

Team Udayavani, May 2, 2019, 10:52 AM IST
ಹೊಸದಿಲ್ಲಿ: ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಮುಗಿದ ಬೆನ್ನಲ್ಲೇ ಭಾರತೀಯ ಕ್ರಿಕೆಟಿಗರಿಗೆ ಮತ್ತೂಂದು ಸರಣಿ ಎದುರಾಗಿದೆ. ಟೀಮ್ ಇಂಡಿಯಾ ವಿಂಡೀಸಿಗೆ ಪ್ರವಾಸ ತೆರಳಲಿದ್ದು, ಆಗಸ್ಟ್ ಮೊದಲ ವಾರ ಕೆರಿಬಿಯನ್ ನಾಡಿನಲ್ಲಿ ಸರಣಿ ಆರಂಭಿಸಲಿದೆ.
ಜುಲೈ 14ಕ್ಕೆ ಏಕದಿನ ವಿಶ್ವಕಪ್ ಪಂದ್ಯಾವಳಿ ಮುಗಿಯಲಿದ್ದು, ಅನಂತರ ಸ್ವಲ್ಪ ದಿನಗಳ ವಿಶ್ರಾಂತಿ ಪಡೆ ಯಲಿರುವ ಭಾರತ ತಂಡ ವಿಂಡೀಸಿಗೆ ತೆರಳುತ್ತದೆ.
ಈ ಪ್ರವಾಸದ ವೇಳೆ 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳಲ್ಲಿ ಭಾರತ ತಂಡ ವೆಸ್ಟ್ ಇಂಡೀಸನ್ನು ಎದುರಿಸಲಿದೆ. ಆಗಸ್ಟ್ ಮೊದಲ ವಾರ ಆರಂಭವಾ ಗಲಿರುವ ಸರಣಿ, ಸೆಪ್ಟಂಬರ್ 4ರ ತನಕ ನಡೆಯಲಿದೆ ಎಂದು ಕ್ರಿಕೆಟ್ ವೆಬ್‌ಸೈಟ್ ವರದಿ ಮಾಡಿದೆ. ಮೇ 13ರಂದು ನಡೆಯಲಿರುವ ಕ್ರಿಕೆಟ್ ಮಂಡಳಿ ಸಭೆಯಲ್ಲಿ “ಕ್ರಿಕೆಟ್ ವೆಸ್ಟ್ ಇಂಡೀಸ್’ ಈ ಸರಣಿಯ ದಿನಾಂಕ ಹಾಗೂ ಸ್ಥಳವನ್ನು ಅಂತಿಮಗೊಳಿಸಲಿದೆ.
ಭಾರತ ತಂಡದ ಆಗಮನದಿಂದ ವೆಸ್ಟ್ ಇಂಡೀಸ್‌ನಲ್ಲಿ ನಡೆಯುವ “ಕೆರಿಬಿಯನ್ ಲೀಗ್ ಕ್ರಿಕೆಟ್ ಪಂದ್ಯಾವಳಿ’ಯನ್ನು ಮುಂದೂಡಬೇಕಾಗಿದೆ. ಮೂಲ ವೇಳಾಪಟ್ಟಿ ಪ್ರಕಾರ 7ನೇ ಸಿಪಿಎಲ್ ಆ. 21ರಿಂದ ಸೆ. 27ರ ತನಕ ನಡೆಯಬೇಕಿತ್ತು. ಈಗ ಇದು ಸೆ. 4ರಿಂದ ಅ. 12ರ ತನಕ ಸಾಗಲಿದೆ.
Ad
You seem to have an Ad Blocker on.
To continue reading, please turn it off or whitelist Udayavani.