೆ ಎದುರು ಹಸ್ತಮೈಥುನ ಮಾಡಿದ ಕಾಮುಕನ ಬಂಧನ