ಒಲಿಂಪಿಕ್‌ ಅರ್ಹತಾ ಕೂಟಕ್ಕೆ ಭಾರತ ವನಿತಾ ಹಾಕಿ ತಂಡ

Team Udayavani, Jun 23, 2019, 5:42 AM IST

ಹಿರೋಶಿಮಾ: ಎಫ್ಐಎಚ್‌ ಸೀರಿಸ್‌ ಫೈನಲ್ಸ್‌ನ ಸೆಮಿಫೈನಲ್‌ನಲ್ಲಿ ಚಿಲಿ ತಂಡವನ್ನು 4-2 ಗೋಲುಗಳಿಂದ ಸೋಲಿಸಿದ ಭಾರತೀಯ ವನಿತಾ ಹಾಕಿ ತಂಡ ಟೋಕಿಯೊ ಒಲಿಂಪಿಕ್‌ ಅರ್ಹತಾ ಕೂಟದ ಅಂತಿಮ ಸುತ್ತಿನಲ್ಲಿ ಆಡುವ ಅವಕಾಶ ಪಡೆದಿದೆ.

ಈ ಗೆಲುವಿನಿಂದ ಭಾರತ ಎಫ್ಐಎಚ್‌ ಸೀರಿಸ್‌ನಲ್ಲಿ ಫೈನಲ್‌ ಹಂತಕ್ಕೇರಿತು. ರವಿವಾರ ನಡೆಯುವ ಫೈನಲ್‌ನಲ್ಲಿ ಭಾರತೀಯರು ರಶ್ಯ ಅಥವಾ ಜಪಾನ್‌ ತಂಡವನ್ನು ಎದುರಿಸಲಿದ್ದಾರೆ.

ಈ ಕೂಟದ ಅಗ್ರ ಎರಡು ತಂಡಗಳು 2020ರ ಒಲಿಂಪಿಕ್ಸ್‌ನ ಅರ್ಹತಾ ಕೂಟದ ಅಂತಿಮ ಸುತ್ತಿ ನಲ್ಲಿ ಆಡಲು ಅರ್ಹತೆ ಗಳಿಸಲಿವೆ. ಈ ಅರ್ಹತಾ ಕೂಟ ವರ್ಷಾಂತ್ಯದಲ್ಲಿ ನಡೆಯಲಿದೆ.

ಚಿಲಿ ಮೊದಲ ಗೋಲು
ಕ್ಯಾರೋಲಿನಾ ಗಾರ್ಸಿಯಾ ಮೂಲಕ ಚಿಲಿ 18ನೇ ನಿಮಿಷ ದಲ್ಲಿ ಗೋಲು ಹೊಡೆದು ಮುನ್ನಡೆ ದಾಖಲಿಸಿತು. ಆದರೆ 22ನೇ ನಿಮಿಷದಲ್ಲಿ ಗುರ್ಜೀತ್‌ ಕೌರ್‌ ಅವರಿಂದ ಪಂದ್ಯ ಸಮಬಲ ಗೊಂಡಿತು. ಮೊದಲಾರ್ಧದ ತನಕ ಇದೇ ಸ್ಥಿತಿ ಮುಂದುವರಿಯಿತು.

ಅನಂತರ ಭಾರತ 6 ನಿಮಿಷಗಳ ಅಂತರದಲ್ಲಿ 2 ಗೋಲು ಹೊಡೆದು ಮುನ್ನಡೆಯನ್ನು ಹೆಚ್ಚಿಸಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ