ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಜತೆ ಜೈಶಂಕರ್ ಚರ್ಚೆ
Team Udayavani, Oct 11, 2022, 10:22 PM IST
ಸಿಡ್ನಿ: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಂಗಳವಾರ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಅವರೊಂದಿಗೆ ಸುದೀರ್ಘ ಕ್ರಿಕೆಟ್ ಸಂಭಾಷಣೆ ನಡೆಸಿ ಸಂಭ್ರಮ ಹಂಚಿಕೊಂಡರು.
ಆಸ್ಟ್ರೇಲಿಯಕ್ಕೆ ಅಧಿಕೃತ ಭೇಟಿ ನೀಡಿರುವ ಜೈಶಂಕರ್ ಅವರು ಸಿಡ್ನಿ ಕ್ರಿಕೆಟ್ ಮೈದಾನಕ್ಕೆ ಭೇಟಿ ನೀಡಿದರು.
ಭಾರತದೊಂದಿಗೆ ಉತ್ತಮವಾದ ಸಂಪರ್ಕ ಹೊಂದಿರುವ ವಿಶ್ವಕಪ್ ವಿಜೇತ ನಾಯಕ ವಾ ಅವರು ಎಸ್ಸಿಜಿ ಕ್ರೀಡಾಂಗಣದ ಸುತ್ತ ಜೈಶಂಕರ್ ಅವರನ್ನು ಕರೆದೊಯ್ದರಲ್ಲದೇ ಕ್ರಿಕೆಟ್ ಆಟದ ಬಗ್ಗೆ ಬಹಳಷ್ಟು ವಿಷಯವನ್ನು ಚರ್ಚಿಸಿದರು.