
ಹಾಕಿ: ಗೆಲ್ಲಲೇಬೇಕಾದ ಪಂದ್ಯದಲ್ಲಿ ಗೆದ್ದು ಬೀಗಿದ ವನಿತೆಯರು, ಒಲಿಂಪಿಕ್ ಕನಸು ಜೀವಂತ
Team Udayavani, Jul 30, 2021, 12:54 PM IST

ಟೋಕಿಯೊ: ಐರ್ಲೆಂಡ್ ವಿರುದ್ಧ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಗೆದ್ದ ಭಾರತದ ವನಿತೆಯರ ಹಾಕಿ ತಂಡ ಒಲಿಂಪಿಕ್ಸ್ ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶದ ಕನಸು ಜೀವಂತವಾಗಿರಿಸಿಕೊಂಡಿದೆ. ನವನೀತ್ ಕೌರ್ ಏಕೈಕ ಗೋಲಿನ ನೆರವಿನಿಂದ ಭಾರತ ವನಿತಯರ ತಂಡ 1-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದೆ.
‘ಎ’ ಗುಂಪಿನಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಸತತ ಸೋಲುಗಳನ್ನು ಅನುಭವಿಸಿರುವ ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವೆನಿಸಿತ್ತು. ಕೊನೆಯ ಹಂತದ ವರೆಗೂ ಪ್ರಯತ್ನ ಫಲಿಸಲಿಲ್ಲ. ಆದರೆ 57ನೇ ನಿಮಿಷದಲ್ಲಿ ನವನೀತ್ ಕೌರ್ ಗೋಲು ಬಾರಿಸಿ ಮುನ್ನಡೆ ಒದಗಿಸಿದರು.
ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ಸ್: ಪದಕದ ಭರವಸೆ ಮೂಡಿಸಿದ ದೀಪಿಕಾ ಕುಮಾರಿಗೆ ಸೋಲು!
ಈ ಗೆಲುವಿನೊಂದಿಗೆ ಮೂರು ಅಂಕ ಸಂಪಾದಿಸಿರುವ ಭಾರತ 5ನೇ ಸ್ಥಾನಕ್ಕೇರಿದೆ. ಅಷ್ಟೇ ಅಂಕಗಳನ್ನು ಹೊಂದಿರುವ ಐರ್ಲೆಂಡ್ ಗೋಲುಗಳ ಲೆಕ್ಕಾಚಾರದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಶನಿವಾರ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಗೆಲುವಿನ ಜೊತೆ ಗೋಲ್ ಸರಾಸರಿ ಉತ್ತಮವಾಗಿರಬೇಕು. ಇದಲ್ಲದೆ ಇಂಗ್ಲೆಂಡ್ ತಂಡವು ಐರ್ಲೆಂಡ್ ತಂಡವನ್ನು ಸೋಲಿಸಿದಲ್ಲಿ ಮಾತ್ರ ಭಾರತ ಮುಂದಿನ ಸುತ್ತಿಗೆ ಅರ್ಹತೆ ಪಡೆಯಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಹುಣಸೂರು: ಬಿರುಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬಗಳು… ಸಿಡಿಲಿಗೆ 3 ಜಾನುವಾರು ಬಲಿ

ರಾಮನಗರದಲ್ಲಿ ವರುಣನ ಅಬ್ಬರ… ಸಿಡಿಲು ಬಡಿದು 4ಮೇಕೆ ಸಾವು, ಮೂರು ಕುರಿಗಾಹಿಗಳಿಗೆ ಗಾಯ

Chamarajanagar; ಜೋಡಿ ರಸ್ತೆ ದುರವಸ್ಥೆ; ದ್ವಿಚಕ್ರ ವಾಹನ ಸವಾರರ ಪರದಾಟ

Bhatkal: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಆದೇಶ ನೀಡುವಂತೆ ಮನವಿ

IPL: ಧೋನಿಯ ಬಗ್ಗೆ ಜಡೇಜಾ ಟ್ವೀಟ್… ʻಮಾಹಿ ಭಾಯಿ…ನಿಮಗಾಗಿ..ʼ- ಏನಿದು?