ಮುಂದಿನ ವರ್ಷ ಟೀಂ ಇಂಡಿಯಾ ಯಾವ ಯಾವ ಸರಣಿ ಆಡಲಿದೆ? ಇಲ್ಲಿದೆ ಫುಲ್ ಡಿಟೈಲ್ಸ್


Team Udayavani, Dec 31, 2019, 9:35 AM IST

team2020

2019ರಲ್ಲಿ ವರ್ಷವಿಡೀ ಕ್ರಿಕೆಟ್ ಆಡಿದ ಟೀಂ ಇಂಡಿಯಾ ಮುಂದಿನ ವರ್ಷವೂ ಬಿಡುವಿಲ್ಲದ ಕ್ರಿಕಟ್ ಆಡಲಿದೆ. 2019ರಲ್ಲಿ ವಿಶ್ವಕಪ್ ಎತ್ತಿ ಹಿಡಿಯದಿದ್ದರೂ ಬಹುತೇಕ ವಿಶ್ವಕ್ರಿಕೆಟ್ ನಲ್ಲಿ ಸದ್ದು ಮಾಡಿದ್ದು ವಿರಾಟ್ ಬಳಗವೇ. ಅದೇ ರೀತಿ ತನ್ನ ಗೆಲುವಿನ ನಾಗಲೋಟವನ್ನು ಮುಂದುವರಿಸಲು ಸರ್ವ ಸನ್ನದ್ಧವಾಗಿದೆ. ಹಾಗಾದರೆ 2020ರಲ್ಲಿ ಟೀ ಇಂಡಿಯಾ ಯಾವ ಸರಣಿ ಎಲ್ಲಿ ಆಡಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಲಂಕಾ ಸರಣಿ
ವರ್ಷದ ಆರಂಭದಲ್ಲಿ ವಿರಾಟ್ ಪಡೆಗೆ ಎದುರಾಗಲಿರುವುದು ಶ್ರೀಲಂಕಾ. ಮೂರು ಟಿ ಟ್ವೆಂಟಿ ಪಂದ್ಯಗಳಿಗಾಗಿ ಲಂಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಜ.5ರಿಂದ 10 ವರೆಗೆ ಈ ಮಿನಿ ಸರಣಿ ನಡೆಯಲಿದೆ.

ಆಸ್ಟ್ರೇಲಿಯಾ ಏಕದಿನ ಸರಣಿ
ಆಸ್ಟ್ರೇಲಿಯಾ ತಂಡ ಭಾರತಕ್ಕೆ ಪ್ರವಾಸ ಮಾಡಲಿದ್ದು, ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಜ.14ರಿಂದ 17ರವರೆಗೆ ನಡೆಯುವ ಈ ಸರಣಿಯ ಏಕದಿನ ಪಂದ್ಯಗಳು ಮುಂಬೈ, ರಾಜಕೋಟ್ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ.

ನ್ಯೂಜಿಲ್ಯಾಂಡ್ ಪ್ರವಾಸ
ವರ್ಷಾರಂಭದ ಎರಡು ಮಿನಿ ಸರಣಿಗಳ ನಂತರ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಲಿದೆ. ಮೊದಲು ಜ.24ರಿಂದ ಫೆ.2ರವರೆಗೆ ಐದು ಪಂದ್ಯಗಳ ಟಿ ಟ್ವೆಂಟಿ ಸರಣಿ ನಡೆಯಲಿದೆ. ನಂತರ ಫೆ.5ರಿಂದ ಫೆ.11ರವರೆಗೆ ಮೂರು ಪಂದ್ಯಗಳು ಏಕದಿನ ಸರಣಿಯನ್ನು ಕಿವೀಸ್ ನಾಡಿನಲ್ಲಿ ಆಡಲಿದೆ. ನಂತರ ಒಂದು ಅಭ್ಯಾಸ ಪಂದ್ಯ ನಡೆಯಲಿದ್ದು ಬಳಿಕ ಫೆ.21ರಿಂದ ಮಾರ್ಚ್ 4ರವರೆಗೆ ಎರಡು ಟೆಸ್ಟ್ ಪಂದ್ಯ ನಡೆಯಲಿದೆ.

ದಕ್ಷಿಣ ಆಫ್ರಿಕಾ ಸರಣಿ
ದಕ್ಷಿಣ ಆಫ್ರಿಕಾ ತಂಡ ಮಾರ್ಚ್ ನಲ್ಲಿ ಭಾರತದ ಪ್ರವಾಸ ಕೈಗೊಳ್ಳಲಿದೆ. ಮಾರ್ಚ್ 12ರಿಂದ 18ರವರೆಗೆ ಮೂರು ಪಂದ್ಯಗಳ ಏಕದಿನ ಸರಣಿ ಹರಿಣಗಳ ವಿರುದ್ದ ನಡೆಯಲಿದೆ. ಧರ್ಮಶಾಲಾ, ಲಕ್ನೋ ಮತ್ತು ಕೋಲ್ಕತ್ತಾದಲ್ಲಿ ಈ ಪಂದ್ಯಗಳು ನಡೆಯಲಿದೆ.

ಈ ಸರಣಿಯ ಬಳಿಕ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ.

ಟಿ ಟ್ವೆಂಟಿ ವಿಶ್ವಕಪ್
ಅಕ್ಟೋಬರ್ 24ರಿಂದ ಟಿ ಟ್ವೆಂಟಿ ವಿಶ್ವಕಪ್ ಆರಂಭವಾಗಲಿದೆ. ಆಸ್ಟ್ರೇಲಿಯಾದಲ್ಲಿಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ನಡೆಯಲಿದೆ. ಈ ಕೂಟದಲಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಅಫ್ಘಾನಿಸ್ಥಾನ ಮತ್ತು ಅರ್ಹತೆ ಸುತ್ತಿನಿಂದ ಅರ್ಹತೆ ಪಡೆದ ಎರಡು ತಂಡಗಳೊಂದಿಗೆ ಸೆಣಸಾಡಲಿವೆ.

ಇವು ಈವರೆಗೆ ನಿಗಧಿಯಾಗಿರುವ ವೇಳಾಪಟ್ಟಿ. ಇನ್ನಷ್ಟು ಸರಣಿಗಳು ಮುಂದಿನ ದಿನಗಳಲ್ಲಿ ಅಂತಿಮವಾಗಬಹುದು.

ಟಾಪ್ ನ್ಯೂಸ್

Sullia ಕಾಲು ಜಾರಿ ಕೆರೆಗೆ ಬಿದ್ದು ವೃದ್ಧೆ ಸಾವು

Sullia ಕಾಲು ಜಾರಿ ಕೆರೆಗೆ ಬಿದ್ದು ವೃದ್ಧೆ ಸಾವು

1-spain

Euro Cup ಫುಟ್‌ಬಾಲ್‌ : ಸ್ಪೇನ್‌ಗೆ 4ನೇ ಪ್ರಶಸ್ತಿ

Fraud ಅಡಿಕೆ ವ್ಯಾಪಾರಿಗೆ 8.98 ಲ.ರೂ. ವಂಚನೆ

Fraud ಅಡಿಕೆ ವ್ಯಾಪಾರಿಗೆ 8.98 ಲ.ರೂ. ವಂಚನೆ

1-foot

Copa America ಫುಟ್‌ಬಾಲ್‌ : ಆರ್ಜೆಂಟೀನಾ 16 ಪ್ರಶಸ್ತಿಗಳ ದಾಖಲೆ

Road Mishap ಕಾರು ಢಿಕ್ಕಿ: ಬೈಕ್‌ ಸವಾರನಿಗೆ ಗಾಯ

Road Mishap ಕಾರು ಢಿಕ್ಕಿ: ಬೈಕ್‌ ಸವಾರನಿಗೆ ಗಾಯ

Uppinangady ವಿದ್ಯುತ್‌ ಆಘಾತ: ಇಳಂತಿಲದ ವ್ಯಕ್ತಿ ಸಾವು

Uppinangady ವಿದ್ಯುತ್‌ ಆಘಾತ: ಇಳಂತಿಲದ ವ್ಯಕ್ತಿ ಸಾವು

Kasaragod: 111 ವರ್ಷದ ವೃದ್ಧೆ ನಿಧನ

Kasaragod: 111 ವರ್ಷದ ವೃದ್ಧೆ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-spain

Euro Cup ಫುಟ್‌ಬಾಲ್‌ : ಸ್ಪೇನ್‌ಗೆ 4ನೇ ಪ್ರಶಸ್ತಿ

1-foot

Copa America ಫುಟ್‌ಬಾಲ್‌ : ಆರ್ಜೆಂಟೀನಾ 16 ಪ್ರಶಸ್ತಿಗಳ ದಾಖಲೆ

1-urugwe

Copa America ಫುಟ್‌ಬಾಲ್‌: ಇಂದು ಆರ್ಜೆಂಟೀನಾ-ಕೊಲಂಬಿಯ ಫೈನಲ್‌

1-swamiji

Olympics ಆಟಗಾರ ಈಗ ಸ್ವಾಮೀಜಿ!

1-kik

Australia Tour; ವನಿತಾ ‘ಎ’ ತಂಡಕ್ಕೆ ಮಿನ್ನು ಮಣಿ ನಾಯಕಿ

MUST WATCH

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

ಹೊಸ ಸೇರ್ಪಡೆ

Sullia ಕಾಲು ಜಾರಿ ಕೆರೆಗೆ ಬಿದ್ದು ವೃದ್ಧೆ ಸಾವು

Sullia ಕಾಲು ಜಾರಿ ಕೆರೆಗೆ ಬಿದ್ದು ವೃದ್ಧೆ ಸಾವು

1-spain

Euro Cup ಫುಟ್‌ಬಾಲ್‌ : ಸ್ಪೇನ್‌ಗೆ 4ನೇ ಪ್ರಶಸ್ತಿ

Fraud ಅಡಿಕೆ ವ್ಯಾಪಾರಿಗೆ 8.98 ಲ.ರೂ. ವಂಚನೆ

Fraud ಅಡಿಕೆ ವ್ಯಾಪಾರಿಗೆ 8.98 ಲ.ರೂ. ವಂಚನೆ

1-foot

Copa America ಫುಟ್‌ಬಾಲ್‌ : ಆರ್ಜೆಂಟೀನಾ 16 ಪ್ರಶಸ್ತಿಗಳ ದಾಖಲೆ

Road Mishap ಕಾರು ಢಿಕ್ಕಿ: ಬೈಕ್‌ ಸವಾರನಿಗೆ ಗಾಯ

Road Mishap ಕಾರು ಢಿಕ್ಕಿ: ಬೈಕ್‌ ಸವಾರನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.